ರಾಜ್ ಕುಟುಂಬದ ಮೂರನೇ ತಲೆಮಾರಿಗೆ ಆಶೀರ್ವದಿಸಿದ ಸಿಎಂ: ಎಕ್ಕ ಬಗ್ಗೆ ಸಿದ್ದರಾಮಯ್ಯ ಹೇಳಿದಿಷ್ಟು..

Published : Jul 11, 2025, 11:39 PM IST

ರಾಜಣ್ಣನ ಕುಟುಂಬದ ಮೂರನೇ ತಲೆಮಾರು ಅದೇ ಹಾದಿಯಲ್ಲಿ ಹೆಜ್ಜೆಹಾಕಲು ಆರಂಭಿಸಿದ್ದು ಕಂಡು ಖುಷಿಯಾಯಿತು. ಚಿತ್ರ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದೆ ಎಂದು ಸಿಎಂ ಸಿದ್ದರಾಮಯ್ಯ ಶುಭ ಹಾರೈಸಿದ್ದಾರೆ.

PREV
16

ಸ್ಯಾಂಡಲ್‌ವುಡ್‌ನ ಯುವ ರಾಜ್​ಕುಮಾರ್ ನಟನೆಯ ‘ಎಕ್ಕ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಜುಲೈ 11ರಂದು ಈ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ. ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರನ್ನು ಚಿತ್ರತಂಡದವರು ಭೇಟಿ ಮಾಡಿದ್ದಾರೆ.

26

ನಟ ಯುವ ರಾಜ್​ಕುಮಾರ್ ಸೇರಿದಂತೆ ‘ಎಕ್ಕ’ ಚಿತ್ರದ ನಿರ್ಮಾಪಕರಾದ ಕಾರ್ತಿಕ್ ಗೌಡ, ಜಯಣ್ಣ, ಯೋಗಿ ಜಿ. ರಾಜ್ ಮುಂತಾದವರು ಕೂಡ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ. ಕಾವೇರಿ ನಿವಾಸದಲ್ಲಿ ಈ ಭೇಟಿ ನಡೆದಿದೆ.

36

ಈ ವೇಳೆ ‘ಎಕ್ಕ’ ಚಿತ್ರತಂಡಕ್ಕೆ ಸಿಎಂ ಸಿದ್ದರಾಮಯ್ಯ ಅವರು ಶುಭ ಕೋರಿದ್ದಾರೆ. ಯುವ ರಾಜ್​ಕುಮಾರ್ ಅವರು ನಟಿಸಿರುವ ಎರಡನೇ ಸಿನಿಮಾ ಜುಲೈ 18ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

46

ನಟ ಯುವ ರಾಜ್‌ಕುಮಾರ್ ಅವರು ಇಂದು ಕಾವೇರಿ ನಿವಾಸದಲ್ಲಿ ನನ್ನನ್ನು ಭೇಟಿಯಾಗಿ, ಜುಲೈ 18 ರಂದು ತೆರೆ ಕಾಣಲಿರುವ ತಾವು ನಾಯಕನಟನಾಗಿ ಅಭಿನಯಿಸಿರುವ "ಎಕ್ಕ" ಸಿನಿಮಾ ಪ್ರೀಮಿಯರ್ ಶೋ ವೀಕ್ಷಣೆಗೆ ಆಗಮಿಸುವಂತೆ ಪ್ರೀತಿಯಿಂದ ಆಹ್ವಾನಿಸಿದರು.

56

ರಾಜ್‌ಕುಮಾರ್ ಅವರ ಕುಟುಂಬದ ಜೊತೆಗಿನ ನನ್ನ ಒಡನಾಟ ನಾಲ್ಕೈದು ದಶಕಗಳಷ್ಟು ಹಳೆಯದು. ರಾಘವೇಂದ್ರ ರಾಜ್‌ಕುಮಾರ್, ಶಿವಣ್ಣ ಮತ್ತು ಅಪ್ಪು ತಮ್ಮ ತಂದೆಯಂತೆ ಅಭಿನಯದಲ್ಲಿ ಮಾತ್ರವಲ್ಲ, ಸಾಮಾಜಿಕ‌ ಕಳಕಳಿಯಲ್ಲೂ ಎತ್ತಿದಕೈ.

66

ರಾಜಣ್ಣನ ಕುಟುಂಬದ ಮೂರನೇ ತಲೆಮಾರು ಅದೇ ಹಾದಿಯಲ್ಲಿ ಹೆಜ್ಜೆಹಾಕಲು ಆರಂಭಿಸಿದ್ದು ಕಂಡು ಖುಷಿಯಾಯಿತು. ಚಿತ್ರ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದೆ ಎಂದು ಸಿಎಂ ಸಿದ್ದರಾಮಯ್ಯ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories