ಸೆರಗು ಜಾರಿ ಬಿಟ್ಟು ಮಾದಕ ನೋಟ ಬೀರಿದ ಸ್ಯಾಂಡಲ್ ವುಡ್ ಬ್ಯೂಟಿ ಶ್ರುತಿ ಹರಿಹರನ್

First Published | May 20, 2024, 6:08 PM IST

ಸ್ಯಾಂಡಲ್ ವುಡ್ ನಟಿ ಶ್ರುತಿ ಹರಿಹರನ್ ಕೆಂಪು ಸೀರೆಯುಟ್ಟು ಮಾದಕ ನೋಟ ಬೀರಿರುವ ಫೋಟೋ ಹಂಚಿಕೊಂಡಿದ್ದಾರೆ. 
 

ಸ್ಯಾಂಡಲ್ ವುಡ್ ನ ಮುದ್ದು ಮುಖದ ಚೆಲುವೆ ಶ್ರುತಿ ಹರಿಹರನ್ (Shruthi Hariharan) ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದು, ಹೆಚ್ಚಾಗಿ ತಮ್ಮ ಫೋಟೋ ಶೂಟ್ ಮಾಡಿಸಿಕೊಂಡು ಹಂಚಿಕೊಳ್ಳುವ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. 
 

ಇದೀಗ ಶ್ರುತಿ ಹೊಸ ಫೋಟೋ ಸೀರೀಸ್ ಗಳನ್ನು (photo series) ಹಂಚಿಕೊಂಡಿದ್ದು, ಕೆಂಪು ಕಾಟನ್ ಸೀರೆ ಮತ್ತು ಕಪ್ಪು ಬ್ಲೌಸ್ ಧರಿಸಿ ಮಾದಕ ನೋಟ ಬೀರುವ ಮೂಲಕ  ಮತ್ತೆ ಸದ್ದು ಮಾಡಿದ್ದಾರೆ. 
 

Tap to resize

ಶರಣ್ ಜಿಸಿ ಫೋಟೋ ಶೂಟ್ ಮಾಡಿಸಿದ್ದು, ಶಿವು ಗೌಡ ಮೇಕಪ್ ಮಾಡಿದ್ದಾರೆ ಮತ್ತು ಸುನೀತಾ ಆರ್ ಎಂ ಹೇರ್ ಸ್ಟೈಲ್ ಮಾಡಿದ್ದು, ಸಿಂಪಲ್ ಆದರೂ ಈ ಬೋಲ್ಡ್ ಲುಕ್ ನಲ್ಲಿರುವ ನಟಿಯನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. 
 

ದುಂಡಗಿನ ಮಿರರ್ ಮುಂದೆ ಕುಳಿತು ಸೆರಗು ಕೈಯಲ್ಲಿ ಹಿಡಿದು, ಮಾದಕ ನೋಟ ಬೀರಿರುವ ನಟಿಯ ಲುಕ್ ಗೆ ಅಭಿಮಾನಿಗಳು ವಾವ್ ಅಂದಿದ್ದಾರೆ, ಜೊತೆಗೆ ಹಾಟಿ, ನಿಮ್ಮ ಮೇಲೆ ಮತ್ತೆ ಮತ್ತೆ ಪ್ರೀತಿಯಾಗ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ. 
 

ಮತ್ತೊಬ್ಬರು ಈ ಡಾರ್ಕ್ ಪಿಕ್ಚರ್ ನಲ್ಲಿ ತುಂಬಾನೆ ಸುಂದರವಾಗಿ ಕಾಣಿಸುತ್ತೀರಿ ಎಂದಿದ್ದಾರೆ. ಅಲ್ಲದೇ ನಟಿಯರಾದ ಅನುಪಮಾ ಗೌಡ, ಸಿರಿ ರವಿಕುಮಾರ್, ಚೈತ್ರ ಜೆ ಆಚಾರ್ ಮೊದಲಾದವರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 
 

ಇತ್ತಿಚೆಗೆ ಸಾರಾಂಶ, ಹೆಡ್ ಬುಷ್ ಸಿನಿಮಾಗಳಲ್ಲಿ ನಟಿಸಿದ್ದ ಶ್ರುತಿ ಹರಿಹರನ್, ಸದ್ಯ ಸ್ಟ್ರಾಬೆರ್ರಿ ಎನ್ನುವ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಬಿಡುಗಡೆಗೆ ತಯಾರಾಗಿದೆ. 
 

Latest Videos

click me!