ನಟನೆ ಸಾಕು.. ಸಿನಿಮಾ ನಿರ್ದೇಶನಕ್ಕೆ ಸಜ್ಜಾದ ನಟಿ, ರಂಗಕರ್ಮಿ ಅಕ್ಷತಾ ಪಾಂಡವಪುರ: ಪ್ಲ್ಯಾನ್ ಏನು?

Published : Oct 22, 2026, 03:26 PM IST

ಸಾಹಿತಿ, ನಟಿ, ರಂಗಕರ್ಮಿ ಅಕ್ಷತಾ ಪಾಂಡವಪುರ ಇದೀಗ ಸಿನಿಮಾ ನಿರ್ದೇಶನಕ್ಕೆ ಸಜ್ಜಾಗಿದ್ದಾರೆ. ರಾಜ್ಯ ಪ್ರಶಸ್ತಿ ಹಾಗೂ ಫಿಲ್ಮ್‌ಫೇರ್ ಪ್ರಶಸ್ತಿ ಪಡೆದಿರುವ ನಟಿ, ‘ಲೀಕ್ ಔಟ್’ ರಂಗಪ್ರಯೋಗದ ಮೂಲಕವೂ ಗಮನ ಸೆಳೆದಿದ್ದಾರೆ.

PREV
13
ಅಪಾರ ಪ್ರತಿಭಾವಂತೆ

ಸಾಹಿತಿ, ನಟಿ, ರಂಗಕರ್ಮಿ ಹೀಗೆ ಬೇರೆ ಬೇರೆ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಸಾಮರ್ಥ್ಯವುಳ್ಳ ಅಪಾರ ಪ್ರತಿಭಾವಂತೆ ಅಕ್ಷತಾ ಪಾಂಡವಪುರ ಇದೀಗ ಸಿನಿಮಾ ನಿರ್ದೇಶನಕ್ಕೆ ಇಳಿಯುತ್ತಿದ್ದಾರೆ. ಪ್ರಸ್ತುತ ಅವರು ಸಿನಿಮಾ ನಿರ್ಮಾಣ ಪ್ರಕ್ರಿಯೆಗಳನ್ನು ಆರಂಭಿಸಿದ್ದು, ಕ್ರೌಡ್‌ ಫಂಡಿಂಗ್‌ ಮೂಲಕ ಸಿನಿಮಾ ರೂಪಿಸುವ ಉದ್ದೇಶ ಹೊಂದಿದ್ದಾರೆ.

23
ನಿರ್ದೇಶನ ನನ್ನ ಕನಸು

ಸಿನಿಮಾದಲ್ಲಿನ ನಟನೆಗೆ ರಾಜ್ಯ ಪ್ರಶಸ್ತಿ, ಫಿಲ್ಮ್‌ ಫೇರ್‌ ಪ್ರಶಸ್ತಿ ಪಡೆದಿರುವ ಅವರು ‘ಲೀಕ್‌ ಔಟ್‌’ ಎಂಬ ವಿಶಿಷ್ಟ ರಂಗಪ್ರಯೋಗದಿಂದ ನಾಡಿನುದ್ದಕ್ಕೂ ಜನಪ್ರೀತಿ ಗಳಿಸಿದ್ದಾರೆ. ಆ ರಂಗಪ್ರಯೋಗ 125 ಪ್ರದರ್ಶನ ಕಂಡಿರುವುದು ಅವರ ಹೆಗ್ಗಳಿಕೆ. ನಾನು ನಟಿಯಾಗಿದ್ದರೂ ಸಿನಿಮಾ ನಿರ್ದೇಶನ ನನ್ನ ಕನಸು. ಕಳೆದ ಎರಡು ವರ್ಷಗಳಿಂದ ನಾನು ಈ ಕುರಿತೇ ಆಲೋಚಿಸುತ್ತಿದ್ದೇನೆ. ಇದೀಗ ಸಮಾನ ಮನಸ್ಕರ ತಂಡ ಕಟ್ಟುತ್ತಿದ್ದೇನೆ.

33
ಮಹಿಳಾ ಪಾತ್ರಗಳು ಜಾಸ್ತಿ

ಒಂದು ವಿಡಂಬನಾತ್ಮಕ ಕತೆಯನ್ನು ಪ್ರಸ್ತುತ ಪಡಿಸುವ ಆಸೆ ನನ್ನದು. ತುಂಬಾ ದೊಡ್ಡ ತಾರಾಗಣವಿರುವ ಈ ಚಿತ್ರದಲ್ಲಿ ಮಹಿಳಾ ಪಾತ್ರಗಳು ಜಾಸ್ತಿ ಇರುತ್ತವೆ ಎಂದು ಅವರು ಅಕ್ಷತಾ ಪಾಂಡವಪುರ ತಿಳಿಸಿದ್ದಾರೆ. ಸದ್ಯ ಪ್ರೀ ಪ್ರೊಡಕ್ಷನ್‌ ಹಂತದಲ್ಲಿರುವ ಈ ಸಿನಿಮಾ ತಂಡ ಸೇರುವ ಆಸಕ್ತಿ ಇರುವವರು 9353771172 ಸಂಖ್ಯೆ ಸಂಪರ್ಕಿಸಬಹುದು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories