Rashmika Mandanna And Vijay Devarakonda Wedding: ಸೌತ್ ಸಿನಿರಂಗದ ಸೆಲೆಬ್ರಿಟಿಗಳಾದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ. ಈ ಜೋಡಿ ಅಕ್ಟೋಬರ್‌ನಲ್ಲಿ ಹೈದರಾಬಾದ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಈ ವಿಷಯವನ್ನು ರಹಸ್ಯವಾಗಿಡಲಾಗಿತ್ತು.
ವರದಿಗಳ ಪ್ರಕಾರ, 2026ರ ಫೆಬ್ರವರಿ 26ರಂದು ಉದಯಪುರದ ಅರಮನೆಯಲ್ಲಿ ಇವರ ಮದುವೆ ನಡೆಯಲಿದೆ. ಸಮಾರಂಭದಲ್ಲಿ ಆಪ್ತರು, ಕುಟುಂಬಸ್ಥರು ಮಾತ್ರ ಭಾಗಿಯಾಗಲಿದ್ದು, ಬಳಿಕ ಹೈದರಾಬಾದ್‌ನಲ್ಲಿ ಚಿತ್ರರಂಗದ ಸ್ನೇಹಿತರಿಗಾಗಿ ಆರತಕ್ಷತೆ ನಡೆಯಲಿದೆ.
26
ಎರಡು ಸಂಪ್ರದಾಯದಲ್ಲಿ ಮದುವೆ
ಹಳದಿ, ಮೆಹೆಂದಿ, ಸಂಗೀತ ಕಾರ್ಯಕ್ರಮಗಳು ನಡೆಯಲಿದೆ. ಇದಾದ ಬಳಿಕ ತೆಲುಗು ಹಾಗೂ ಕೊಡವ ಶೈಲಿಯಲ್ಲಿ ಮದುವೆ ನಡೆಯಲಿದೆ. ಈಗಾಗಲೇ ಮದುವೆ ನಡೆಸುವ ಪುರೋಹಿತರು ಉದಯಪುರಕ್ಕೆ ಕಾಲಿಟ್ಟಿದ್ದಾರೆ.
36
ದಿನಾಂಕವನ್ನು ಅಧಿಕೃತವಾಗಿ ಘೋಷಿಸಲಿ
ವಿಜಯ್ ಮತ್ತು ರಶ್ಮಿಕಾ ತಮ್ಮ ಮದುವೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಲಿ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ಜೋಡಿ ಫೆಬ್ರವರಿ 26 ರಂದು ಮದುವೆಯಾಗಲಿದೆ ಎಂಬ ಸುದ್ದಿ ಈಗ ಹೊರಬಿದ್ದಿದೆ. ಪ್ರೇಮಿಗಳ ತಿಂಗಳಾದ ಫೆಬ್ರವರಿಯಲ್ಲಿ ಮದುವೆ ನಡೆಯುತ್ತಿರುವುದು ಮತ್ತಷ್ಟು ವಿಶೇಷವಾಗಿದೆ.
ಹಿಂದೂಸ್ತಾನ್ ಟೈಮ್ಸ್ ವರದಿ ಪ್ರಕಾರ, "ರಶ್ಮಿಕಾ ಮತ್ತು ವಿಜಯ್ ಮದುವೆ ಫೆಬ್ರವರಿ 26 ರಂದು ಉದಯಪುರದ ಅರಮನೆಯಲ್ಲಿ ನಡೆಯಲಿದೆ. ಅವರು ಹೆರಿಟೇಜ್ ಪ್ರಾಪರ್ಟಿಯೊಂದನ್ನು ಅಂತಿಮಗೊಳಿಸಿದ್ದಾರೆ. ನಿಶ್ಚಿತಾರ್ಥದಂತೆ ಮದುವೆಯನ್ನೂ ಖಾಸಗಿಯಾಗಿ ನಡೆಸಲು ಯೋಜಿಸಿದ್ದು, ಆಪ್ತರು ಮಾತ್ರ ಭಾಗವಹಿಸಲಿದ್ದಾರೆ. ಮಾರ್ಚ್ 3ರಂದು ಹೈದರಾಬಾದ್‌ನಲ್ಲಿ ಆರತಕ್ಷತೆ ನಡೆಯಲಿದೆ.
56
'ದಿ ಗರ್ಲ್‌ಫ್ರೆಂಡ್'
ಹೈದರಾಬಾದ್‌ನಲ್ಲಿ ನಡೆದ ರಶ್ಮಿಕಾಳ 'ದಿ ಗರ್ಲ್‌ಫ್ರೆಂಡ್' ಚಿತ್ರದ ಸಕ್ಸಸ್ ಇವೆಂಟ್‌ನಲ್ಲಿ ಈ ಜೋಡಿಯ ಪ್ರೀತಿಯ ಕ್ಷಣವೊಂದು ಕ್ಯಾಮರಾದಲ್ಲಿ ಸೆರೆಯಾಗಿತ್ತು. ಈ ಕಾರ್ಯಕ್ರಮದ ವೇಳೆ ವಿಜಯ್, ರಶ್ಮಿಕಾ ಕೈ ಹಿಡಿದು ಮುತ್ತಿಟ್ಟರು. ಈ ದೃಶ್ಯ ಎಲ್ಲರ ಗಮನ ಸೆಳೆದಿದೆ. ವಿಜಯ್ ಪ್ರೀತಿಯಿಂದ ನೋಡಿದಾಗ ರಶ್ಮಿಕಾ ನಾಚಿಕೊಂಡರು.
66
ವಯಸ್ಸಿನ ಅಂತರ
ಏಪ್ರಿಲ್ 5, 1996 ರಂದು ಜನಿಸಿದ ರಶ್ಮಿಕಾಗೆ 29 ವರ್ಷ. ಇನ್ನು ಮೇ 9, 1989 ರಂದು ಜನಿಸಿದ ವಿಜಯ್‌ಗೆ 36 ವರ್ಷ. ಈ ಇಬ್ಬರು ನಟರ ನಡುವೆ 7 ವರ್ಷಗಳ ವಯಸ್ಸಿನ ಅಂತರವಿದೆ. ರಶ್ಮಿಕಾ ಈ ಹಿಂದೆ ಜುಲೈ 2017 ರಲ್ಲಿ ನಟ ರಕ್ಷಿತ್ ಶೆಟ್ಟಿ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ, ಸೆಪ್ಟೆಂಬರ್ 2018 ರಲ್ಲಿ ಈ ನಿಶ್ಚಿತಾರ್ಥ ಮುರಿದುಬಿತ್ತು. ಬ್ರೇಕಪ್‌ಗೆ ಕಾರಣ ಏನೆಂಬುದು ಸಾರ್ವಜನಿಕವಾಗಿ ಬಹಿರಂಗವಾಗಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.