ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಅವರು ಪತ್ನಿ ಪ್ರಿಯಾಂಕಾ, ತಂದೆ ತಾಯಿ, ಅಣ್ಣ-ಅತ್ತಿಗೆ ಹಾಗೂ ಮಕ್ಕಳೊಂದಿಗೆ ಹುಟ್ಟೂರಾದ ಕುಂದಾಪುರಕ್ಕೆ ತೆರಳಿ, ದೇಗುಲದರ್ಶನ ಮಾಡಿ, ಸಮುದ್ರ ತೀರ ಹಾಗೂ ಇನ್ನಿತರ ಪ್ರದೇಶಗಳಿಗೆ ಭೇಟಿ ನೀಡಿ ಎಂಜಾಯ್ ಮಾಡಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ರಿಯಲ್ ಸ್ಟಾರ್ ಎಂದೇ ಖ್ಯಾತಿ ಪಡೆದ ನಟ ಉಪೇಂದ್ರ ಮೂಲತಃ ಉಡುಪಿಯ ಕುಂದಾಪುರದವರು. ಇದೀಗ ಬ್ಯುಸಿ ಶೆಡ್ಯೂಲ್ ನಡುವೆ ಬ್ರೇಕ್ ತೆಗೆದುಕೊಂಡು ಉಪೇಂದ್ರ ತಮ್ಮ ಪೂರ್ತಿ ಕುಟುಂಬ ಸಮೇತರಾಗಿ ಕುಂದಾಪುರಕ್ಕೆ ಬಂದಿಳಿದಿದ್ದಾರೆ.
26
ಫ್ಯಾಮಿಲಿ ಜೊತೆ ಹುಟ್ಟೂರಿಗೆ
ಉಪೇಂದ್ರ, ತಮ್ಮ ಪತ್ನಿ ಪ್ರಿಯಾಂಕಾ, ತಂದೆ ಮಂಜುನಾಥ್ ರಾವ್ ತಾಯಿ ಅನುಸೂಯ, ಅಣ್ಣ ಸುದೀಂದ್ರ ರಾವ್ ಮತ್ತು ಅತ್ತಿಗೆ ವೀಣಾ ಹಾಗೂ ಮಗ ಆಯುಷ್, ಅಣ್ಣನ ಮಕ್ಕಳಾದ ನಿರಂಜನ್ ಮತ್ತು ಸುದಿರ್ಶನ್ ಜೊತೆ ಹುಟ್ಟೂರಿಗೆ ಬಂದಿದ್ದಾರೆ ಉಪೇಂದ್ರ.
36
ದೇಗುಲ ದರ್ಶನ
ಈ ಸ್ಟಾರ್ ಕುಟುಂಬ ಕುಂದಾಪುರ ಕರಾವಳಿ ಭಾಗದ ದೇವಸ್ಥಾನಗಳಿಗೆ ಭೇಟಿ ನೀಡಿ, ಅಲ್ಲಿ ವಿಶೇಷ ಪೂಜೆ ಸಲ್ಲಿಸಿ, ದೇವರ ಆಶೀರ್ವಾದ ಪಡೆದಿದ್ದಾರೆ. ಉಪೇಂದ್ರ ಸೇರಿ ಮನೆಯ ಗಂಡ ಮಕ್ಕಳೆಲ್ಲಾ ಪಂಚೆ ಶಲ್ಯ ಧರಿಸಿ, ಸಾಂಪ್ರದಾಯಿಕ ಧಿರಿಸಿನಲ್ಲಿ ಕಂಡು ಬಂದಿದ್ದಾರೆ. ನಿರಂಜನ್ ಒಂದಷ್ಟು ಫೋಟೊಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ನಟ ಕುಟುಂಬ ಸಮೇತರಾಗಿ ಕುಂಭಾಶಿ ಅನೆಗುಡ್ಡೆ ವಿನಾಯಕ ದೇಗುಲ, ಕುಲ ದೇವರಾಗಿರುವ ಸಾಲಿಗ್ರಾಮ ಗುರು ನರಸಿಂಹ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಜೊತೆಗೆ ಕುಂದಾಪುರದ ಸಮುದ್ರ ತೀರದಲ್ಲಿ ಆಟವಾಡುತ್ತಾ ಕಾಲ ಕಳೆದಿದ್ದಾರೆ.
56
ಕುಟುಂಬದ ನಾಗಸ್ಥಾನಕ್ಕೂ ಭೇಟಿ
ಇನ್ನು ಪ್ರಿಯಾಂಕ ಉಪೇಂದ್ರ ಫ್ಯಾಮಿಲಿ ತಮ್ಮ ಕುಟುಂಬದ ನಾಗಸನ್ನಿಧಿಗೂ ಭೇಟಿ ನೀಡಿದ್ದಾರೆ. ಇಲ್ಲಿಗೆ ಅವರು ಪ್ರತಿವರ್ಷ ನಾಗರ ಪಂಚಮಿಯಂದು ಬಂದು ಪೂಜೆ ಸಲ್ಲಿಸುತ್ತಾರೆ. ಉಪೇಂದ್ರ ಕುಟುಂಬದ ಒಗ್ಗಟ್ಟನ್ನು ನೋಡಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ.
66
ಯಾವ ಸಿನಿಮಾ ಮಾಡ್ತಿದ್ದಾರೆ?
ಉಪೇಂದ್ರ ಅವರದ್ದು ಸಿನಿಮಾ ಫ್ಯಾಮಿಲಿ ಆಗಿರೋದರಿಂದ, ಉಪೇಂದ್ರ ಅವರು ಸದ್ಯ ಬುದ್ಧಿವಂತ 2, ಭಾರ್ಗವ, ತ್ರಿಶೂಲಂ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪತ್ನಿ ಪ್ರಿಯಾಂಕ, ಕೂಡ ಕನ್ನಡ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ, ಮಗ ಆಯುಷ್ ಹೊಸ ಸಿನಿಮಾ ಶೀಘ್ರದಲ್ಲೇ ಸೆಟ್ಟೇರಲಿದೆ. ಅಣ್ಣನ ಮಗ ನಿರಂಜನ್ ಅಭಿನಯದ ಸೀತಾ ಪಯಣ ಸಿನಿಮಾ ಇತ್ತೀಚೆಗಷ್ಟೇ ರಿಲೀಸ್ ಆಗಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.