ರಕ್ಷಿತ್ ಶೆಟ್ಟಿ ಹಾರ್ಟ್‌ಬ್ರೇಕ್, ಅಪ್ಡೇಟ್ ನಿರೀಕ್ಷೆಯಲ್ಲಿರುವಾಗಲೇ ಶ್ರದ್ದಾಂಜಲಿ ಸ್ಟೋರಿ ಪೋಸ್ಟ್ ಮಾಡಿದ ನಟ, ಅಭಿಮಾನಿಗಳು ರಕ್ಷಿತ್ ಶೆಟ್ಟಿ ಸೋಶಿಯಲ್ ಮೀಡಿಯಾ ಅಪ್‌ಡೇಟ್‌ಗಾಗಿ ಕಾಯುತ್ತಲೇ ಇರುವಾಗ ಈ ಪೋಸ್ಟ್ ಅಭಿಮಾನಿಗಳನ್ನು ಭಾವುಕರನ್ನಾಗಿಸಿದೆ.
ನಟ ರಕ್ಷಿತ್ ಶೆಟ್ಟಿ ಕುರಿತು ಅಭಿಮಾನಿಗಳು ಎಲ್ಲೆಡೆ ಹುಡುಕಾಡುತ್ತಿದ್ದಾರೆ. ಕಳೆದ ಕೆಲ ತಿಂಗಳಿನಿಂದ ರಕ್ಷಿತ್ ಶೆಟ್ಟಿ ಹೆಚ್ಚಾಗಿ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಸಿನಿಮಾ ಅಪ್‌ಡೇಟ್ ಕುರಿತ ರಕ್ಷಿತ್ ಯಾವುದೇ ಸುಳಿವಿಲ್ಲ. ಇತ್ತ ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಮದುವೆ ಬಳಿಕ ಅಭಿಮಾನಿಗಳು ರಕ್ಷಿತ್ ಶೆಟ್ಟಿ ಸೋಶಿಯಲ್ ಮೀಡಿಯಾ ಅಪ್ಡೇಟ್ ನರೀಕ್ಷೆಯಲ್ಲಿದ್ದರು. ಆದರೆ ರಕ್ಷಿತ್ ಪೋಸ್ಟ್ ನೋಡಿ ಜನರು ಭಾವುಕರಾಗಿದ್ದಾರೆ.
25
ರಕ್ಷಿತ್ ಶೆಟ್ಟಿ ಸ್ಟೋರಿ ಪೋಸ್ಟ್ ಏನು?
ರಕ್ಷಿತ್ ಶೆಟ್ಟಿ ತಮ್ಮ ಸೋಶಿಯಲ್ ಮೀಡಿಯಾ ಮೂಲಕ ಸ್ಟೋರಿ ಪೋಸ್ಟ್ ಮಾಡಿದ್ದಾರೆ. ಅದು ಸಹಾಯ ನಿರ್ದೇಶಕ, ಪ್ರೊಡಕ್ಷನ್ ಡಿಸೈನರ್ ಪ್ರತಿಭಾವಂತ ಶರತ್ ಮಲ್ಲೇಶ್ ನಿಧನ ವಾರ್ತೆ. ಯುವ ಹಾಗೂ ಪ್ರತಿಭಾವಂತ ನಿಧನ ಸುದ್ದಿಗೆ ಆಘಾತ ವ್ಯಕ್ತಪಡಿಸಿರುವ ರಕ್ಷಿತ್ ಶೆಟ್ಟಿ ಸ್ಟೋರಿ ಪೋಸ್ಟ್ ಮಾಡಿದ್ದಾರೆ.
35
ಶರತ್ ಮಲ್ಲೇಶ್ ನಿಧನಕ್ಕೆ ಸಂತಾಪ
ಪರಂವಃ ಸ್ಟುಡಿಯೋ ಮೂಲಕ ಹಲವು ಅವಿರತ ಪ್ರಯತ್ನಗಳು, ಶ್ರೇಷ್ಠ ಕಲಾಸೇವೆ ಮಾಡಿದ ಶರತ್ ಮಲ್ಲೇಶ್ ನಿಧನ ನೋವು ತಂದಿದೆ. ಸಹಾಯ ನಿರ್ದೇಶಕ, ಆರ್ಟಿ ಡೈರೆಕ್ಟರ್ ಶರತ್ ಮಲ್ಲೇಸ್ ಪರಂವಃ ಸ್ಟುಡಿಯೋದ ಸುಂದರ ಪಯಣದಲ್ಲಿ ಜೊತೆಯಾಗಿದ್ದರು. ಅವರ ಅಗಲಿಗೆ ತೀವ್ರ ನೋವುಂಟು ಮಾಡಿದೆ. ಈ ಸಂದರ್ಭದಲ್ಲಿ ಕುಟುಂಬಕ್ಕೆ ಸಂತಾಪಗಳು, ಭಗವಂತ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ರಕ್ಷಿತ್ ಶೆಟ್ಟಿ ಮಾಲೀಕತ್ವ ಪರಂವಃ ಸ್ಟುಡಿಯೋ ಪೋಸ್ಟ್ ಮಾಡಿದೆ.
ಅಭಿಮಾನಿಗಳು ರಕ್ಷಿತ್ ಶೆಟ್ಟಿ ಸೋಶಿಯಲ್ ಮೀಡಿಯಾವನ್ನು ಕಳೆದ ಹಲವು ದಿನಗಳಿಂದ ತಡಕಾಡುತ್ತಿದ್ದಾರೆ. ರಕ್ಷಿತ್ ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ, ಅವರ ಸಿನಿಮಾ ಕತೆ ಎಲ್ಲಿಗೆ ಬಂದಿದೆ, ವೈಯುಕ್ತಿಕ ಜೀವನ ಸೇರಿದಂತೆ ಎಲ್ಲವನ್ನೂ ಅಭಿಮಾನಿಗಳು ಕೂತೂಹಲದ ಕಣ್ಣಿನಿಂದ ನೋಡುತ್ತಿದ್ದಾರೆ. ಹಲವು ಮಹತ್ವದ ಘಟ್ಟ, ಬೆಳವಣಿಗೆ ನಡೆದರೂ ರಕ್ಷಿತ್ ಶೆಟ್ಟಿ ಸೈಲೆಂಟ್ ಆಗಿದ್ದರು. ಇದೀಗ ನಿಧನ ವಾರ್ತೆ ಪೋಸ್ಟ್ ಮಾಡಿದ ರಕ್ಷಿತ್ ಶೆಟ್ಟಿಗೆ ಅಭಿಮಾನಿಗಳು ಧೈರ್ಯ ತುಂಬಿ ಬೆಂಬಲಕ್ಕೆ ನಿಂತಿದ್ದಾರೆ.
55
ಸಪ್ತಸಾಗರದಾಚೆ ಬಳಿಕ ಸಾಗರ ದಾಟಿದ್ರಾ ರಕ್ಷಿತ್
ಸಪ್ತಸಾಗರದಾಚೆ ಎಲ್ಲೋ ಸಿನಿಮಾ ಬಳಿಕ ರಕ್ಷಿತ್ ಶೆಟ್ಟಿ ತೆರೆ ಮೇಲೆ ಕಾಣಿಸಿಕೊಂಡಿಲ್ಲ, ಸಿನಿಮಾ ಶೂಟಿಂಗ್ ಮಾಡುತ್ತಿಲ್ಲ. ಎಲ್ಲಿದ್ದಾರೆ ಎಂಬ ಪ್ರಶ್ನೆಗೆ ಸಾಗರದಾಚೆ ಕುಳಿತು ಕತೆ ಬರೆಯುತ್ತಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಇತ್ತೀಚೆಗೆ ಉಡುಪಿಯ ನೇಮೋತ್ಸವ ಕಾರ್ಯಕ್ರದಲ್ಲಿ ಪಾಲ್ಗೊಂಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.