ಅಟ್ಯಾಚ್‌ಮೆಂಟ್‌ನಲ್ಲಿ ನಂಬಿಕೆಯಿಲ್ಲ, ಒಬ್ನೇ ಇರೋಕೆ ಖುಷಿ: ರಶ್ಮಿಕಾ ಮದುವೆ ಬಳಿಕ ರಕ್ಷಿತ್‌ ಶೆಟ್ಟಿ Interview

Published : Mar 01, 2026, 03:34 PM IST

ರಶ್ಮಿಕಾ ಮಂದಣ್ಣ ಹಾಗೂ ವಿಜಯ್‌ ದೇವರಕೊಂಡ ಮದುವೆ ಆದರು. ಈ ಹಿಂದೆ ರಶ್ಮಿಕಾ ಜೊತೆ ಎಂಗೇಜ್‌ ಆಗಿದ್ದ ರಕ್ಷಿತ್‌ ಶೆಟ್ಟಿ ಅವರು ಕೆಲ ಸಮಯದಿಂದ ಎಲ್ಲಿಯೂ ಕಾಣಿಸಿಕೊಂಡಿಲ್ಲ.  ರಶ್ಮಿಕಾ ಮದುವೆ ಬಳಿಕ ರಕ್ಷಿತ್‌ ಅವರು ಟೈಮ್ಸ್‌ ಆಫ್‌ ಇಂಡಿಯಾಗೆ ಸಂದರ್ಶನ ನೀಡಿದ್ದಾರೆ. 

PREV
15
'ಗೇಮ್ ಆಫ್ ಥ್ರೋನ್ಸ್' ನೋಡಿದ ರಕ್ಷಿತ್‌ ಶೆಟ್ಟಿ

'ಗೇಮ್ ಆಫ್ ಥ್ರೋನ್ಸ್' ಸರಣಿಯನ್ನು ಎಂಟು ಬಾರಿ ನೋಡಿದ್ದಾರಂತೆ. ಅದರ ಬರವಣಿಗೆ, ಪ್ರತಿ ಪಾತ್ರವನ್ನು ಅಷ್ಟು ಆಳವಾಗಿ ಚಿತ್ರಿಸಿದ್ದಾರೆ ಎಂದು ರಕ್ಷಿತ್‌ ಶೆಟ್ಟಿ ಹೇಳಿದ್ದಾರೆ.

25
ಸೋಶಿಯಲ್‌ ಮೀಡಿಯಾದಿಂದ ದೂರ ಇರೋದ್ಯಾಕೆ?

'ನಾನು ಯಾರಿಗೂ ಒತ್ತಡ ಹೇರುವುದಿಲ್ಲ, ಯಾರಿಂದಲೂ ಒತ್ತಡ ತಗೊಳ್ಳಲು ಇಷ್ಟಪಡುವುದಿಲ್ಲ. ಪಾತ್ರಗಳ ಬಗ್ಗೆ ಅರ್ಥ ಮಾಡಿಕೊಳ್ಳಲು ಸೋಶಿಯಲ್‌ ಮೀಡಿಯಾದಿಂದ ದೂರ ಇದೀನಿ, ಪ್ರತಿ ಪಾತ್ರ ಏನು ಮಾಡುತ್ತದೆ ಎಂದು ನನಗೆ ಗೊತ್ತಿದೆ. ಆ ಪಾತ್ರವಾಗಿ ನಾನು ಬದುಕಿರುವೆ, ಹೀಗಾಗಿ ನಾನು ಹೊರಗಡೆ ಕಾಣಿಸಿಕೊಳ್ಳಲ್ಲ, ಬರವಣಿಗೆ ಮಾಡ್ತಿದ್ದೇನೆ” ಎಂದು ರಕ್ಷಿತ್‌ ಶೆಟ್ಟಿ ಹೇಳಿದ್ದಾರೆ.

35
ಏಕಾಂಗಿಯಾಗಿ ಇರಲು ಬಿಟ್ಟರೆ ಖುಷಿ

“ನನಗೆ ಯಾರೂ ಪ್ರಶ್ನೆ ಕೇಳದೆ ಇದ್ದಾಗ, ವಿವರಣೆ ಕೇಳದಿದ್ದಾಗ, ನನ್ನನ್ನು ಏಕಾಂಗಿಯಾಗಿ ಬಿಟ್ಟಾಗ ಮಾತ್ರ ನಾನು ಖುಷಿ ಆಗಿರ್ತೀನಿ. ಪಾತ್ರಗಳನ್ನು ತೆರೆ ಮೇಲೆ ತರುವಾಗ, ಆ ಪಾತ್ರಗಳೊಳಗಡೆ ನಾನು ಪ್ರವೇಶ ಆಗಿ ಬದುಕಲು ನನಗೆ ಸಮಯ ಬೇಕು” ಎಂದು ಹೇಳಿದ್ದಾರೆ. "ಟೈಮ್, ಜಾಗ, ವ್ಯಾಮೋಹ ಎಂಬ ಪರಿಕಲ್ಪನೆಗಳಲ್ಲಿ ನನಗೆ ನಂಬಿಕೆಯಿಲ್ಲ” ಎಂದು ರಕ್ಷಿತ್‌ ಶೆಟ್ಟಿ ಹೇಳಿದ್ದಾರೆ.

45
'ರಿಚರ್ಡ್ ಆಂಥೋನಿ' ಸಿನಿಮಾ ತಡವಾಗ್ತಿರೋದ್ಯಾಕೆ?

'ರಿಚರ್ಡ್ ಆಂಥೋನಿ' ಸಿನಿಮಾಕ್ಕೆ ಎಷ್ಟು ಕಾಯುತ್ತಿದ್ದಾರೆ ಎಂದು ನನಗೆ ಗೊತ್ತು, ಕಾಯೋದು ಜಾಸ್ತಿ ಆಗಿರಬಹುದು, ಆದರೆ ನನಗೆ ಟೈಮ್‌ ಹೋಗೋದು ಗೊತ್ತಾಗ್ತಿಲ್ಲ. ನಾನು ಬರೆಯುತ್ತೇನೆ, ಧ್ಯಾನ ಮಾಡ್ತೀನಿ, ಆಮೇಲೆ ಸ್ಕ್ರಿಪ್ಟ್‌ ತಿದ್ದುತ್ತಿದ್ದೇನೆ” ಎಂದು ರಕ್ಷಿತ್‌ ಶೆಟ್ಟಿ ಹೇಳಿದ್ದಾರೆ.

55
ರಿಚರ್ಡ್ ಆಂಥೋನಿ ವಿಶೇಷ ಏನು?

'ಉಳಿದವರು ಕಂಡಂತೆ' ಸಿನಿಮಾದ ಸ್ಕ್ರಿಪ್ಟ್‌ನ್ನು ಕೇವಲ 12 ದಿನಗಳಲ್ಲಿ ಬರೆದಿದ್ದೆ. ಯಾವುದೇ ಒತ್ತಡವಿಲ್ಲದೆ, ಮುಗ್ಧತೆಯಿಂದ ಆ ಸಿನಿಮಾ ಮಾಡಿದ್ದೆ. ಈಗಲೂ ಅದು 'ಕಲ್ಟ್ ಸಿನಿಮಾ' ಆಗಿರುವುದು ಖುಷಿ ಕೊಟ್ಟಿದೆ. 'ರಿಚರ್ಡ್ ಆಂಥೋನಿ' ಅದರ ಪ್ರಿಕ್ವೆ, ಸೀಕ್ವೆಲ್ ಆಗಿದ್ದು, ಇದನ್ನು ದೊಡ್ಡ ಪ್ರಮಾಣದಲ್ಲಿ ಮಾಡ್ತೀವಿ, ಬೇರೆ ದೇಶಗಳಲ್ಲಿ ಶೂಟ್‌ ಆಗತ್ತೆ. ಅಭಿಮಾನಿಗಳಿಗೆ ಇದು ಪೈಸಾ ವಸೂಲ್‌ ಸಿನಿಮಾ ಆಗುತ್ತದೆ. ರಿಚರ್ಡ್ ಆಂಥೋನಿಯಲ್ಲಿ ನೀವು 'ರಿಚಿ 2.0' ಅನ್ನು ನೋಡುತ್ತೀರಿ" ಎಂದು ರಕ್ಷಿತ್ ಹೇಳಿದ್ದೇನೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories