Premada Oorali ತಂಡ ಶಿವಣ್ಣನ ಮನೆಯಲ್ಲಿ: ನಟ ಏನಂದ್ರು? ಸುಂದರ ಕ್ಷಣಗಳ ಫೋಟೋಸ್​ ಇಲ್ಲಿವೆ

Published : Oct 20, 2026, 07:11 PM IST

ಕೇವಲ ಎರಡು ಕೋಟಿ ರೂಪಾಯಿ ಬಜೆಟ್​ನಲ್ಲಿ ಮಾಡಿದ್ದ ಪ್ರೇಮದ ಊರಲಿ ತಂಡ, ಕೇವಲ ಜನರ ಬಾಯಿಯಿಂದ ಬಾಯಿ ಪ್ರಚಾರದಿಂದಾಗಿಯೇ 100 ಕೋಟಿ ದಾಟುವತ್ತ ದಾಪುಗಾಲು ಹಾಕಿದೆ. ನಟ ಶಿವರಾಜ್​ ಕುಮಾರ್​ ಅವರು ಇಡೀ ಚಿತ್ರ ತಂಡವನ್ನು ತಮ್ಮ ಮನೆಗೆ ಕರೆಸಿಕೊಂಡು ಹಾರೈಸಿದ್ದಾರೆ. ನಟ ಹೇಳಿದ್ದೇನು?

PREV
16
ಪ್ರೇಮದ ಊರಲಿ ಸಕ್ಸಸ್​

ಕೇವಲ ಎರಡು ಕೋಟಿ ರೂಪಾಯಿ ಬಜೆಟ್​ನಲ್ಲಿ ಮಾಡಿದ್ದ ಪ್ರೇಮದ ಊರಲಿ ತಂಡ, ಕೇವಲ ಜನರ ಬಾಯಿಯಿಂದ ಬಾಯಿ ಪ್ರಚಾರದಿಂದಾಗಿಯೇ 100 ಕೋಟಿ ದಾಟುವತ್ತ ದಾಪುಗಾಲು ಹಾಕಿದೆ. ಒಂದೊಳ್ಳೆ ಚಿತ್ರ, ಮನೆಮಂದಿಯೆಲ್ಲಾ ಕುಳಿತು ನೋಡುವ ಚಿತ್ರವನ್ನು ಕೊಟ್ಟರೆ, ಜನರು ಅದನ್ನು ಹೇಗೆ ಸ್ವೀಕರಿಸುತ್ತಾರೆ, ಪ್ರಚಾರಕ್ಕೆ ಕೋಟಿ ಕೋಟಿ ಸುರಿಯದಿದ್ದರೂ, ಜನರ ಬಾಯಿಯಿಂದ ಬಾಯಿ ಪ್ರಚಾರದಿಂದಲೇ ಹೇಗೆ ಸಿನಿಮಾ ಒಂದು ಸಕ್ಸಸ್​ ಆಗಬಹುದು ಎನ್ನುವುದಕ್ಕೆ ಸಾಕ್ಷಿಯಾಗಿ ನಿಂತಿರೋದು ಪ್ರೇಮದ ಊರಲಿ ಮೂವಿ (Premada Oorali Kannada Movie)

26
ನಟನ ಶ್ಲಾಘನೆ

ಪ್ರೇಮದ ಊರಲಿ ಸಕ್ಸಸ್​ ಬಗ್ಗೆ ಇದಾಗಲೇ ಕೆಲವು ನಟರು ಶ್ಲಾಘಿಸಿ ಮಾತನಾಡಿದ್ದಾರೆ. ಇದೀಗ ನಟ ಶಿವರಾಜ್​ ಕುಮಾರ್​ ಅವರು ಇಡೀ ಚಿತ್ರ ತಂಡವನ್ನು ತಮ್ಮ ಮನೆಗೆ ಕರೆಸಿಕೊಂಡಿದ್ದರು. ಚಿತ್ರದ ನಾಯಕಿ ರಮಿಕಾ ಶಿವು, ನಾಯಕ ಶ್ರೀರಾಮ್, ನಿರ್ಮಾಪಕ ದೇವೇಂದ್ರ ನಾಯ್ಡು ಹೀಗೆ ಎಲ್ಲರೂ ಶಿವಣ್ಣನ ಮನೆಗೆ ಹೋಗಿದ್ದಾರೆ.

36
ಅಪ್ಪಾಜಿ ಕಾಲದಿಂದಲೂ ಬೆಲೆ ಇದೆ

ಅಪ್ಪಾಜಿ ಕಾಲದಿಂದಲೂ ಕನ್ನಡ ಸಿನಿಮಾಗಳಿಗೆ ಬೆಲೆ ಇದ್ದೇ ಇದೆ. ಪ್ರತಿ 10 ವರ್ಷಕ್ಕೆ ಒಂದು ಈ ರೀತಿಯ ಚಿತ್ರ ಬರುತ್ತದೆ. ಪ್ರೇಮದ ಊರಲಿ ಸಿನಿಮಾ ಆ ರೀತಿಯ ಚಿತ್ರವೇ ಆಗಿದೆ ಎಂದು ಶಿವಣ್ಣ ಹೇಳಿದ್ದಾರೆ.

46
ತುಂಬಾ ಖುಷಿ ಕೊಟ್ಟಿದೆ

ನಿಮ್ಮ ಚಿತ್ರದ ಗೆಲುವು ತುಂಬಾನೆ ಖುಷಿ ಕೊಟ್ಟಿದೆ. ಕನ್ನಡ ಸಿನಿಮಾ ಹೋಗ್ತಿರೋದಕ್ಕೆ ತುಂಬಾನೆ ಸಂತೋಷ್ ಇದೆ. ದೊಡ್ಡ ಬಜೆಟ್ ಚಿತ್ರಗಳಷ್ಟೇ ಅಲ್ಲ, ಚಿಕ್ಕ ಬಜೆಟ್‌ನ ಸಿನಿಮಾಗಳು ಬರಬೇಕು ಎಂದು ಇದೇ ವೇಳೆ ಚಿತ್ರತಂಡವನ್ನು ನಟ ಕೊಂಡಾಡಿದ್ದಾರೆ.

56
ಉತ್ತಮ ಪ್ರದರ್ಶನ

10 ದಿನಗಳ ಹಿಂದೆಯೇ ಭೇಟಿಯಾಗಬೇಕಿತ್ತು. ನನಗೆ ಬಹಳ ಖುಷಿಯಾಗುತ್ತಿದೆ. ನಮ್ಮ ಕನ್ನಡ ಸಿನಿಮಾ ಉತ್ತಮ ಪ್ರದರ್ಶನ ನೀಡುತ್ತಿದೆ. ಹೈ ಬಜೆಟ್​ ಸಿನಿಮಾಗಳೇ ಓಡೋದು ಅನ್ನೋ ಯುಗದಲ್ಲಿ ಉತ್ತಮ ಸಿನಿಮಾಗಳು ಗೆಲ್ಲುತ್ತಿವೆ. ನಮ್ಮ ಭಾಷೆ, ನಮ್ಮ ಚಿತ್ರಗಳು ಸದಾ ಉನ್ನತ ಮಟ್ಟದಲ್ಲಿರಬೇಕು ಎಂದು ನಟ ಹೇಳಿದ್ದಾರೆ.

66
ಕಲೆಕ್ಷನ್​ ಹೀಗಿದೆ

ಇಲ್ಲಿಯವರೆಗೆ, ಪ್ರೇಮದ ಊರಲಿ ಚಿತ್ರದ 24 ದಿನಗಳ ಒಟ್ಟು ಕಲೆಕ್ಷನ್​ ಹೀಗಿದೆ: ಗ್ಲೋಬಲ್ ಕಲೆಕ್ಷನ್​: 93.07 ಕೋಟಿ ರೂಪಾಯಿ; ಭಾರತದ ಗ್ರಾಸ್​ ಕಲೆಕ್ಷನ್​: 90.57 ಕೋಟಿ ರೂಪಾಯಿ ಹಾಗೂ ಇಂಡಿಯಾ ನೆಟ್​ ಕಲೆಕ್ಷನ್​:​ 77.52 ಕೋಟಿ ರೂಪಾಯಿ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories