ಅವಕಾಶ ಇದ್ರೆ ಹೇಳಿ ಪ್ಲೀಸ್​: ಬಾಡಿಗೆ ಹಣ ನಂಬಿ ಬದುಕುತ್ತಿರುವೆ- ನೋವು ತೋಡಿಕೊಂಡ ನಟ ದಿಗಂತ್​

Published : Apr 30, 2026, 07:21 PM IST

'ದೂದ್ ಪೇಡ' ಎಂದೇ ಖ್ಯಾತರಾದ ನಟ ದಿಗಂತ್, ಸಿನಿಮಾಗಳಲ್ಲಿ ಅವಕಾಶಗಳಿಲ್ಲದೆ ಸಂಕಷ್ಟ ಎದುರಿಸುತ್ತಿದ್ದಾರೆ. ಮನೆಯ ಬಾಡಿಗೆ ಹಣದಲ್ಲಿ ಜೀವನ ಸಾಗಿಸುತ್ತಿದ್ದು, ಊರಿಗೆ ಮರಳುವ ಯೋಚನೆಯಲ್ಲಿದ್ದಾಗ 'ರುದ್ರ ಕಾಲ' ಸಿನಿಮಾ ಕೈಹಿಡಿದಿದೆ ಎಂದು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.

PREV
16
ದೂದ್​ ಪೇಡ ಬಾಯ್​

ಕನ್ನಡ ಚಿತ್ರರಂಗದ ಚಾಕಲೇಟ್​, ʻದೂದ್‌ ಪೇಡʼ ಎಂದೆಲ್ಲಾ ಫೇಮಸ್​ ಆಗಿರೋ ನಟ ದಿಗಂತ್‌ ಈಚೆಗಷ್ಟೇ ತಮ್ಮ ಸಿನಿ ಪಯಣಕ್ಕೆ ಆದ 20 ವರ್ಷಗಳ ಸಂಭ್ರಮದ ಬಗ್ಗೆ ಮಾತನಾಡಿದ್ದರು. 2006ರಲ್ಲಿ ಬಿಡುಗಡೆಯಾದ ʻಮಿಸ್‌ ಕ್ಯಾಲಿಫೋರ್ನಿಯಾʼ ಸಿನಿಮಾದ ಮೂಲಕ ಎಂಟ್ರಿ ಕೊಟ್ಟ ನಟ, ಸದ್ಯ ʻರುದ್ರ ಕಾಲʼ ದವರೆಗೂ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

26
ಹಗ್ಗದ ಮೇಲಿನ ನಡಿಗೆ

ಆದರೆ, ಕಲಾವಿದರ ಜೀವನ ಹಗ್ಗದ ಮೇಲಿನ ನಡಿಗೆಯಂತೆ. ಅದೇ ರೀತಿಯ ಸ್ಥಿತಿ ದಿಗಂತ್​ ಅವರಿಗೂ ಬಂದಿದೆ. ಸದ್ಯ ಸಿನಿಮಾಗಳಲ್ಲಿ ಅವಕಾಶಗಳು ಇಲ್ಲದೇ ನಟ ಪರದಾಡುವಂತಾಗಿದ್ದು, ಅದರ ಬಗ್ಗೆ ಖುದ್ದು ದಿಗಂತ್​ ಅವರೇ ಕಣ್ಣೀರು ಹಾಕಿದ್ದಾರೆ. ಮನೆಯ ಬಾಡಿಗೆ ಹಣದಲ್ಲಿ ಜೀವನ ಸಾಗಿಸುತ್ತಿರುವುದಾಗಿ ದಿಗಂತ್ ಹೇಳಿದ್ದಾರೆ. ಊರಿಗೆ ವಾಪಸ್​ ಹೋಗುವ ಬಗ್ಗೆ ಯೋಚನೆ ಮಾಡಬೇಕಾದ ಸ್ಥಿತಿ ಬಂದಿದೆ ಎಂದಿದ್ದಾರೆ.

36
ನೋವಿನ ಮಾತು

ಆರು ತಿಂಗಳ ಹಿಂದೆ ಎರಡು ಸಿನಿಮಾ ಒಪ್ಪಿಕೊಂಡಿದ್ದೆ, ಆದರೆ ನಿರ್ಮಾಪಕರು ಒಂದು ದಿನ ಬಂದು ಸದ್ಯಕ್ಕೆ ಯಾಕೋ ಪರಿಸ್ಥಿತಿ ಸರಿ ಇಲ್ಲ, ನೋಡಿಕೊಂಡು ಮುಂದುವರೆಯೋಣ ಎಂದುಬಿಟ್ಟರು. ಇದನ್ನು ಕೇಳಿ ತುಂಬಾ ನೋವಾಯಿತು. ಇದು ನನ್ನೊಬ್ಬನ ಸ್ಥಿತಿ ಅಲ್ಲ, ಬಹಳಷ್ಟು ಸ್ನೇಹಿತದ್ದು ಇದೇ ಕಥೆ. ಇದನ್ನೇ ನಂಬಿದರೆ ಆಗುವುದಿಲ್ಲ. ನಿಜವಾಗಿಯೂ ನಾವು ಬೇರೇನಾದರೂ ಮಾಡಬೇಕಾ ಎನ್ನುವ ಯೋಚನೆ ಬರುತ್ತಿದೆ ಎಂದಿದ್ದಾರೆ.

46
ಊರಿಗೆ ವಾಪಸ್​

ನನ್ನ ಊರಾದ ತೀರ್ಥಹಳ್ಳಿಗೆ ಹೋಗಿ ತೋಟದ ಕೆಲಸ ಮಾಡೋಣ ಎಂದು ಯೋಚಿಸಿದೆ. ಆಗ ನನ್ನ ಕೈಹಿಡಿದಿದ್ದು ʻರುದ್ರ ಕಾಲʼ. ಬೇಗನೇ ಶೂಟಿಂಗ್‌ ಕೂಡ ಆರಂಭವಾಗಿದೆ. ಆದರೆ ಸ್ಥಿತಿ ನೆನಪಿಸಿಕೊಂಡರೆ ಬೇಸರವಾಗುತ್ತದೆ ಎಂದಿದ್ದಾರೆ ನಟ.

56
ಬಾಡಿಗೆ ನಂಬಿ

ಕಳೆದೆರಡು ವರ್ಷಗಳಲ್ಲಿ ತುಂಬಾ ಆಫರ್ ಇದ್ದವು. ಆದರೆ ಫಲಿತಾಂಶದ ಬಗ್ಗೆ ಸದ್ಯ ಚರ್ಚೆ ಬೇಡ. ಆದರೆ ಈಗ ಅವಕಾಶಗಳೇ ಇಲ್ಲವಾಗಿದೆ. ನಂದಿ ಬೆಟ್ಟದ ಬಳಿ ಗೇಟೆಡ್‍ ಕಮ್ಯುನಿಟಿಯಲ್ಲಿ ಮನೆ ಇದ್ದು ಬಾಡಿಗೆ ಕೊಟ್ಟಿದ್ದೇನೆ. ಸದ್ಯ ಅದರ ಮೇಲೆ ಅವಲಂಬನೆ ಆಗುವ ಸ್ಥಿತಿ ನಿರ್ಮಾಣವಾಗಿದೆ ಎಂದು ನೋವಿನಿಂದ ನುಡಿದಿದ್ದಾರೆ ದಿಗಂತ್​.

66
ಅವಕಾಶವಿದ್ರೆ ಹೇಳಿ

ಅಂದಹಾಗೆ ದಿಗಂತ್​ ಅವರು ಈಚೆಗೆ ತೆಲುಗಿನಲ್ಲಿ ಸಮಂತಾ ರುತ್​ ಪ್ರಭು ಜೊತೆ ವೆಬ್​ ಸೀರೀಸ್​ನಲ್ಲಿ ನಟಿಸಿದ್ದಾರೆ. ಅದಕ್ಕೂ ರೆಡಿ ಇದ್ದೇನೆ. ಅವಕಾಶ ಇದ್ದರೆ ಹೇಳಿ. ಸದ್ಯ ಅಂತೂ ಮುಂಬೈಗೆ ಹೋಗಲು ಇಷ್ಟವಿಲ್ಲ. ಮುಂದೆ ಅನಿವಾರ್ಯ ಪರಿಸ್ಥಿತಿ ಬಂದರೆ ನೋಡೋಣ. ತೆಲುಗಿನಲ್ಲಿ ಒಂದು ಸಿನಿಮಾಗೆ ನಟ-ನಟಿ ಫೈನಲ್‌ ಆಗುತ್ತಿದ್ದಂತೆಯೇ ಅಲ್ಲಿ ವ್ಯಾಪಾರ ಆರಂಭವಾಗುತ್ತದೆ. ಆದರೆ, ಕನ್ನಡದಲ್ಲಿ ಅಂಥದ್ದೊಂದು ಸಿಸ್ಟಂ ಇಲ್ಲ. ಇಲ್ಲಿ ದುಡ್ಡು ಹೂಡಿಕೆ ಮಾಡಲು ಯಾರೂ ಮುಂದೆ ಬರುತ್ತಿಲ್ಲ. ಟಿವಿ ಹಕ್ಕುಗಳನ್ನು ಕೂಡ ಇಲ್ಲಿ ಯಾರೂ ಖರೀದಿ ಮಾಡುತ್ತಿಲ್ಲ ಎಂದು ನೊಂದು ನುಡಿದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories