ಚಂದನವನದ ಹುಡುಗಿ, ಸಲಗ ಬೆಡಗಿ ಸಂಜನಾ ಆನಂದ್… ಸೌಂದರ್ಯದ ಖಜಾನೆ! ಏನಂತೀರಾ?

Published : Aug 31, 2024, 12:31 PM ISTUpdated : Aug 31, 2024, 12:39 PM IST

ಸಲಗ ಸಿನಿಮಾ ಮೂಲಕ ಜನಪ್ರಿಯತೆ ಪಡೆದ ಸುಂದರಿ ಸಂಜನಾ ಆನಂದ್ ನ್ಯೂ ಲುಕ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.   

PREV
17
ಚಂದನವನದ ಹುಡುಗಿ, ಸಲಗ ಬೆಡಗಿ ಸಂಜನಾ ಆನಂದ್… ಸೌಂದರ್ಯದ ಖಜಾನೆ! ಏನಂತೀರಾ?

ಸ್ಯಾಂಡಲ್’ವುಡ್’ನಲ್ಲಿ ಸದ್ಯಕ್ಕೆ ಬ್ಯುಸಿ ಆಗಿರುವ ನಾಯಕಿ ಅಂದ್ರೆ ಅದು ಸಂಜನಾ ಆನಂದ್ (Sanjana Anand). ಕನ್ನಡ ಚಿತ್ರರಂಗದಲ್ಲಿ ಹೊಸ ಭರವಸೆ ಹುಟ್ಟಿಸಿದ ನಾಯಕಿಯರಲ್ಲಿ ಇವರೂ ಒಬ್ಬರು. ಇವರ ಅಂದಕ್ಕೆ ಸಿನಿರಸಿಕರು ಫಿದಾ ಆಗಿರೋದು ನಿಜಾ. 
 

27

ತಮ್ಮ ಸರಳ ಸೌಂದರ್ಯ ಮತ್ತು ಸಹಜ ಅಭಿನಯದಿಂದಲೇ ಕನ್ನಡಿಗರ ಮನ ಗೆದ್ದು, ಸಲಗ ಸಿನಿಮಾದಲ್ಲಿ ದುನಿಯಾ ವಿಜಯ್ ಗೆ (Duniya Vijay) ನಾಯಕಿಯಾಗುವ ಮೂಲಕ ಜನಪ್ರಿಯತೆ ಪಡೆದ ಸಂಜನಾ, ಹೊಸ ಲುಕ್ ಇದೀಗ ವೈರಲ್ ಆಗಿದ್ದು, ಅಭಿಮಾನಿಗಳು ಆಕೆಯನ್ನು ನೋಡಿ ಸೌಂದರ್ಯದ ಖಜಾನೆ ಎನ್ನುತ್ತಿದ್ದಾರೆ. 
 

37

ನೇರಳೆ ಬಾರ್ಡರ್ ಇರುವಂತಹ ಕೆಂಪು ಬಣ್ಣದ ಚೆಕ್ಸ್ ಸೀರೆಯುಟ್ಟಿರುವ ಸಂಜನಾ, ಅದಕ್ಕೆ ಮ್ಯಾಚ್ ಆಗುವಂತಹ ಕೆಂಪು ಬಣ್ಣದ ಟ್ಯೂಬ್ ಬ್ಲೌಸ್ ಧರಿಸಿ ಫೋಟೊ ಶೂಟ್ (Photoshoot) ಮಾಡಿಸಿಕೊಂಡಿದ್ದು, ಈ ಲುಕ್ ನಲ್ಲಿ ನಟಿ ಸಂಜನಾ ಮಹಾರಾಣಿಯಂತೆ ಮಿಂಚುತ್ತಿದ್ದಾರೆ. 
 

47

ನಟಿ ತಮ್ಮ ಸೀರೆಗೆ ಒಪ್ಪುವಂತೆ, ದೊಡ್ಡದಾದ ಆಂಟಿಕ್ ಹಾರ, ಬಳೆ, ಉಂಗುರ, ಭಾಜುಬಂಧಿ, ದೊಡ್ಡದಾದ ಜುಮುಕಿ, ಹಣೆ ಪಟ್ಟಿ ಅಥವಾ ಮುಂದಾಲೆ, ಮೂಗಲ್ಲಿ ಪುಟ್ಟದಾದ ಮೂಗುತ್ತಿ ಧರಿಸಿದ್ದು ತಮ್ಮ ಮುದ್ದಾದ ನಗುವಿನೊಂದಿಗೆ ಫೋಟೊಗಳಲ್ಲಿ ಮತ್ತಷ್ಟು ಮುದ್ದಾಗಿ, ಅಪ್ಪಟ ಮಹಾರಾಣಿಯಂತೆ ಕಾಣುತ್ತಿದ್ದಾರೆ ಸಂಜನಾ. 
 

57

ಸಂಜನಾ ಈ ಹೊಸ ಲುಕ್ ಗೆ ಅಭಿಮಾನಿಗಳು ಮನಸೋತಿದ್ದು, ಈ ಅಂದವನ್ನ ನೋಡಿದ್ರೆ ಹುಡುಗ್ರು ಜೀವನ ಮಾಡೋದಾದ್ರೂ ಹೇಗೆ? ಎಂದು ಒಬ್ಬ ಅಭಿಮಾನಿ ಕೇಳಿದ್ರೆ, ಮತ್ತೊಬ್ಬರು ನೀವು ಹೇಗೆ ಎಲ್ಲಾ ಫೋಟೊಗಳಲ್ಲೂ ಇಷ್ಟೊಂದು ಅಂದವಾಗಿ ಕಾಣಿಸಿಕೊಳ್ಳೋದಕ್ಕೆ ಸಾಧ್ಯ? ಎಂದಿದ್ದಾರೆ. 
 

67

ಇನ್ನೊಂದಿಷ್ಟು ಜನರು ಚಿನ್ನಮ್ಮ, ಕ್ವೀನ್, ಮುದ್ದು ಗೊಂಬೆ, ಏಂಜಲ್ ಥರ ಕಾಣಿಸ್ತಿದ್ದೀರಾ, ರಾಧೆ ರಾಧೆ, ನೀನಂಗೆ ಅಲ್ಲವಾ, ಎಷ್ಟು ಚಂದ ನಿನ್ನ ನಯನ, ಎಷ್ಟಂತ ಬರೆಯಲಿ ಕವನ, ನಿನ್ನ ರೂಪಿಸಿದ ಬ್ರಹ್ಮನಿಗೆ ಮಾಡಬೇಕು ಸನ್ಮಾನ ಎಂದು ಕವಿತೆ ಕೂಡ ಬರೆದಿದ್ದಾರೆ. ಅಷ್ಟೇ ಅಲ್ಲ ಸೌಂದರ್ಯದ ಗಣಿ, ಬ್ಯೂಟಿಫುಲ್, ಅಪ್ಸರೆ, ಗಾರ್ಜಿಯಸ್, ನಗುವಿನ ಒಡತಿ ಎಂದೆಲ್ಲಾ ಕರೆಯುವ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ. 
 

77

ಇನ್ನು ಕರಿಯರ್ ವಿಷ್ಯಕೆ ಬರೋದಾದ್ರೆ ಸಂಜನಾ ಕೈಯಲ್ಲಿ ಇದೀಗ ಎರಡು ಸಿನಿಮಾಗಳಿವೆ. ಈ ವರ್ಷದ ಸಖತ್ ಬ್ಯುಸಿ ನಟಿ ಇವರು. ಈ ವರ್ಷ ಸಂಜನಾ ರಾಯಲ್, ಹಯಗ್ರಿವ, ಮುಧೋಲ್, ಗೌರಿ, ಸಿನಿಮಾಗಳಲ್ಲಿ ನಟಿಸಿದ್ದು ಆಗಿದೆ. ಕ್ಷತ್ರೀಯ ಮತ್ತು ಮಳೆಬಿಲ್ಲು (Malebillu) ಸಿನಿಮಾದಲ್ಲೂ ಸಂಜನಾ ನಟಿಸುತ್ತಿದ್ದಾರೆ. ಕನ್ನಡದ ಜೊತೆಗೆ ತೆಲುಗಿನ ಸಿನಿಮಾಗಳಲ್ಲೂ ಸಂಜನಾ ನಟಿಸುತ್ತಿದ್ದಾರೆ. 
 

Read more Photos on
click me!

Recommended Stories