ಇತ್ತೀಚೆಗೆ ಲೀಲಾವತಿ ವಯೋಸಹಜ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾಗ ಅವರ ಮೊಮ್ಮಗ ಯುವರಾಜ್ ಮತ್ತು ಸೊಸೆ ಅನು ಚೆನ್ನೈನಿಂದ ನೋಡಲು ಬಂದಿದ್ದರು. ಅಷ್ಟೊಂದು ದಿನ ಕಣ್ಣುಮುಚ್ಚಿಕೊಂಡೇ ಮಲಗಿರುತ್ತಿದ್ದ ಲೀಲಮ್ಮ ಮೊಮ್ಮಗ ಬಂದು ಅಜ್ಜೀ... ಎಂದು ಕರೆದಾಗ ಕೂಡಲೇ ಕಣ್ಣು ಬಿಟ್ಟಿದ್ದರಂತೆ ಮೊಮ್ಮಗನನ್ನು ತುಂಬಾ ಹಚ್ಚಿಕೊಂಡಿದ್ದರು.
ಈ ಹಿಂದೆ ವಿನೋದ್ ರಾಜ್ ಅವರಿಗೆ ಮದುವೆಯಾಗಲಿಲ್ಲ ಎಂದು ಹೇಳಲಾಗಿತ್ತು. ಕಳೆದ 8 ತಿಂಗಳ ಹಿಂದೆ ಮದುವೆಯಾಗಿದೆ. ಪತ್ನಿ ಅನು ಮತ್ತು ಮಗ ಯುವರಾಜ್ ಚೆನ್ನೈನಲ್ಲಿ ನೆಲೆಸಿದ್ದಾರೆ ಎಂದು ಸುದ್ದಿಯಾಗಿತ್ತು.
ಇನ್ನು ಲೀಲಾವತಿ ಅವರ ಸೊಸೆ ಅನು ತಮಿಳುನಾಡಿನ ಪ್ರತಿಷ್ಠಿತ ಕುಟುಂಬದಲ್ಲಿ ಹುಟ್ಟಿ ಬೆಳೆದಾಕೆ ಐಪಿಎಸ್ ಅಧಿಕಾರಿಯೊಬ್ಬರ ತಂಗಿ ಎನ್ನಲಾಗಿದೆ. ವಿನೋದ್ ರಾಜ್ ಮಗ ಇದೀಗ ಇಂಜಿನೀಯರಿಂಗ್ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಮಗನ ಮದುವೆಯಾಗಿರುವ ವಿಷಯವನ್ನು ಯಾಕೆ ಇಷ್ಟು ದಿನ ಮುಚ್ಚಿಟ್ಟಿದ್ದೀರಿ? ಅಂತ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಲೀಲಾವತಿ ಎಲ್ಲಾ ಚೆನ್ನಾಗಿದೆ ಅಲ್ವಾ? ಸೊಟ್ಟಪಟ್ಟ ಇಲ್ಲದೆ, ಅಂಕು ಡೊಂಕು ಇಲ್ಲದೇ, ಕಳ್ಳರ ಸುಳ್ಳರ ಹಾಗೆ ಇರದೇ ನೆಮ್ಮದಿಯ ಜೀವನವಿದೆ. ಯಾಕೆ ಹೇಳಿಲ್ಲ ಅಂದ್ರೆ ಎಂತಹವರ ಮದುವೆ ಎಲ್ಲೊಲ್ಲೂ ನಡೆದಿದೆ. ಪ್ಯಾಲೇಸ್ ಅಲ್ಲಿ ಮಾಡಿದ್ದಾರೆ. ನನಗೆ ಆ ಶಕ್ತಿ ಇರಲಿಲ್ಲ. ಅದಕ್ಕೆ ಅದನ್ನು ರಹಸ್ಯವಾಗಿಡುವುದು ಒಳ್ಳೆಯದು ಅನಿಸಿತು ಅಂತ ಹೇಳಿದ್ದರು.
ನನ್ನ ಮಗನ ಮದುವೆ ಆಗಿದೆ. ಅದರಲ್ಲಿ ಮುಚ್ಚಿಡುವಂಥದ್ದು ಏನೂ ಇಲ್ಲ. ಆದರೆ, ಸಿಂಪಲ್ ಆಗಿ ಮದುವೆ ಮಾಡಿದೆ. ನನ್ನ ಹತ್ತಿರ ದುಡ್ಡಿಲ್ಲದ್ದಕ್ಕೆ ತಿರುಪತಿ ಬೆಟ್ಟದ ಮೇಲೆ ಮಾಡಿದೆ. ನನ್ನ ಮಗ ಪವಿತ್ರವಾಗಿದ್ದಾನೆ. ಒಳ್ಳೆಯ ಮಗನಾಗಿದ್ದಾನೆ. ತಿರುಪತಿ ಬೆಟ್ಟದ ಮೇಲೆ ಮದುವೆ ಮಾಡಿಸಿದ್ದೇನೆ. ಎಲ್ಲರಿಗೂ ಗೊತ್ತಾಗಿ ಕೊಂಕು ಮಾತನ್ನು ಕೇಳುವ ಬದಲೂ, ಪರಿಶುದ್ಧವಾದ ಜಾಗದಲ್ಲಿ ಮದುವೆ ಮಾಡಿಸಿದ್ದೇನೆ. ಕೇವಲ ಏಳೇ ಜನ ಕನ್ನಡಿಗರು ಈ ಮದುವೆಯಲ್ಲಿ ಭಾಗವಹಿಸಿದ್ದರು ಎಂದು ಸ್ಪಷ್ಟಪಡಿಸಿದ್ದರು.
ಇರೋ ಒಬ್ಬ ಮಗನ ಮದುವೆ ವಿಜ್ರಂಭಣೆಯಿಂದ ಮಾಡೋಕೆ ಆಗಲಿಲ್ವೇ ಎಂದು ಅನಿಸಿದೆ. ಪರಮಾತ್ಮನ್ನ ಕೇಳೋದೆ ಆಯ್ತು. ಯಾವ ತಾಯಿಯೂ ತನ್ನ ಮಕ್ಕಳ ಭವಿಷ್ಯ ಚೆನ್ನಾಗಿ ಆಗದಿರಲಿ ಎಂದು ಬಯಸುವುದಿಲ್ಲ. ಚೆನ್ನಾಗಿ ಆಗಲಿ ಎಂದೇ ಬಯಸ್ತಾಳೆ. ಸೊಸೆ ಮೊಮ್ಮಕ್ಕಳು ಚಿನ್ನದ ಹಾಗಿದ್ದಾರೆ ಎಂದು ಸ್ಪಷ್ಟಪಡಿಸಿದ್ದರು.
ಇನ್ನು ನೆಲಮಂಗಲ ಅಂಬೇಡ್ಕರ್ ಆಟದ ಮೈದಾನದಲ್ಲಿ ಸಾರ್ವಜನಿಕ ದರ್ಶನದ ಬಳಿಕ ಲೀಲಾವತಿ ಅವರ ಪಾರ್ಥಿವ ಶರೀರವನ್ನು ರವೀಂದ್ರ ಕಲಾ ಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗುತ್ತದೆ. ಮಧ್ಯಾಹ್ನ ಮೂರುಗಂಟೆಯವರೆಗೂ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಬಳಿಕ ಸೋಲದೇವನ ಹಳ್ಳಿಯ ತೋಟದಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಗುತ್ತದೆ.