ಹೊಸ ಅಧ್ಯಾಯ ಆರಂಭ; ತಾಯಿಯಾಗುತ್ತಿರುವ ಸಂಭ್ರಮದಲ್ಲಿ ತಬಲಾ ನಾಣಿ ಪುತ್ರಿ!

First Published | Nov 6, 2024, 12:19 PM IST

ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ ನಟ ರಾಮ್ ಚೇತನ್ ಮತ್ತು ಚೈತ್ರಾ. ತಬಲಾ ನಾಣಿ ಮನೆಯಲ್ಲಿ ಡಬಲ್ ಸಂಭ್ರಮ..... 

ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟ ತಬಲಾ ನಾಣಿ ಅವರ ಏಕೈಕ ಪುತ್ರಿ ಚಿತ್ರಾ ಮತ್ತು ನಟ ರಾಮ್ ಚೇತನ್ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ, ಸಿಹಿ ಸುದ್ದಿಯನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.

ಹೌದು! ವೀಲ್ ಚೇರ್ ರೋಮಿಯೋ ಚಿತ್ರದ ನಟ ರಾಮ್ ಚೇತನ್ ಮತ್ತು ಚಿತ್ರಾ ತಬಲಾ ನಾಣಿ ತಮ್ಮ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಅದ್ಧೂರಿಯಾಗಿ ಸೀಮಂತ ನೆರವೇರಿದೆ. 

Tap to resize

 'ಸಿಹಿ ಸುದ್ದಿ..ನಮ್ಮ ಜೀವನದಲ್ಲಿ ಹೊಸ ಅಧ್ಯಾಯ ಆರಂಭ. ನನಗೆ ಸೀರೆ ಉಡಿಸಿ ಜಡೆ ಹಾಕಿರುವುದು ನನ್ನ ತಾಯಿ ಮಂಜುಳಾ. ಪ್ರತಿಯೊಬ್ಬರಿಗೂ ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿ ಶುಭಾಶಯಗಳು' ಎಂದು ಚಿತ್ರಾ ಬರೆದುಕೊಂಡಿದ್ದಾರೆ.

ನೀಲಿ ಮತ್ತು ಹಸಿರು ಬಣ್ಣದ ಸೀರೆ ಧರಿಸಿರುವ ಚಿತ್ರಾ ಶಾಸ್ತ್ರ ಸಂಪ್ರದಾಯದ ಪ್ರಕಾರ ಮೊಗ್ಗಿನ ಜಡೆ ಧರಿಸಿ ಫೋಟೋಶೂಟ್ ಮಾಡಿದ್ದಾರೆ. ರೇಶ್ಮೆ ಪಂಚೆ ಶರ್ಟ್‌ನಲ್ಲಿ ರಾಮ್ ಕಾಣಿಸಿಕೊಂಡಿದ್ದಾರೆ.

ನವೆಂಬರ್ 16, 2023ರಂದು ಚಿತ್ರಾ ತಬಲಾ ನಾಣಿ ಮತ್ತು ರಾಮ್ ಚೇತನ್ ನಿಶ್ಚಿತಾರ್ಥ ನೆರವೇರಿತ್ತು. ಬೆಂಗಳೂರಿನ ನಂದಿ ಲಿಂಕ್‌ ಗ್ರೌಂಡ್ಸ್‌ನಲ್ಲಿ ಅದ್ಧೂರಿಯಾಗಿ ನಡೆಯಿತ್ತು.

ಫೆಬ್ರವರಿ, 2024ರಂದು ಬೆಂಗಳೂರಿನಲ್ಲಿ ಚಿತ್ರಾ ಮತ್ತು ರಾಮ್ ಮದವೆ ನಡೆದಿದೆ. ಇವರಿಬ್ಬರ ಮದುವೆಯಲ್ಲಿ ಕನ್ನಡ ಚಿತ್ರರಂಗದ ಸಾಕಷ್ಟು ಸೆಲೆಬ್ರಿಟಿಗಳು ಭಾಗಿಯಾಗಿದ್ದರು. 

Latest Videos

click me!