ಬೆಂಗಳೂರಿನಿಂದ 21 ಗಂಟೆ ಪ್ರಯಾಣಿಸಿ ಅಮೆರಿಕದ ಆಸ್ಪತ್ರೆ ಮುಂದೆ ನಿಂತಾಗ ಸ್ವಲ್ಪ ಧೈರ್ಯ ಬಂತು. ಆಪರೇಷನ್ ಆದ ಇಡೀ ದಿನ ಒಂದು ಸರ್ಕಸ್ ರೀತಿ ಇತ್ತು. ಒಂದೇ ದಿನ ಆರು ಸರ್ಜರಿ ಆಗಿದೆ. ಆದರೆ, ಎಷ್ಟು ಹೊಲಿಗೆ ಹಾಕಿದ್ದಾರೆ ಎಂಬುದು ಗೊತ್ತಿಲ್ಲ. ವೈದ್ಯರು, ಅಭಿಮಾನಿಗಳು, ಕುಟುಂಬದವರು, ಸ್ನೇಹಿತರು ಹೀಗೆ ಎಲ್ಲರ ಆರೈಕೆ ಮತ್ತು ಆಶೀರ್ವಾದದಿಂದ ಕೊನೆಗೂ ಚಿಕಿತ್ಸೆ ಯಶಸ್ವಿಯಾಗಿ ನಡೆಯಿತು. ನನ್ನ ಪತ್ನಿ ಗೀತಾ ತಾಯಿಗಿಂತ ಹೆಚ್ಚಾಗಿ ನನ್ನ ಈ ಸಂದರ್ಭದಲ್ಲಿ ನೋಡಿಕೊಂಡರು.