ಟಾಕ್ಸಿಕ್ ಸಾಂಗ್ ಪೋಸ್ಟರ್ ಟೀಕೆ ಬೆನ್ನಲ್ಲೇ ಮತ್ತೊಂದು ಅಪ್‌ಡೇಟ್, ತಬಾಹಿ ಹಾಡಿನ ಮೊದಲ ಪೋಸ್ಟರ್‌ಗೆ ಕೆಲ ಟೀಕೆಗಳು ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಟಾಕ್ಸಿಕ್ ತಂಡ ಮತ್ತೊಂದು ಪೋಸ್ಟರ್ ಬಿಡುಗಡೆ ಮಾಡಿದೆ.
ಯಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಟಾಕ್ಸಿಕ್ ಬಿಡುಗಡೆಗೆ ಕಾತರ ಹೆಚ್ಚಾಗಿದೆ. ಸಿನಿಮಾ ಮೊದಲ ಹಾಡು ಮಾರ್ಚ್ 2ರಂದು ಬಿಡುಗಡೆಯಾಗುತ್ತಿದೆ. ಯಶ್ ಹಾಗೂ ಕಿಯಾರ ಜೋಡಿಯ ತಬಾಹಿ ಹಾಡಿನ ಪೋಸ್ಟರ್ ರಿಲೀಸ್ ಮಾಡಲಾಗಿತ್ತು. ಆದರೆ ಈ ಪೋಸ್ಟರ್‌ಗೆ ಕೆಲ ಟೀಕೆಗಳು ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ಟಾಕ್ಸಿಕ್ ತಂಡ 2ನೇ ಪೋಸ್ಟರ್ ರಿಲೀಸ್ ಮಾಡಿದೆ.
25
ತಬಾಹಿ ಸಾಂಗ್ ಪೋಸ್ಟರ್
ಯಶ್ ಹಾಗೂ ಕಿಯಾರ ಅಡ್ವಾಣಿಯ ರೋಮ್ಯಾಂಟಿಕ್ ಹಾಡಿನ ಪೋಸ್ಟರ್ ಇದಾಗಿದೆ. ಸಮುದ್ರ ಕಿನಾರೆಯಲ್ಲಿನ ರೊಮ್ಯಾಂಟಿಕ್ ಹಾಡಿನ ಪೋಸ್ಟರ್ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ಟಾಕ್ಸಿಕ್ ಸಿನಿಮಾದ ಕ್ರೈಂ ಥ್ರಿಲ್ಲರ್ ಮೂಡ್‌ನಿಂದ ಇದೀಗ ಅಭಿಮಾನಿಗಳು ಹೊರಬಂದಿದ್ದು ನೇರವಾಗಿ ರೊಮ್ಯಾನ್ಸ್ ಮೂಡ್‌ಗೆ ಜಾರಿದ್ದಾರೆ.
35
ಮೊದಲ ಪೋಸ್ಟರ್‌ಗೆ ಟೀಕೆ
ಯಶ್ ಕಿಯಾರ ಜೊತೆಯಾದ ತಬಾಹಿ ಸಾಂಗ್‌ನ ಮೊದಲ ಪೋಸ್ಟರ್ ಭಾರಿ ಕುತೂಹಲ ಸೃಷ್ಟಿಸಿತ್ತು. ಅಷ್ಟೇ ವೇಗದಲ್ಲಿ ಟೀಕೆಗೆ ಕಾರಣವಾಗಿತ್ತು. ಟಾಕ್ಸಿಕ್ ಸಿನಿಮಾ ತಂಡ ಕೇವಲ ಯಶ್ ಹೈಲೆಟ್ ಮಾಡುತ್ತಿದೆ. ಮೊದಲ ಪೋಸ್ಟರ್‌ನಲ್ಲಿ ಕಿಯಾರ ಮುಖ ಕಾಣಿಸುತ್ತಿಲ್ಲ. ಯಶ್ ಕ್ಯಾರೆಕ್ಟರ್‌ಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ ಎಂಬ ಟೀಕೆಗಳು ವ್ಯಕ್ತವಾಗಿತ್ತು.
ಮೊದಲ ಪೋಸ್ಟರ್‌ಗೆ ಟೀಕೆ ವ್ಯಕ್ತವಾದ ಕಾರಣ ಇದೀಗ 2ನೇ ತಬಾಹಿ ಸಾಂಗ್ ಪೋಸ್ಟರ್‌ನಲ್ಲಿ ಕಿಯಾರ ಅಡ್ವಾಣಿ ಫೋಕಸ್ ಆಗಿ ಪೋಸ್ಟರ್ ರಿಲೀಸ್ ಮಾಡಿದೆ. 2ನೇ ಪೋಸ್ಟರ್‌ನಲ್ಲಿ ಯಶ್‌ಗಿಂತ ಹೆಚ್ಚು ಕಿಯಾರಾಗೆ ಹೆಚ್ಚು ಫೋಕಸ್ ಮಾಡಲಾಗಿದೆ. ಈ ಮೂಲಕ ಟೀಕೆಗಳಿಗೆ ಟಾಕ್ಸಿಕ್ ತಂಡ ಉತ್ತರಿಸಿದೆ.
55
ಮಾರ್ಚ್ 19ಕ್ಕೆ ಸಿನಿಮಾ ರೀಲಿಸ್
ಮಾರ್ಚ್ 19ರಂದು ಟಾಕ್ಸಿಕ್ ಸಿನಿಮಾ ಬಿಡುಗಡೆಯಾಗುತ್ತಿದೆ. ಇದೇ ದಿನ ಧುರಂಧರ್ 2ನೇ ಪಾರ್ಟ್ ಸಿನಿಮಾ ಬಿಡುಗಡೆಯಾಗುತ್ತಿದೆ. ಎರಡು ಸಿನಿಮಾಗಳ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ. ಜೊತೆಗೆ ಪೈಪೋಟಿ ಕೂಡ ಡಬಲ್ ಆಗಿದೆ. ಯಾವ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸೌಂಡ್ ಮಾಡಲಿದೆ ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ.
ಮಾರ್ಚ್ 19ಕ್ಕೆ ಸಿನಿಮಾ ರೀಲಿಸ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.