ಕನ್ನಡದ ಖ್ಯಾತ ನಿರ್ದೇಶಕ ತರುಣ್ ಸುಧೀರ್ ಹಾಗೂ ಸೋನಲ್ ಮೊಂಥೆರೋ ಅವರ ಕ್ರಿಶ್ಚಿಯನ್ ಸಂಪ್ರದಾಯದ ಮದುವೆಯ ಸಿದ್ದತೆಗಳು ಆರಂಭವಾಗಿದೆ.
ಹಿಂದೂ ಸಂಪ್ರದಾಯದಲ್ಲಿ ಮದೆವೆಗೂ ಪೂರ್ವ ಮೆಹಂದಿ ಸಂಪ್ರದಾಯ ನಡೆಯುವಂತೆ, ಕ್ರಿಶ್ಚಿಯನ್ ಮದುವೆಗಳಲ್ಲಿ ರೋಸ್ ಸಂಪ್ರದಾಯ ನಡೆಯುತ್ತಿದೆ. ನಾಲ್ಕು ದಿನಗಳಗಳ ಹಿಂದೆ ಈ ಕಾರ್ಯಕ್ರಮ ಕೂಡ ನೆರವೇರಿದೆ.
ಕನ್ನಡ ನಿರ್ದೇಶಕ ತರುಣ್ ಸುಧೀರ್ ಹಾಗೂ ಸೋನಲ್ ಮೊಂಥೆರೋ ಅವರು ಮಂಗಳೂರಿನಲ್ಲಿ ಕ್ರಿಶ್ಚಿಯನ್ ಪದ್ಧತಿ ಪ್ರಕಾರ ಮದುವೆ ಆಗುತ್ತಿದ್ದಾರೆ. ಮದುವೆ ಪೂರ್ವ ಕಾರ್ಯಕ್ರಮದ ಫೋಟೋಗಳು ಕೂಡ ವೈರಲ್ ಆಗಿದೆ.
ರೋಸ್ ಸಮಾರಂಭವು ಸಾಂಪ್ರದಾಯಿಕ ಮಂಗಳೂರಿನ ಕ್ಯಾಥೋಲಿಕ್ ಪೂರ್ವ-ವಿವಾಹದ ಆಚರಣೆಯಾಗಿದ್ದು, ಇದು ವಧು ಮತ್ತು ವರನಿಗೆ ತೆಂಗಿನ ಹಾಲು ಮತ್ತು ಎಣ್ಣೆಯಿಂದ ಅಭಿಷೇಕವನ್ನು ಮಾಡಿ ಹಿರಿಯರು ಆಶೀರ್ವಾದ ಮಾಡುತ್ತಾರೆ.
ಸೆಪ್ಟೆಂಬರ್ 1 ರಂದು ವಿವಾಹ ಸಮಾರಂಭ ಮಂಗಳೂರಿನ ಪಡೀಲ್ ಬಳಿಯ ಚರ್ಚ್‌ವೊಂದರಲ್ಲಿ ನಡೆಯಲಿದೆ ಎಂದು ವರದಿಯಾಗಿದ್ದು, ಈ ಕುರಿತಾಗಿ ಮಾಹಿತಿ ಇನ್ನಷ್ಟೇ ಬರಬೇಕಿದೆ.
ಆಗಸ್ಟ್ 11 ರಂದು ತರುಣ್ ಮತ್ತು ಸೋನಲ್ ಹಿಂದೂ ಪದ್ಧತಿಯಂತೆ ದಾಂಪತ್ಯ ಜೀವನಕ್ಕೆ ಈಗಾಗಲೇ ಕಾಲಿಟ್ಟಿದ್ದಾರೆ. ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆದ ಈ ಮದುವೆಗೆ ಸ್ಯಾಂಡಲ್‌ವುಡ್ ನಟ, ನಟಿಯರು ಸಾಕ್ಷಿಯಾಗಿದ್ದರು.
ಸೋನಲ್ ಮೊಂಥೆರೋ ಕ್ರೈಸ್ತ ಧರ್ಮದವರಾಗಿದ್ದು, ಅವರ ಸಂಪ್ರದಾಯದಂತೆ ಮಂಗಳೂರಿನಲ್ಲಿ ಮದುವೆ ನಡೆಯಲಿದೆ. ಈ ಮದುವೆಗೆ ಕುಟುಂಬಸ್ಥರು, ಆಪ್ತರಿಗಷ್ಟೇ ಆಹ್ವಾನ ನೀಡಿದ್ದಾರೆ. ತೆರೆಮರೆಯಲ್ಲಿ ಮದುವೆಗೆ ಭರ್ಜರಿ ತಯಾರಿ ನಡೆಯುತ್ತಿದೆ.
ಇತ್ತೀಚೆಗೆ ಆಂಕರ್ ಅನುಶ್ರೀ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಸಂದರ್ಶನದಲ್ಲಿಯೂ ಕೂಡ ತರುಣ್ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆ ಸಮಾರಂಭ ನಡೆಯಲಿದೆ ಎನ್ನುವುದನ್ನು ತಿಳಿಸಿದ್ದರು.
ಈ ಮದುವೆ ಮುಗಿದ ಬಳಿಕ ಹನಿಮೂನ್‌ಗೆ ಹೋಗುವುದಾಗಿ ತರುಣ್ ಸುಧೀರ್ ಹೇಳಿದ್ದು, ಮಾಲ್ಡೀವ್ಸ್‌ಗೆ ಪ್ರಯಾಣ ಮಾಡುವುದಾಗಿ ಈಗಾಗಲೇ ತಿಳಿಸಿದ್ದಾರೆ.
ಮಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ರೋಸ್ ಸಮಾರಂಭದಲ್ಲಿ ಸೋನಲ್, ಗೋಲ್ಡನ್ ಹಳದಿ ಮಿಶ್ರಿತ ಮಾಡರ್ನ್ ಡ್ರೆಸ್‌ನಲ್ಲಿ ಮಿಂಚಿದರೆ, ತರುಣ್ ಸುಧೀರ್ ಹಳದಿ ಬಣ್ಣದ ಕುರ್ತಾ ಧರಿಸಿದ್ದರು.
ರೋಸ್ ಕಾರ್ಯಕ್ರಮದಲ್ಲಿ ತರುಣ್ ಸುಧೀರ್ ಕೆಲ ಆಪ್ತರು ಹಾಗೂ ಸೋನಲ್ ಮೊಂಥೆರೋ ಕುಟುಂಬದವರಷ್ಟೇ ಭಾಗವಹಿಸಿದ್ದರು. ಇದರ ಫೋಟೋಗಳನ್ನು ಟೀಮ್ ಶೇರ್ ಮಾಡಿಕೊಂಡಿದೆ.
ನವ ವಿವಾಹಿತೆ ಸೋನಲ್ ಮೊಂಥೆರೋ ಅವರು ತಾಯಿ ಹಾಗೂ ತಂದೆಯ ಜೊತೆಗೆ ತೆಗೆದಿರೋ ಫೋಟೋದಲ್ಲಿ ಮುದ್ದಾಗಿ ಕಂಡಿದ್ದಾರೆ. ಅವರ ಸಂಬಂಧಿ ಈ ಫೋಟೋ ಹಂಚಿಕೊಂಡಿದ್ದಾರೆ.
ಒಂದೇ ತಿಂಗಳ ಅವಧಿಯಲ್ಲಿ ಸೋನಲ್ ಮಂಥೆರೋ ಮತ್ತೊಂದು ಮದುವೆಯಾಗುವ ಖುಷಿಯಲ್ಲಿದ್ದರೆ, ಸೋನಲ್ ಮೊಂಥೆರೋ ಅವರ ಮದುವೆ ಶಾಸ್ತ್ರದಲ್ಲಿ ಅವರ ಸಂಬಂಧಿಕರು ಭಾಗಿಯಾಗಿದ್ದಾರೆ.
ಸೋನಲ್ ಅವರಿಗೆ ಇಬ್ಬರು ಅಕ್ಕಂದಿರರು ಇದ್ದು, ಇಬ್ಬರೂ ವಿದೇಶದಲ್ಲಿ ವಾಸವಾಗಿದ್ದಾರೆ. ಮದುವೆಯ ಸಲುವಾಗಿಯೇ ಅವರು ಮಂಗಳೂರಿಗೆ ಆಗಮಿಸಿದ್ದಾರೆ.