ಕೊನೆಗೂ ಗುಡ್ ನ್ಯೂಸ್ ಕೊಟ್ಟ ಬಿಗ್ ಬಾಸ್ ಧರ್ಮ ಕೀರ್ತಿರಾಜ್; ಪಕ್ಕದಲ್ಲಿರುವ ಹುಡುಗಿ ಮೇಲೆ ನೆಟ್ಟಿಗರ ಕಣ್ಣು!

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಧರ್ಮ ಕೀರ್ತಿರಾಜ್‌ ಹೊಸ ಫೋಟೋ. ಪಕ್ಕದಲ್ಲಿ ಇರುವ ಹುಡುಗಿ ನೋಡಿ ಎಲ್ಲರೂ ಶಾಕ್.... 

ಕನ್ನಡ ಚಿತ್ರರಂಗದಲ್ಲಿ ಕ್ಯಾಡ್ಬರಿ ಎಂದೇ ಹೆಸರು ಗಳಿಸಿರುವ ಧರ್ಮ ಕೀರ್ತಿರಾಜ್‌ ಇದೀಗ ಹೊಸ ಸುದ್ದಿ ಕೊಟ್ಟಿದ್ದಾರೆ. 17 ವರ್ಷಗಳ ಜರ್ನಿ ನಂತರ ಅಲ್ಲಿಗೆ ಕಾಲಿಡುತ್ತಿದ್ದಾರೆ.

ಹೌದು! ನಟ ಧರ್ಮ ಕೀರ್ತಿರಾಜ್‌ ನಟನೆಯ ಮೊದಲ ತೆಲುಗು ಸಿನಿಮಾ ರಿಲೀಸ್‌ಗೆ ಸಜ್ಜಾಗಿದೆ. ಚಿತ್ರದ ಹೆಸರು ಬ್ಲಡ್ ರೋಸಸ್ ಎಂದು. ಚಿತ್ರದ ಪ್ರೆಸ್‌ ಮೀಟ್ ಅದ್ಧೂರಿಯಾಗಿ ನಡೆದಿದೆ.


ಪ್ರೆಸ್‌ಮೀಟ್‌ನಲ್ಲಿ ಚಿತ್ರದ ನಾಯಕಿ ಜೊತೆ ಧರ್ಮ ಕೀರ್ತಿರಾಜ್ ಪೋಸ್ ಕೊಟ್ಟಿದ್ದಾರೆ. ಈ ಫೋಟೋಗಳನ್ನು ನೋಡಿದ ನೆಟ್ಟಿಗರು ಗರ್ಲ್‌ಫ್ರೆಂಡ್, ಮದುವೆ ಸೆಟ್ ಆಗಿದೆ ಎಂದು ಕಲ್ಪನೆ ಮಾಡಿಕೊಂಡಿದ್ದಾರೆ. 

ಏಪ್ರಿಲ್ 2ರಂದು ಚಿತ್ರದ ಫಸ್ಟ್‌ ಲುಕ್ ರಿಲೀಸ್ ಮಾಡಿದ್ದಾರೆ. ಬಹುತೇಕ ಚಿತ್ರೀಕರಣ ನಡೆದಿರುವುದು ಹೈದರಾಬಾದ್‌ನಲ್ಲಿ ಹಾಗೂ ರಾಮೋಜಿ ಫಿಲ್ಮ್‌ ಸಿಟಿಯಲ್ಲಿ ಎನ್ನಲಾಗಿದೆ.

ಇನ್ನು ಕೀರ್ತಿಗೆ ಜೋಡಿಯಾಗಿರುವ ನಾಯಕಿ ಹೆಸರು ಅಪ್ಸರ ರಾಣಿ ಎಂದು. ಈಕೆ ರಾಮ್‌ ಗೋಪಾಲ್ ವರ್ಮ ಚಿತ್ರದಲ್ಲಿ ನಟಿಸಿದ್ದಾರೆ.ಡೇಂಜರಸ್‌ ಚಿತ್ರದ ಹಾಟ್‌ಲುಕ್‌ನಲ್ಲಿ ಈಕೆ ಮಿಂಚಿ ಸಖತ್ ಸುದ್ದಿಯಾಗಿದ್ದರು. 

ಧರ್ಮ ಕೀರ್ತಿರಾಜ್‌ ಮೊದಲ ತೆಲುಗು ಸಿನಿಮಾದಲ್ಲಿ ಖಡಕ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ನಾಯಕಿ ಕೂಡ ಪೊಲೀಸ್ ಅಧಿಕಾರಿಯಾಗಿ ಮಿಂಚಿದ್ದಾರೆ. 

Latest Videos

click me!