ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ನಿವಾಸದಲ್ಲಿ ದೀಪಾವಳಿ ಹಬ್ಬ ಸಖತ್ ಗ್ರ್ಯಾಂಡ್ ಆಗಿದೆ. ಪತ್ನಿ ರೇವತಿ ಹಾಗೂ ಪುತ್ರ ಅವ್ಯಾನ್ ದೇವ್ ಜೊತೆಗೆ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ ನಿಖಿಲ್ ಕುಮಾರಸ್ವಾಮಿ.
ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ನಿವಾಸದಲ್ಲಿ ದೀಪಾವಳಿ ಹಬ್ಬ ಸಖತ್ ಗ್ರ್ಯಾಂಡ್ ಆಗಿದೆ. ಪತ್ನಿ ರೇವತಿ ಹಾಗೂ ಪುತ್ರ ಅವ್ಯಾನ್ ದೇವ್ ಜೊತೆಗೆ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ ನಿಖಿಲ್ ಕುಮಾರಸ್ವಾಮಿ.
ನಿಖಿಲ್ ಕುಮಾರಸ್ವಾಮಿ ಸೌತ್ ಸಿನಿಮಾ ಇಂಡಸ್ಟ್ರಿಯ ಬಹುದೊಡ್ಡ ಪ್ರೊಡಕ್ಷನ್ ಹೌಸ್, ಲೈಕಾ ನಿರ್ಮಾಣ ಸಂಸ್ಥೆಯ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಲಕ್ಷ್ಮಣ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.
2020ರ ಏಪ್ರಿಲ್ನಲ್ಲಿ ಬಿಡದಿಯ ತೋಟದ ಮನೆಯಲ್ಲಿ ಅದ್ಧೂರಿಯಾಗಿ ನಿಖಿಲ್-ರೇವತಿ ಮದುವೆ ನಡೆಯಿತು. 2021ರ ಸೆಪ್ಟೆಂಬರ್ನಲ್ಲಿ ರೇವತಿ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದರು. ಇದೀಗ ರೇವತಿ ಮಗನ ಲಾಲನೆ ಪಾಲನೆಯಲ್ಲಿ ಬ್ಯುಸಿ ಆಗಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಹಾಗೂ ಪತ್ನಿ ರೇವತಿ ಪುತ್ರನಿಗೆ ಅವ್ಯಾನ್ ದೇವ್ ಎಂದು ಹೆಸರಿಟ್ಟಿದ್ದಾರೆ. ಮಗನ ಜೊತೆಗಿನ ಫೋಟೋಗಳನ್ನು ನಿಖಿಲ್ ಆಗಾಗ ಹಂಚಿಕೊಳ್ತಾರೆ. ಅವ್ಯಾನ್ ಅಂದ್ರೆ ವಿಷ್ಣು ದೇವರ ಹೆಸರಾಗಿದೆ.
ನಿಖಿಲ್ ಕುಮಾರಸ್ವಾಮಿ ದೊಡ್ಡದೊಂದು ಬ್ರೇಕ್‌ಗಾಗಿ ಕಾಯುತ್ತಿದ್ದಾರೆ. ಈವರೆಗೂ ಬಂದ ಚಿತ್ರಗಳು ನಿಖಿಲ್ ಅವರಿಗೆ ಅಷ್ಟೇನೂ ಹೇಳಿಕೊಳ್ಳುವಂತಹ ಆದಾಯ ಮತ್ತು ಹೆಸರು ತಂದುಕೊಟ್ಟಿಲ್ಲ. ಹಾಗಾಗಿ ದೊಡ್ಡ ಬ್ರೇಕ್‌ಗಾಗಿಯೇ ಅವರು ಕಾಯುತ್ತಿದ್ದಾರೆ.