8 ವರ್ಷ ಹಿಂದೆ ಭೇಟಿಯಾದ ದೇವರ ಮಗನಿಗೆ ವೀಲ್‌ಚೇರ್‌ ನೀಡಿದ 'ನಾಯಕ'!

First Published | Mar 22, 2020, 2:45 PM IST

 ನವರಸ ನಾಯಕ ಜಗ್ಗೇಶ್‌ ಇತ್ತೀಚಿಗೆ ತಮ್ಮ ವಿಶೇಷ ಅಭಿಮಾನಿಯನ್ನು ಮಂತ್ರಾಲಯದಲ್ಲಿ ಭೇಟಿ ಮಾಡಿ ಸಹಾಯ ಮಾಡಿದ್ದಾರೆ. ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಶೇರ್ ಮಾಡಿಕೊಂಡಿದ್ದಾರೆ.

8 ವರ್ಷ ಹಿಂದೆ ಮಂತ್ರಾಲಯದಲ್ಲಿ ಅಭಿಮಾನಿಯನ್ನು ಭೇಟಿಯಾಗಿದ್ದ ಜಗ್ಗೇಶ್.
ಆಂಧ್ರ ಪ್ರದೇಶದ ದೇವರ ಮಗನಿವನು ಎಂದ ಜಗ್ಗಣ್ಣ.
Tap to resize

ವೀಲ್‌ ಚೇರ್‌ ತೆಗೆದುಕೊಳ್ಳಲು 10 ಸಾವಿರ ರೂ. ನೀಡಿದ್ದಾರೆ.
ಮುಂದಿನ ಸಲ ಮಂತ್ರಾಲಯಕ್ಕೆ ಭೇಟಿ ನೀಡುವಾಗ ಜೀವನ ನಡೆಸಲು ಒಂದು ಅಂಗಡಿಯನ್ನು ತೆರದು ಕೊಡುವುದಾಗಿಯೂ ಹೇಳಿದ್ದಾರೆ.
57ನೇ ಹುಟ್ಟುಹಬ್ಬವನ್ನು ಮಂತ್ರಾಲಯದಲ್ಲಿ ಆಚರಿಸಿಕೊಂಡ ಜಗ್ಗೇಶ್.
ನುಡಿದಂತೆ ನಿರ್ಭಯಾ ಹಂತಕರ ಹ್ಯಾಂಗ್‌ಮ್ಯಾನ್‌ಗೆ 1 ಲಕ್ಷ ರೂ ನೀಡಿದ್ದಾರೆ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಕಾರ್ಯಕ್ರಮದ ಅಂಧ ಪ್ರತಿಭೆಗಳಿಗೆ ಸಹಾಯ ಮಾಡಿದ್ದಾರೆ.
ಅಂಧ ಗಾಯಕಿಯರಿಗೆ ಮನೆ ಕಟ್ಟಿಸಿಕೊಟ್ಟಿದ್ದಾರೆ.
ತೀವ್ರ ಅನಾರೋಗ್ಯರಾಗಿದ್ದ ಹಿರಿಯ ನಟ ಕಿಲ್ಲರ್ ವೆಂಕಟೇಶ್‌ಗೆ ಬೆನ್ನಿಗೆ ನಿಂತು ಸಹಾಯ ಮಾಡಿದ್ದಾರೆ.
ಜಗ್ಗೇಶ್‌ - ಪರಿಮಳಾ ಜೋಡಿಗೆ ಶ್ರೀ ಗುರುರಾಯರು ಕೃಪ ಕಟಾಕ್ಷದಿಂದ 100 ಆಯಸ್ಸು ನೀಡಲೆಂದು ಆಶಿಸೋಣ.

Latest Videos

click me!