ಕಾಂತಾರ ಸಿನಿಮಾ ಸೂಪರ್ ಹಿಟ್ ಆಗುತ್ತಿದ್ದಂತೆ ಸಿಂಪಲ್ ಡೈರೆಕ್ಟರ್ ರಿಷಬ್ ಶೆಟ್ಟಿ ಡಿವೈನ್ ಸ್ಟಾರ್ ಕಿರೀಟ ಪಡೆದುಕೊಂಡರು. ವೃತ್ತಿ ಮತ್ತು ವಯಕ್ತಿಕ ಬದುಕಿನಲ್ಲಿ ಹ್ಯಾಪಿಯಾಗಿದ್ದಾರೆ.
29
ಈಗ ರಿಷಬ್ ಶೆಟ್ಟಿ ಪುತ್ರಿ ರಾಧ್ಯಾ ಮಾರ್ಚ್ 6ರಂದು ಮೊದಲ ವರ್ಷಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಐಷಾರಾಮಿ ರೆಸಾರ್ಟ್‌ನಲ್ಲಿ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಲಾಗಿದೆ.
39
ರಮ್ಯಾ, ಅಮೂಲ್ಯ, ಗಣೇಶ್, ರವಿಚಂದ್ರನ್, ವಿಜಯ್ ಕಿರಗಂದೂರು, ಡಿಕೆ ಶಿವಕುಮಾರ್, ಅಶ್ವತ್ ನಾರಾಯಣ್, ರಾಕ್‌ಲೈನ್ ವೆಂಕಟೇಶ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು.
49
ಕೇಕ್ ಸ್ಮ್ಯಾಶ್ ಮತ್ತು ಅಣ್ಣ ರಣ್ವಿತ್ ಜೊತೆ ರಾಧ್ಯಾಳ ಫೋಟೋಶೂಟ್ ಮಾಡಲಾಗಿದೆ. ವಿಡಿಯೋ ಹಂಚಿಕೊಂಡ ಪ್ರಗತಿ 'ನಿಮ್ಮಲ್ಲರ ಪ್ರೀತಿ ಮತ್ತು ಆಶ್ರೀವಾರ್ದ ಸದಾ ಇರಲಿ. ರಾಧ್ಯಾಳ ಮೊದಲ ಹುಟ್ಟುಹಬ್ಬ' ಎಂದು ಬರೆದುಕೊಂಡಿದ್ದರು.
59
'ನಮ್ಮ ಸಂತೋಷಕ್ಕೆ ಸಾಕ್ಷಿಯಾಗಿ, ರಾಧ್ಯಳನ್ನು ಹರಸಿದ ನಿಮ್ಮೆಲ್ಲರಿಗೂ ಮನಪೂರ್ವಕ ಧನ್ಯವಾದಗಳು' ಎಂದು ಸಂಭ್ರಮದಲ್ಲಿ ಭಾಗಿಯಾಗಿರುವವರ ಫೋಟೋ ಅಪ್ಲೋಡ್ ಮಾಡಿದ್ದಾರೆ.
69
ರಿಷಬ್ ಮತ್ತು ಪತ್ನಿ ಪ್ರಗತಿ ಹಾಗೂ ಪುತ್ರ ರಣ್ವಿತ್ ಬ್ಲ್ಯಾಕ್ ಆಂಡ್ ಬ್ಲ್ಯಾಕ್ ಔಟ್‌ಫಿಟ್‌ನಲ್ಲಿ ಮಿಂಚಿದ್ದಾರೆ. ರಾಧ್ಯಾ ಮಾತ್ರ ನೇರಳೆ ಬಣ್ಣದ ಡ್ರೆಸ್ ಧರಿಸಿದ್ದಾಳೆ.
79
ರಾಧ್ಯಾ ತುಂಬಾ ವಿಭಿನ್ನವಾಗಿರುವ ಹೆಸರು. Meaning of Radhya is worshipped. ಚಂದ್ರನ ಚಿಹ್ನೆ ಆಧಾರಿತ ವೈದಿಕ ಜ್ಯೋತಿಷ್ಯದಲ್ಲಿ ರಾಧುವಾ ಎಂಬ ಹೆಸರಿನ ವ್ಯಕ್ತಿಯು ಎಲ್ಲವನ್ನೂ ಸುಲಭವಾಗಿ ತೆಗೆದುಕೊಳ್ಳುವ ಅಂತರ್ಗತ ಗುಣವನ್ನು ಹೊಂದಿರುತ್ತಾರೆ.
89
ರಾಧ್ಯಾ ಎನ್ನುವ ವ್ಯಕ್ತಿಗಳನ್ನು ಜನರು ಸುಲಭವಾಗಿ ಪ್ರೀತಿಸುತ್ತಾರೆ ಮತ್ತು ಇತರ ಜನರಿಂದ ಆದ್ಯತೆ ಪಡೆಯುತ್ತಾರೆ. ಈ ನಿರ್ದಿಷ್ಟ ಜನರು ತಮ್ಮ ಗುರಿಯಿಂದ ದೂರ ಸರಿಯಲು ಇಷ್ಟಪಡುವುದಿಲ್ಲ.
99
ಕಾಂತಾರ ನಂತರ ರಿಷಬ್ ಕಾಂತಾರ ಭಾಗ 2 ಮಾಡುವ ಮನಸ್ಸು ಮಾಡಿದ್ದಾರೆ. ಈಗಾಗಲೆ ಕೊರಗಜ್ಜನ ಸನ್ನಿಧಾನಕ್ಕೆ ಭೇಟಿ ನೀಡಿ ಅರಿಕೆ ಸಲ್ಲಿಸಿ ಎರಡನೇ ಭಾಗಕ್ಕೆ ಮನವಿ ಪಡೆದುಕೊಂಡು ಕಥೆ ಕೆಲಸ ಶುರು ಮಾಡಿದ್ದಾರೆ.