ಚಂದನವನಕ್ಕೆ ಎಂಟ್ರಿ ಕೊಟ್ಟ ರಾಣಿಯ ತಳುಕು, ಬಳುಕು ವೈಯ್ಯಾರಕ್ಕೆ ಸಿನಿರಸಿಕರು ಫಿದಾ!

First Published | Nov 6, 2024, 5:34 AM IST

ಚಂದನವನಕ್ಕೆ ಎಂಟ್ರಿ ಕೊಟ್ಟಿರುವ ಈ ಹೊಸ ಸುಂದರಿ ಯಾರು ಅನ್ನೋದು ನಿಮಗೆ ಗೊತ್ತಿದ್ಯಾ? ತಳುಕು ಬಳುಕಿನ ಸುಂದರಿ ಮಿ. ರಾಣಿ ಸಿನಿಮಾ ಮೂಲಕ ರಂಜಿಸೋಕೆ ಬರ್ತಿದ್ದಾರೆ.
 

ಸ್ಯಾಂಡಲ್ ವುಡ್ ಗೆ (Sandalwood) ಒಬ್ಬ ಸುಂದರಿಯ ಎಂಟ್ರಿಯಾಗಿದೆ. ತಳುಕು ಬಳುಕೊನ ವೈಯಾರಿಯನ್ನು ನೋಡಿ ಸಿನಿ ರಸಿಕರು ಫಿದಾ ಆಗಿದ್ದಾರೆ. ಅಷ್ಟಕ್ಕೂ ಕ್ರಾಪ್ ಟಾಪ್, ಆಫ್ ಶೋಲ್ಡರ್ ಗೌನ್ ಧರಿಸಿ ಮಿಂಚುತ್ತಿರೋ ಈ ನಟಿ ಯಾರು ಹೇಳುವೀರಾ? 
 

ಇವರು ಬೇರಾರು ಅಲ್ಲ ಮಿಸ್ಟರ್ ರಾಣಿ ಮೂಲಕ ಕನ್ನಡಿಗರ ಮನಸು ಗೆಲ್ಲುತ್ತಿರುವ ನಟಿ ಅಲ್ಲ, ನಟ ದೀಪಕ್ ಸುಬ್ರಹ್ಮಣ್ಯ. ದೀಪಕ್ ಸುಬ್ರಹ್ಮಣ್ಯ (Deepak Subramanya)ಅಂದ್ರೆ ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿಯ ಜಾಹ್ನವಿಯ ಗಂಡ ಜಯಂತ್. 
 

Tap to resize

ಲಕ್ಷ್ಮೀ ನಿವಾಸ (Lakshmi Nivasa) ಧಾರಾವಾಹಿಯಲ್ಲಿ ದೀಪಕ್ ಸುಬ್ರಹ್ಮಣ್ಯ ಸೈಕೋ ಗಂಡನಾಗಿ ಅದ್ಭುತವಾಗಿ ನಟಿಸುತ್ತಿದ್ದಾರೆ. ಇವರ ನಟನೆ ವೀಕ್ಷಕರಿಗೆ ಹುಚ್ಚು ಹಿಡಿಸುತ್ತಿದೆ. ಯಾಕಂದ್ರೆ ಜಾಹ್ನವಿ ತನ್ನನ್ನೇ ಪ್ರೀತಿಸಬೇಕು, ನನ್ನ ಜೊತೆಯೇ ಇರಬೇಕು ಎನ್ನುವ ಸೈಕೋ ಪಾತ್ರ ಜನರ ಮನಸನ್ನೇ ಕೆಡಿಸಿತ್ತು, ಅಷ್ಟೊಂದು ಅದ್ಭುತವಾಗಿ ನಟಿಸುತ್ತಾರೆ 
 

ಅದೇ ಅದ್ಭುತ ಪ್ರತಿಭೆ ಇದೀಗ ಮಿಸ್ಟರ್ ರಾಣಿ (Mr Rani) ಸಿನಿಮಾ ಮೂಲಕ ಚಂದನವನದಲ್ಲಿ ಮೋಡಿ ಮಾಡಲು ಬಂದಿದ್ದಾರೆ. ದೀಪಕ್ ಸುಬ್ರಹ್ಮಣ್ಯ ಅವರ ಹೊಸ ಅವತಾರವನ್ನು ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. 
 

ಮಿಸ್ಟರ್ ರಾಣಿ ಸಿನಿಮಾದ ಪೋಸ್ಟರ್ ಬಿಡುಗಡೆಯಾಗಿ ಭಾರಿ ಸದ್ದು ಮಾಡಿತ್ತು,ಆದಾದ ನಂತರ ಟೀಸರ್ ರಿಲೀಸ್ ಆಗಿ ಸಹ ಭಾರಿ ಸದ್ದು ಮಾಡ್ತಿದೆ. ಈ ಟೀಸರ್ ನೋಡಿದ್ರೆ ನಿಜವಾಗ್ಲೂ ಇದು ಹುಡುಗೀನೇನಾ ಅನ್ನೋವಷ್ಟು ಚೆನ್ನಾಗಿ ಕಾಣಿಸಿಕೊಂಡಿದ್ದಾರೆ ದೀಪಕ್. 
 

ಇದೊಂದು ಕಾಮಿಡಿ ಸಿನಿಮಾವಾಗಿದ್ದು, ಸದ್ಯ ಟೀಸರ್ ಭಾರಿ ಸದ್ದು ಮಾಡ್ತಿದೆ. ಇಲ್ಲಿ ನಾಯಕನೇ ಸಿನಿಮಾ ನಾಯಕಿಯಾಗಿದ್ದಾರೆ. ಮಧುಚಂದ್ರ ಅವರು ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾಕ್ಕಾಗಿ ದೀಪಕ್ ಸುಬ್ರಹ್ಮಣ್ಯ ಮಾಡಿರೋ ಡೆಡಿಕೇಶನ್ ನೋಡಿ ಫ್ಯಾನ್ಸ್ ಮನ ಸೋತಿದ್ದಾರೆ. ಅವರು ಇಷ್ಟು ಕಷ್ಟಪಟ್ಟಿದ್ದಕ್ಕಾದ್ರೂ ಈ ಸಿನಿಮಾ ಸಿಕ್ಕಾಪಟ್ಟೆ ಓಡ್ಲಿ ಅಂತ ಹಾರೈಸ್ತಿದ್ದಾರೆ ಜನ. 
 

ಹೀರೋ ಆಗುವ ಕನಸನ್ನು ಹೊತ್ತು ಚಿತ್ರರಂಗಕ್ಕೆ ಬರುವ ಯುವಕ ನಂತರ ಆಕಸ್ಮಿಕವಾಗಿ ಹೇಗೆ ಹೀರೋಯಿನ್ ಆಗುತ್ತಾನೆ ಅನ್ನೋ  ವಿಭಿನ್ನ ಕಥೆ ಈ ಸಿನಿಮಾದಲ್ಲಿ ಇದೆ ಅನ್ನೋದು ಟೀಸರ್​ ಮೂಲಕ ಗೊತ್ತಾಗಿದೆ. ಸಿನಿಮಾದಲ್ಲಿ ದೀಪಕ್ ಸುಬ್ರಹ್ಮಣ್ಯ ಅವರ ಗೆಟಪ್ ನೋಡಿ, ಹೀರೋಯಿನ್ ಗಳಿಗಿಂತ ನೀವೇ ಚೆನ್ನಾಗಿದ್ದೀರಿ ಅಂತಿದ್ದಾರೆ ಜನ. 
 

Latest Videos

click me!