ಸ್ತನದ ಕ್ಯಾನ್ಸರ್‌: 16 ಕೀಮೋಥೆರಪಿ ನಂತರ ತಲೆ ಕೂದಲು ಬೆಳೆಯುತ್ತಿದೆ ಎಂದ ನಟಿ ಹಂಸ ನಂದಿನಿ

Published : Mar 13, 2023, 11:38 AM IST

ಸತತ ಹೋರಾಟದಿಂದ ಕ್ಯಾನ್ಸರ್‌ ಗೆದ್ದ ನಟಿ ಹಂಸ ನಂದಿನಿ. 16 ಕೀಮೋಥೆರಪಿ ನಂತರ ತಲೆ ಕೂದಲು ಸುಂದರವಾಗಿ ಬೆಳೆಯುತ್ತಿರುವುದನ್ನು ಜನರಿಗೆ ತೋರಿಸಿದ್ದಾರೆ.  

PREV
17
ಸ್ತನದ ಕ್ಯಾನ್ಸರ್‌: 16 ಕೀಮೋಥೆರಪಿ ನಂತರ ತಲೆ ಕೂದಲು ಬೆಳೆಯುತ್ತಿದೆ ಎಂದ ನಟಿ ಹಂಸ ನಂದಿನಿ

ಮೋಹಿನಿ 9886788888 ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ ತೆಲುಗು ನಟಿ ಹಂಸ ನಂದಿನಿ 2021ರಲ್ಲಿ ಸ್ತನದ ಕ್ಯಾನ್ಸರ್‌ ಇರುವುದಾಗಿ ತಿಳಿಯಿತ್ತಂತೆ. ಕೀಮೋಥೆರಪಿ ಮುಗಿಸಿಕೊಂಡು ತಲೆ ಕೂದಲು ಶೇವ್ ಮಾಡಿದ್ದರು. 

27

ಈಗ ತಮ್ಮ ತಲೆ ಕೂದಲು ಬೆಳೆಯುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ. ಒಂದು ವರ್ಷದ ನಂತರ ಜೀವನದಲ್ಲಿ ಏನೆಲ್ಲಾ ಬದಲಾವಣೆಗಳಾಗಿದೆ ಎಂದು ತಿಳಿಸಿದ್ದಾರೆ. 

37

ಸ್ತನದ ಕ್ಯಾನ್ಸರ್‌ ಗೆದ್ದ ನಂತರ ಹಂಸ ನಂದಿನಿ ತಮ್ಮ 38ನೇ ಹುಟ್ಟುಹಬ್ಬದ ದಿನ ಸಿನಿಮಾ ಚಿತ್ರೀಕರಣಕ್ಕೆ ಮರುಳಿದ್ದಾರೆ. ಹಂಸ ಧೈರ್ಯವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.

47

 'ಒಂದು  ವರ್ಷದಲ್ಲಿ ತುಂಬಾ ನಡೆದಿದೆ ..ಈಗ ನನಗೆ ತುಂಬಾ ಖುಷಿಯಾಗುತ್ತಿದೆ' ಎಂದು ಹಂಸ ನಂದಿನಿ ಬರೆದುಕೊಂಡಿದ್ದಾರೆ. ನೋಡಲು ಇಂದಿರಾ ಗಾಂಧಿ ರೀತಿ ಇದ್ದೀರಿ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. 

57

ಕೀಮೋ ಗೆದ್ದ ಕ್ಷಣವನ್ನು ಸಂಭ್ರಮಿಸಿದ್ದರು. 16 ಕೀಮೋಥೆರಪಿ ಮುಗಿಸಿ ಅಫೀಶಿಯಲ್ ಕೀಮೋ ಸರ್ವೈವರ್‌ ಆಗಿರುವೆ ಆದರೆ ಇಲ್ಲಿಗೆ ಮುಗಿದಿಲ್ಲ ಮತ್ತೊಂದು ದೊಡ್ಡ ಯುದ್ಧ ಎದುರಿಸುವ ಸಮಯ ಬಂದಿದೆ ಎಂದು ಹೇಳಿಕೊಂಡಿದ್ದರು.

67

 'ನನಗೆ ಮತ್ತೊಂದು ಸ್ತನವೂ ಶೇ.70 ಕ್ಯಾನ್ಸರ್ ಆಗುವ ಸಾಧ್ಯತೆಗಳಿರುತ್ತದೆ. ಅಂಡಾಶಯದ ಕ್ಯಾನ್ಸರ್ ಆಗುವ ಸಾಧ್ಯತೆ ಶೇ.45 ಇದೆ ಎಂದರು. ಇದರಿಂದ ಸಂಪೂರ್ಣವಾಗಿ ಹೊರ ಬರಲು ಏಕೈಕ ಮಾರ್ಗವೆಂದರೆ ಅಧಿಕ ರೋಗ ನಿರೋಧಕ ಶಸ್ತ್ರ ಚಿಕಿತ್ಸೆ ಒಳಗಾಗಬೇಕಿದೆ' ಎಂದಿದ್ದರು.

77

ಕ್ಯಾನ್ಸರ್ ಗೆದ್ದ ನಂತರ ಸಿನಿಮಾ ಪ್ರಾಜೆಕ್ಟ್‌ ಒಪ್ಪಿಕೊಳ್ಳುವುದು ಹಾಗೂ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ ಹಂಸ. ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಗೆ ಪ್ರತಿಯೊಂದನ್ನು ಅಪ್ಲೇಟ್ ಮಾಡುತ್ತಿದ್ದಾರೆ. 

Read more Photos on
click me!

Recommended Stories