ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಕೈ-ಕೈ ಹಿಡಿದುಕೊಂಡು ಓಡಾಡುತ್ತಿರುವ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಸೈಲೆಂಟ್ ಅಗಿ ನಿಶ್ಚಿತಾರ್ಥ ಮಾಡಿಕೊಂಡರು.
27
ಪರ್ಸನಲ್ ಲೈಫ್‌ನ ತುಂಬಾನೇ ಪ್ರೈವೇಟ್ ಆಗಿಡುತ್ತಿರುವ ಈ ಜೋಡಿ ತಮ್ಮ ಪ್ರೀತಿಯ ಶ್ವಾನದ ಮೂಲಕ ಲವ್ ಸ್ಟೋರಿಯನ್ನು ಹೇಳಿ ಇನ್‌ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದರು.
37
'ಸಿಂಹ ಮತ್ತು ನಾನು 6 ವರ್ಷಗಳಿಂದ ಸ್ನೇಹಿತರು. ಒಬ್ಬರನ್ನೊಬ್ಬರು ಮೆಚ್ಚಿಗೆ ಮತ್ತು ಗೌರವವಿದೆ. ನಮ್ಮ ಲವ್ ಸ್ಟೋರಿ ಬಗ್ಗೆ ಶೀಘ್ರದಲ್ಲಿ ಮಾಧ್ಯಮ ಮಿತ್ರರ ಜೊತೆ ಮಾತನಾಡುತ್ತೀವಿ. ಸಿಂಹ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ ಮುಗಿಸಿದ ನಂತರ ನಿಮ್ಮ ಮುಂದೆ ಇರುತ್ತೇವೆ' ಎಂದು ಹರಿಪ್ರಿಯಾ ಹೇಳಿದ್ದಾರೆ.
47
'ಸಿಂಹ ಮತ್ತು ನಾನು materialistic ಜನರಲ್ಲ. ಅರ್ಥಪೂರ್ಣವಾದ ಭಾವನೆಗೆ ಬೆಲೆ ಕೊಡುವವರು. ಗಿಫ್ಟ್ ಕೊಡುವ ವಿಚಾರದಲ್ಲೂ ನಾವಿಬ್ಬರೂ ಹೀಗೆ' ಎಂದು ಕ್ರಿಸ್ಟಲ್ ಹೆಸರಿನ ಶ್ವಾನವನ್ನು ಸಿಂಹ ಪ್ರಿಯಾಗೆ ಗಿಫ್ಟ್ ಮಾಡಿದ್ದಾರೆ.
57
ಶ್ವಾನದ ಹೃದಯ ಭಾಗದಲ್ಲಿ ಹಾರ್ಟ್ ಸಿಂಬಲ್ ಇದೆ. ಕ್ರಿಸ್ಟಲ್ ಬೆಳೆಯುತ್ತಿದ್ದಂತೆ ಹೃದಯದ ಚಿನ್ನೆ ಬೆಳೆಯುತ್ತಿದೆ ಹಾಗೆ ನಮ್ಮ ಪ್ರೀತಿಯೂ ಬೆಳೆಯುತ್ತಿದೆ ಎಂದು ಪ್ರಿಯಾ ಹೇಳಿದ್ದರು.
67
ಹರಿಪ್ರಿಯಾ ಲಕ್ಕಿ ಮತಾತು ಹ್ಯಾಪ್ ಎರಡು ನಾಯಿಗಳನ್ನು ಸಾಕಿದ್ದರು. ಆದರೆ ಲಕ್ಕಿ ನಾಯಿ ಸತ್ತುಹೋದ ಬಳಿಕ ಹ್ಯಾಪಿ ಒಂಟಿಯಾಗಿತ್ತು. ಲಕ್ಕಿಯನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದ ಹರಿಪ್ರಿಯಾ ಮತ್ತೆ ಹಿಂದಿರುಗಲಿ ಎಂದು ಅನೇಕ ಬಾರಿ ಕನಸು ಕಂಡಿದ್ದರು. ಆಗ ವಸಿಷ್ಠ ಸಿಂಹ ಕ್ರಿಸ್ಟಲ್ ಅನ್ನು ಗಿಫ್ಟ್ ಆಗಿ ನೀಡಿದರು. ಅಲ್ಲಿಂದ ಪ್ರಾರಂಭವಾಯ್ತಿ ಇಬ್ಬರ ಪ್ರೀತಿ.
77
ಹರಿಪ್ರಿಯಾ ಪೋಸ್ಟ್‌ಗೆ ಅಭಿಮಾನಿಗಳಿಂದ ಮೆಚ್ಚುಗೆಯ ಕಾಮೆಂಟ್ ಹರಿದುಬರುತ್ತಿದೆ. ನಾಯಿಯಲ್ಲಿ ಅರಳಿದ ಪ್ರೀತಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ಸರಳವಾಗಿ ಲವ್ ಸ್ಟೋರಿ ವಿವರಸಿದ್ದೀರಾ ಎಂದು ಹೇಳುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.