ಡೋಲೋ 650 ಮಾತ್ರೆ, ಬಿಸಿ ರಾಗಿ ಮುದ್ದೆ ಶಶಿರೇಖಾ ಈಗ ಹೀರೋಯಿನ್: ಒಳ್ಳೆದಾಗ್ಲಿ ತಂಗವ್ವ ಎಂದ ಫ್ಯಾನ್ಸ್!

First Published | Jan 25, 2024, 3:24 PM IST

ಬೆಂಗಳೂರು  (ಜ.25): ರಾಜ್ಯದಲ್ಲಿ ಕೋವಿಡ್‌ ಅವಧಿಯಲ್ಲಿ ಗ್ರಾಮೀಣ ಶೈಲಿಯಲ್ಲಿ ಮಾತನಾಡಿದ್ದ ಶಶಿರೇಖಾ ಅವರು 'ಕರೊನಾ ಹೋಗಬೇಕು ಅಂದ್ರೆ ಡೋಲೋ 650 ಮಾತ್ರೆ, ಬಿಸಿ ರಾಗಿಮುದ್ದೆ ತಿಂದ್ರೆ ಸಾಕು' ಎಂದು ಹೇಳಿದ್ದ ವಿಡಿಯೋ ವೈರಲ್ ಆಗಿತ್ತು. ಈಗ ಇದೇ ಶಶಿರೇಖಾ ಕನ್ನಡ ಚಿತ್ರದರಂಗದ ಹಿರೋಯಿನ್ ಆಗಿದ್ದಾಳೆ.
 

ಹೌದು, ಕೊರೊನಾ ಅವಧಿಯಲ್ಲಿ ಎಲ್ಲರೂ ಭಯಭೀತರಾಗಿ ಕೋವಿಡ್ ಲಸಿಕೆ ಹಾಗೂ ಮಾಸ್ಕ್‌ ಧರಿಸಿ ಓಡಾಡುತ್ತಿದ್ದರು. ಆದರೆ, ಶಶಿರೇಖಾ ಅವರು ಕೊರೊನಾ ಹೋಗಬೇಕಂದ್ರೆ ಏನೂ ಮಾಡಬೇಕಿಲ್ಲ. ಡೋಲೋ 650 ಮಾತ್ರೆ, ಬಿಸಿ ರಾಗಿ ಮುದ್ದೆ ತಿಂದ್ರೆ ಸಾಕು ಎಂದು ಹೇಳಿದ್ದರು.
 

ಶಶಿರೇಖಾ ಅವರು ಸ್ಥಳೀಯ ಮಾಧ್ಯಮದೊಂದಿಗೆ ಮಾತನಾಡುವಾಗ ನೀಡಿದ ಹೇಳಿ ರಾಜ್ಯಾದ್ಯಂತ ಭಾರಿ ವೈರಲ್ ಆಗಿತ್ತು. ಇದಾದ ಕೆಲವು ದಿನಗಳು ಶಶಿರೇಖಾ ಎಲ್ಲೇ ಸಿಕ್ಕರೂ ಡೋಲೋ 650 ಎಂದು ಕರೆಯುತ್ತಿದ್ದರು.
 

Latest Videos


ಮೊದ ಮೊದಲು ಶಶಿರೇಖಾಗೆ ಜನರು ಡೋಲೋ 650 ಎಂದು ಕರೆಯುತ್ತಿದ್ದ ಬಗ್ಗೆ ಭಾರಿ ಅಸಮಾಧಾನವಿತ್ತು. ಈ ಬಗ್ಗೆ ಸಂದರ್ಶನ ಮಾಡಿದ ಮಾಧ್ಯಮದ ವಿರುದ್ಧವೂ ಆಕ್ರೋಶ ಹೊರ ಹಾಕಿದ್ದರು.
 

ಇದು ಇಂಟರ್‌ನೆಟ್‌ ಯುಗ. ಕೆಲವು ಪ್ರಸಿದ್ಧಿ ಪಡೆಯಬೇಕು ಎಂದು ಎಷ್ಟೇ ಪ್ರಯತ್ನ ಮಾಡಿದರೂ ಅವರಿಗೆ ಯಶಸ್ಸು ಸಿಗುವುದಿಲ್ಲ. ಆದರೆ, ಶಶಿರೇಖಾ ವೀಡಿಯೋ ವೈರಲ್ ಆದ ಬೆನ್ನಲ್ಲಿಯೇ ರಾಜ್ಯಾದ್ಯಂತ ಪ್ರಸಿದ್ಧಿ ಪಡೆದಿದ್ದೀಯ. ಇದನ್ನು ಸದುಪಯೋಗ ಮಾಡಿಕೋ ಎಂದು ಕೆಲವರು ಸಲಹೆ ನೀಡಿದ್ದಾರೆ.
 

ತನ್ನ ಆಪ್ತರ ಸಲಹೆಗಳನ್ನು ಪಡೆದ ಶಶಿರೇಖಾ ತನ್ನ ವರಸೆಯನ್ನೇ ಬದಲಿಸಿದಳು. ಡೋಲೋ 650 ಎನ್ನುವುದನ್ನೇ ತನ್ನ ಗುರುತನ್ನಾಗಿ ಮಾಡಿಕೊಂಡು ಸಾಮಾಜಿಕ ಜಾಲತಾಣಕ್ಕೆ ಪ್ರವೇಶ ಕೊಟ್ಟರು.
 

ಸಾಮಾಜಿಕ ಜಾಲತಾಣಗಳಾದ ಯ್ಯೂಟೂಬ್ ಮತ್ತು ಇನ್ಸ್‌ಸ್ಟಾಗ್ರಾಮ್‌ನಲ್ಲಿ ಆಕ್ಟೀವ್ ಆಗಿ ಒಂದೊಂದೇ ವಿಡಿಯೋ ಮಾಡಿ ಪೋಸ್ಟ್ ಮಾಡುತ್ತಾ ಬಂದರು. ಈಗ ಶಶಿರೇಖಾ ಅವರಿಗೆ ಇನ್ಸ್‌ಸ್ಟಾಗ್ರಾಮ್‌ನಲ್ಲಿ 1.75 ಲಕ್ಷ (175K followers) ಫಾಲೋವರ್ಸ್‌ಗಳಿದ್ದಾರೆ.
 

ತನಗೆ ಸಿಕ್ಕ ಪ್ರಸಿದ್ಧಿಯನ್ನು ಸದುಪಯೋಗ ಮಾಡಿಕೊಂಡು ಸಮಾಜಿಕ ಜಾಲತಾಣದಲ್ಲಿ ಮುನ್ನೆಲೆಗೆ ಬಂದ ಶಶಿರೇಖಾ ಈಗ ಕನ್ನಡ ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ.
 

ಶಶಿರೇಖಾ ಅವರು ನಟಿಸುತ್ತಿರುವ ಮೊದಲ ಚಿತ್ರದ ಶೀರ್ಷಿಕೆಯನ್ನು ಮೈಸೂರಿನ ಪತ್ರಿಕಾ ಭವನದಲ್ಲಿ ಬಿಡುಗಡೆ ಮಾಡಲಾಗಿದೆ. ಚಿತ್ರಕ್ಕೆ 'ಸೌಜನ್ಯ' ಹೆಸರಿಡಲಾಗಿದ್ದು, ಇದು ಆರಂಭ ಮಾತ್ರ ಅಂತ್ಯವಲ್ಲ ಎಂಬ ಅಡಿಬರಹ ನೀಡಲಾಗಿದೆ.
 

ಹೆಚ್‌.ಡಿ.ಕೋಟೆ ಮೂಲದ ಚೇತನ್ ದೇವರಾಜ್ ಅವರು ಕಥೆ, ಚಿತ್ರಕಥೆ, ನಿರ್ದೇಶನ ಮಾಡುತ್ತಿದ್ದಾರೆ. ದೋಸ್ತಿ ಕ್ರಿಯೇಷನ್ಸ್‌ ನಿರ್ಮಾಣ ಮಾಡುತ್ತಿದೆ. ಸೌಜನ್ಯ ಚಿತ್ರದ ಹೆಸರನ್ನು ಕೇಳಿದರೆ ಇದು ಅತ್ಯಾಚಾರ ಪ್ರಕಣದ ಕಥಾ ಹಂದರವನ್ನು ಹೊಂದಿದ ಚಿತ್ರ ಎಂದು ಊಹಿಸಬಹುದು.
 

click me!