ನಟಿ ಆಶಿಕಾ ರಂಗನಾಥ್ ಅಕ್ಕ ಅನುಷಾ ಮದುವೆ ಸಂಭ್ರಮ ಹೇಗಿತ್ತು ನೋಡಿ

First Published | Jan 25, 2024, 4:53 PM IST

ಕನ್ನಡ, ತೆಲುಗು ಚಿತ್ರರಂಗದಲ್ಲಿ ಮಿಂಚುತ್ತಿರುವ ಮಿಲ್ಕಿ ಬ್ಯೂಟಿ, ಚುಟು ಚುಟು ಬೆಡಗಿ ಆಶಿಕಾ ರಂಗನಾಥ್ ಅಕ್ಕ ಅನುಷಾ ರಂಗನಾಥ್ ಮದುವೆ ಸಂಭ್ರಮದ ಕ್ಷಣಗಳು ಹೇಗಿತ್ತು ನೋಡಿ. 
 

ಸ್ಯಾಂಡಲ್ ವುಡ್ ಮಿಲ್ಕಿ ಬ್ಯೂಟಿ ಆಶಿಕಾ ರಂಗನಾಥ್ (Ashika Ranganath) ಅವರ ಅಕ್ಕ ಅನುಷಾ ರಂಗನಾಥ್ ಜನವರಿ 22 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ನಟಿ ತಮ್ಮ ವಿಶೇಷ ದಿನದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

ಕಿರುತೆರೆ ಮತ್ತು ಹಿರಿತೆರೆ ಎರಡರಲ್ಲೂ ಮಿಂಚಿದ್ದ ಅನುಷಾ (Anusha Ranganath) ಜನವರಿ 22 ರಂದು ಖಾಸಗಿ ರೆಸಾರ್ಟ್ ಒಂದರಲ್ಲಿ ಶ್ರವಣ್ ಎನ್ನುವವರ ಜೊತೆ ಸಪ್ತಪದಿ ತುಳಿದಿದ್ದರು. ಶ್ರವಣ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ. ವಿವಾಹ ಸಮಾರಂಭವು ಬಂಧುಗಳು ಮತ್ತು ಆಪ್ತಮಿತ್ರರ ಸಮ್ಮುಖದಲ್ಲಿ ನಡೆದಿದೆ. 

Tap to resize

ಮದುವೆ ಸಮಾರಂಭದ ಮತ್ತು ಪತಿ, ಬಂಧುಗಳು, ಸ್ನೇಹಿತರ ಫೋಟೋಗಳನ್ನು ಅನುಷಾ ಹಂಚಿಕೊಂಡಿದ್ದಾರೆ. ನಟಿಗೆ ಚಿತ್ರರಂಗದ ಗಣ್ಯರು, ಸ್ನೇಹಿತರು, ಅಭಿಮಾನಿಗಳು ವೈವಾಹಿಕ ಜೀವನಕ್ಕೆ (Married life) ಶುಭಕೋರಿದ್ದಾರೆ.

ಮದುವೆಗೂ ಮುನ್ನ ಅರಿಷಿಣ ಶಾಸ್ತ್ರ, ಮೆಹೆಂದಿ ಶಾಸ್ತ್ರ, ಸಂಗೀತ ಕಾರ್ಯಕ್ರಮ, ಆರತಕ್ಷತೆ ಕೂಡ ಅದ್ದೂರಿಯಾಗಿ ನಡೆದಿದೆ.  ಸಂಗೀತ್ ಕಾರ್ಯಕ್ರಮದಲ್ಲಿ ಆಶಿಕಾ ರಂಗನಾಥ್ ಸೇರಿ ಹಲವರು ಸಖತ್ತಾಗಿ ಡ್ಯಾನ್ಸ್ ಮಾಡಿದ್ದರು. ಈ ವಿಡಿಯೋಗಳನ್ನು ಆಶಿಕಾ ತಮ್ಮ ಇನ್ ಸ್ಟಾ ಸ್ಟೋರಿಯಲ್ಲಿ ಹಂಚಿಕೊಂಡಿದ್ದರು.

'ಗೋಕುಲದಲ್ಲಿ ಸೀತೆ' ಸೀರಿಯಲ್ ಮೂಲಕ ನಟನೆಗೆ (acting) ಕಾಲಿಟ್ಟ ಅನುಷಾ ರಂಗನಾಥ್  'ದಿ ಗ್ರೇಟ್ ಸ್ಟೋರಿ ಆಫ್ ಸೋಡಾಬುಡ್ಡಿ', '10', 'ಕೌರವ' ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಅನುಷಾ ಮದುವೆಯಲ್ಲಿ 'ದಿಯಾ' ಖ್ಯಾತಿಯ ಖುಷಿ ರವಿ, ಸಿರಿ ಪ್ರಹ್ಲಾದ್, ತೇಜಸ್ವಿನಿ ಶರ್ಮಾ (Tejaswini Sharma), 'ಲವ್‌ ಮಾಕ್ಟೈಲ್‌ 2' ಖ್ಯಾತಿಯ ಸುಶ್ಮಿತಾ ಸೇರಿದಂತೆ ಹಲವರು ಭಾಗಿಯಾಗಿದ್ದರು. 

ಕಳೆದ ವಾರ ಅನುಷಾ ಅವರ ಬ್ರೈಡಲ್ ಪಾರ್ಟಿ (bridal party) ಗ್ರ್ಯಾಂಡ್ ಆಗಿ ನೆರವೇರಿದ್ದು, ಸಹೋದರಿ ಆಶಿಕಾ ರಂಗನಾಥ್ ಹಾಗೂ ಸ್ನೇಹಿತೆಯರಾದ ಸಿರಿ, ತೇಜಸ್ವಿನಿ, ಸುಶ್ಮಿತಾ ಜೊತೆಯಾಗಿ ಸೇರಿ ಪಾರ್ಟಿ ನೀಡಿದ್ದರು. 

ಮದುವೆ ಸಂಭ್ರಮದಲ್ಲಿ ಅನುಷಾ ಸಾಂಪ್ರದಾಯಿಕವಾದ ಕೆಂಪು ಬಣ್ಣದ ಜರತಾರಿ ಸೀರೆಯುಟ್ಟು, ಅದಕ್ಕೆ ಸಿಂಪಲ್ ಆಗಿರುವ ಬ್ಲೌಸ್ ತೊಟ್ಟಿದ್ದರು. ಕೆಂಪು ಬಣ್ಣದ ಬಳೆ ಜೊತೆಗೆ ಆಭರಣ ಜ್ಯುವೆಲ್ಲರಿ ಧರಿಸಿ ತುಂಬಾನೆ ಮುದ್ದಾಗಿ ಕಾಣಿಸಿಕೊಂಡಿದ್ದರು. ಶ್ರವಣ ಪಂಚೆ, ಶಲ್ಯ ಧರಿಸಿದ್ದರು. 

ಇನ್ನು ಅಕ್ಕನ ಮದುವೆಯ ಸಂಭ್ರಮದಲ್ಲಿ ಮಿಂಚುತ್ತಿದ್ದ ಆಶಿಕಾ ರಂಗನಾಥ್ ಐವರಿ ಬಣ್ಣದ ಲಂಗ ದಾವಣಿ ಧರಿಸಿದ್ದು, ಮಿನಿಮಲ್ ಮೇಕಪ್ ನಲ್ಲಿ ಚುಟು ಚುಟು ಬೆಡಗಿ ತುಂಬಾನೆ ಸುಂದರವಾಗಿ ಕಾಣಿಸಿಕೊಂಡಿದ್ದರು. 

Latest Videos

click me!