ಅಜ್ಜಿಯ ಕಥೆ, ಆಟದ ಖುಷಿಯಲ್ಲಿ ನಟಿ ಅಪೂರ್ವ ಭಾರದ್ವಾಜ್‌ ಬಾಲ್ಯದ ಬಣ್ಣ!

First Published | Nov 14, 2024, 9:43 PM IST

ಮಧ್ಯರಾತ್ರಿಯವರೆಗೂ ಅಜ್ಜಿ, ನಾನು ಮತ್ತು ಕಥೆ! ಆಟದ ವಿಷಯಕ್ಕೆ ಬಂದರೆ, ನಾನು ನನ್ನ ಫ್ರೆಂಡ್ಸ್‌ ಎಲ್ಲರೂ ಬೀದಿಯಲ್ಲಿ ಲಗೋರಿ, ಕುಂಟಾಬಿಲ್ಲೆ, ಕ್ರಿಕೆಟ್‌ ಆಡ್ತಾ ಇದ್ವಿ. ಶಾಲೆ ಬಿಟ್ರೆ ಬೀದಿಯಲ್ಲೇ ಇರ್ತಿದ್ದೆ.

ಜಿ ಪಿ ರಾಜರತ್ನಂ ಅವರ ‘ದಿನಕ್ಕೊಂದು ಕಥೆ’ ಪುಸ್ತಕ ನನ್ನ ಬಾಲ್ಯವನ್ನು ಸಮೃದ್ಧಗೊಳಿಸಿತು. ನನ್ನ ಅಜ್ಜಿ ದಿನಾ ಈ ಪುಸ್ತಕದ ಒಂದೊಂದು ಕತೆಯನ್ನು ನನಗೆ ಓದಿ ಹೇಳುತ್ತಿದ್ದರು. 

ಏನೇ ಎಕ್ಸಾಂ ಇದ್ರೂ, ಎಷ್ಟೇ ಹೋಂವರ್ಕ್‌ ಇದ್ದರೂ ಇದೊಂದು ತಪ್ಪುತ್ತಿರಲಿಲ್ಲ. ಅಡುಗೆ ಮನೆಯಲ್ಲಿ ಕೆಳಗೆ ಒಂದು ಮಣೆ. ಅದರ ಮೇಲೆ ಕುಳಿತು ಅಜ್ಜಿಯ ಕಥಾಭಿನಯ. ಅಜ್ಜಿ ಕಥೆ ಹೇಳ್ತಾ ಪ್ರತೀ ದಿನವೂ ಕಣ್ಣೆದುರು ಹೊಸ ಜಗತ್ತು.
 

Latest Videos


ಕೆಲವೊಮ್ಮೆ ಎಕ್ಸಾಂ ಇದ್ದಾಗ ಅಮ್ಮ, ‘ನಾಳೆ ಅವಳು ಬೇಗ ಏಳ್ಬೇಕು, ಎಕ್ಸಾಂ ಇದೆ. ಇಬ್ರೂ ಹೋಗಿ ಮಲಕ್ಕೊಳ್ಳಿ’ ಅಂತಿದ್ರು. ನಾನು ಮಲಗೋ ನಾಟಕ ಆಡ್ತಿದ್ದೆ. ಅಮ್ಮಂಗೆ ನಿದ್ರೆ ಬಂತು ಅಂತ ಗೊತ್ತಾದ ಕೂಡಲೇ ಅಲ್ಲಿಂದೆದ್ದು ಓಡಿ ಹೋಗಿ ಅಜ್ಜಿಯನ್ನು ಎಬ್ಬಿಸಿ ಕಥೆ ಹೇಳಿಸುತ್ತಿದ್ದೆ. 
 

ಮಧ್ಯರಾತ್ರಿಯವರೆಗೂ ಅಜ್ಜಿ, ನಾನು ಮತ್ತು ಕಥೆ! ಆಟದ ವಿಷಯಕ್ಕೆ ಬಂದರೆ, ನಾನು ನನ್ನ ಫ್ರೆಂಡ್ಸ್‌ ಎಲ್ಲರೂ ಬೀದಿಯಲ್ಲಿ ಲಗೋರಿ, ಕುಂಟಾಬಿಲ್ಲೆ, ಕ್ರಿಕೆಟ್‌ ಆಡ್ತಾ ಇದ್ವಿ. ಶಾಲೆ ಬಿಟ್ರೆ ಬೀದಿಯಲ್ಲೇ ಇರ್ತಿದ್ದೆ. ಆರೂವರೆಗೆ ಅಜ್ಜ ಬಂದು ಬಾ ಮನೆಗೆ ಅಂತ ಕರೀತಿದ್ರು. 

ಕ್ಯಾರೇ ಮಾಡ್ತಿರಲಿಲ್ಲ. ಸ್ವಲ್ಪ ಹೊತ್ತಿಗೆ ಅಜ್ಜಿ ಕರೀತಿದ್ರು. ಅದಕ್ಕೂ ತಲೆ ಕೆಡಿಸಿಕೊಳ್ತಿರಲಿಲ್ಲ. ಏಳೂಕಾಲರ ಹೊತ್ತಿಗೆ ಅಮ್ಮ ಬಂದು, ‘ಅಪ್ಪ ಬರ್ತಿದ್ದಾರೆ, ಸ್ಕೂಟರ್‌ ಶಬ್ದ ಕೇಳ್ತಿದೆ ನಂಗೆ, ಬಾ ಬೇಗ’ ಅಂತ ಕೂಗುತ್ತಿದ್ರು. ನಾನಾಗ ಅವರಿಂದ ತಪ್ಪಿಸಿಕೊಂಡು ಬೇರೆ ಬೀದಿಗೆ ಓಡ್ತಿದ್ದೆ.

ಇದೆಲ್ಲ ಎಲ್ಲೀವರೆಗೆ ಅಂದರೆ ಅಪ್ಪನ ಸ್ಕೂಟರ್‌ ಶಬ್ದ ಕೇಳುವವರೆಗೆ. ಎರಡು ಬೀದಿ ಆಚೆ ಅಪ್ಪ ಸ್ಕೂಟರಲ್ಲಿ ಬರುತ್ತಿರುವಾಗ ಎದ್ನೋ ಬಿದ್ನೋ ಅಂತ ಓಡ್ಕೊಂಡು ಹೋಗಿ ಪುಸ್ತಕದ ಮುಂದೆ ಕೂತು ಬಿಡ್ತಿದ್ದೆ. ಈಗ ಇಂಥಾ ನೆನಪುಗಳೇ ನನ್ನ ಬಾಲ್ಯಕ್ಕೆ ಏಣಿಯಂತಿವೆ.

click me!