ಕುಳಿತಿದ್ರೂ ಅದು ಬೆಂಕಿನೇ ಅಂತೀರಾ?.. ಚೈತ್ರಾ ಆಚಾರ್ 'ಜೀನ್ಸ್‌-ವೈಟ್' ಲುಕ್‌ಗೆ ಹಾರ್ಟ್‌ಬೀಟ್ ಕಂಟ್ರೋಲ್ ತಪ್ತಿದ್ಯಾ?

Published : Jul 12, 2025, 08:03 PM IST

ಟೋಬಿ ನಟಿ ಚೈತ್ರಾ ಆಚಾರ್‌ ಸಿನಿರಂಗದ ಜತೆ ಸಾಮಾಜಿಕ ಜಾಲತಾಣದಲ್ಲೂ ಸಖತ್‌ ಆ್ಯಕ್ಟಿವ್ ಆಗಿರುತ್ತಾರೆ. ಆಗಾಗ ಹೊಸ ಹೊಸ ಫೋಟೋಸ್‌ಗಳನ್ನು ಹಂಚಿಕೊಂಡು ಸಿಕ್ಕಾಪಟ್ಟೆ ಸುದ್ದಿಯಾಗುತ್ತಾರೆ.

PREV
17

ಸ್ಯಾಂಡಲ್‌ವುಡ್‌ನ ಚೈತ್ರಾ ಆಚಾರ್ ಸಖತ್ ಮನಮೋಹಕರಾಗಿದ್ದಾರೆ. ಯಾರೂ ನಿರೀಕ್ಷೆ ಮಾಡದ ರೀತಿಯಲ್ಲಿ ಹೊಸ ಡ್ರೆಸ್‌ನಲ್ಲಿ ಪೋಸ್ ಕೊಟ್ಟಿದ್ದಾರೆ. ಸ್ವತಃ ಚೈತ್ರಾ ಹಂಚಿಕೊಂಡ ಈ ಫೋಟೋಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ.

27

ನಟಿ ಚೈತ್ರಾ ಆಚಾರ್‌ ಸದಾ ಒಂದಲ್ಲಾ ಒಂದು ಫೋಟೋಶೂಟ್‌ನಲ್ಲಿ ಸದ್ದು ಮಾಡುತ್ತಲೇ ಇದ್ದಾರೆ. ಟೀಕೆ ಮಾಡೋರಿಗೆ ಡೋಂಟ್‌ ಕೇರ್‌ ಅನ್ನುತ್ತಲೇ ಹೊಸ ಹೊಸ ಅವತಾರದಲ್ಲಿ ಕಾಣಿಸಿಕೊಳ್ತಿದ್ದಾರೆ.

37

ಇದೀಗ ಬಿಳಿ ಬಣ್ಣದ ಬನಿಯನ್‌ ಹಾಗೂ ಬ್ರೌನ್‌ ಜೀನ್ಸ್‌ ಉಡುಗೆ ತೊಟ್ಟು ಬಿಳಿ ಒಳ ಉಡುಪು ಕಾಣುವಂತ ಫೋಟೋಗಳನ್ನ ತಮ್ಮ ಸಾಮಾಜಿಕ ಖಾತೆಯಲ್ಲಿ ಹಂಚಿಕೊಂಡಿದ್ದು, ನೋಡುಗರ ಹೃದಯಕ್ಕೆ ಬೆಂಕಿಯಿಟ್ಟಿದ್ದಾರೆ.

47

ಪ್ರತಿ ಫೋಟೋಗಳಲ್ಲೂ ಚೈತ್ರಾ ಒಂದಕ್ಕಿಂತ ಒಂದು ಮನಮೋಹಕ ಅನ್ನುವ ಹಾಗೇ ಎಕ್ಸ್‌ಪ್ರೆಷನ್ ಕೊಟ್ಟಿದ್ದಾರೆ. ಚೈತ್ರಾ ಹೊಸ ಅವತಾರಕ್ಕೆ ಫೈರ್ ಅಲರ್ಟ್ ಅಂತ ನೆಟ್ಟಿಗರೊಬ್ಬರು ಕಾಮೆಂಟ್‌ ಮಾಡಿದ್ದಾರೆ.

57

ಸದ್ಯ ಚೈತ್ರಾ ಆಚಾರ್‌ ತಮಿಳು ನಟ ಸಿದ್ಧಾರ್ಥ್‌, ಶರತ್‌ ಕುಮಾರ್‌ ಅವರೊಂದಿಗೆ '3 ಬಿಎಚ್‌ಕೆ' ಫ್ಯಾಮಿಲಿ ಓರಿಯಂಟೆಡ್‌ ಸಿನಿಮಾದಲ್ಲಿ ಬ್ಯುಸಿ ಆಗಿದ್ದು, ಕನ್ನಡದಲ್ಲಿ 'ಮಾರ್ನಮಿ' ಎಂಬ ಸಿನಿಮಾ ಮಾಡಿದ್ದಾರೆ.

67

ಸಪ್ತಸಾಗರದಾಚೆ ಎಲ್ಲೋ, ಟೋಬಿ ಸಿನಿಮಾದಲ್ಲಿ ನಟಿಸಿದ ಮೇಲೆ ಚೈತ್ರಾ ಆಚಾರ್‌ಗೆ ಬೇಡಿಕೆ ಜಾಸ್ತಿಯಾಗಿದೆ. ಇನ್ನು ರಕ್ಷಿತ್ ಶೆಟ್ಟಿ ಮತ್ತು ರಾಜ್ ಬಿ ಶೆಟ್ಟಿಗೆ ನಾಯಕಿಯಾಗಿ ಅವರು ಅದ್ಭುತವಾಗಿ ನಟಿಸಿದ್ದಾರೆ.

77

2019ರಲ್ಲಿ ಮಹಿರಾ ಸಿನಿಮಾದ ಮೂಲಕ ಚೈತ್ರಾ ಆಚಾರ್ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ಇದಾದ ಬಳಿಕ ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸುವ ಮೂಲಕ ಕನ್ನಡಿಗರ ಮನಸ್ಸಿನಲ್ಲಿ ವಿಭಿನ್ನ ಪಾತ್ರಗಳನ್ನು ಮಾಡುವಂತಹ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

Read more Photos on
click me!

Recommended Stories