ಕುಡುಕ ನನ್ ಮಕ್ಳು ಸಿನಿಮಾ ಮೂಲಕ ಕಂಬ್ಯಾಕ್, Deep Neck Dress ಧರಿಸಿ ಟ್ರೋಲ್ ಆದ Chaitra Kotur

Published : Dec 16, 2025, 12:43 PM IST

Chaitra Kotur : ಚೈತ್ರಾ ಕೋಟೂರ್ ಈಗ ಕುಡುಕ ನನ್ ಮಕ್ಳಿಗೆ ಜೊತೆಯಾಗಿದ್ದಾರೆ. ಅವರ ಹೊಸ ಸಿನಿಮಾಕ್ಕೆ ಮುಹೂರ್ತ ನಡೆದಿದೆ. ಆದ್ರೆ ಚೈತ್ರಾ ಧರಿಸಿದ್ದ ಡ್ರೆಸ್ ನೆಟ್ಟಿಗರ ಕಣ್ಣು ಕುಕ್ಕಿದೆ.

PREV
17
ಕುಡುಕ ನನ್ ಮಕ್ಳಿಗೆ ನಾಯಕಿಯಾದ ಚೈತ್ರಾ ಕೋಟೂರ್

ತುಂಬಾ ದಿನ ಮೀಡಿಯಾದಿಂದ ದೂರವಿದ್ದ ಬಿಗ್ ಬಾಸ್ ಮಾಜಿ ಸ್ಪರ್ಧಿ ಚೈತ್ರಾ ಕೋಟೂರ್ ಮತ್ತೆ ಬಂದಿದ್ದಾರೆ. ಹೊಸ ಸಿನಿಮಾ ಮಾಡ್ತಿದ್ದಾರೆ. ಸಿನಿಮಾ ಹೆಸರು ಕುಡುಕ ನನ್ ಮಕ್ಳು. ಚೈತ್ರಾ ಕೋಟೂರ್, ಕುಡುಕ ನನ್ ಮಕ್ಕಳು ಸಿನಿಮಾಗೆ ನಾಯಕಿಯಾಗಿದ್ದಾರೆ. ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಚೈತ್ರಾ ಕಾಣಿಸಿಕೊಳ್ತಿದ್ದಾರೆ. ಚಿತ್ರದ ಮುಹೂರ್ತದಲ್ಲಿ ಸಿನಿಮಾ ಬಗ್ಗೆ ಸಾಕಷ್ಟು ವಿಷ್ಯಗಳನ್ನು ಚೈತ್ರಾ ಹೊರ ಹಾಕಿದ್ದಾರೆ.

27
ಸಿನಿಮಾದಲ್ಲಿ ಯಾರೆಲ್ಲ ಇದ್ದಾರೆ

ಕುಡುಕ ನನ್ ಮಕ್ಳು ಸಿನಿಮಾದಲ್ಲಿ ಚೈತ್ರಾ ಕೋಟೂರ್ ಜೊತೆ ಬಿಗ್ ಬಾಸ್ 12ರ ಮಾಜಿ ಸ್ಪರ್ಧಿ ಹಾಗೂ ಗಿಚ್ಚಿ ಗಿಲಿಗಿಲಿ ಖ್ಯಾತಿಯ ಚಂದ್ರಪ್ರಭ ಹಾಗೂ ಬಿಗ್ ಬಾಸ್ 9 ಸೀಸನ್ ಮಾಜಿ ಸ್ಪರ್ಧಿ ಹಾಗೂ ಗಿಚ್ಚಿ ಗಿಲಿ ಗಿಲಿ ಖ್ಯಾತಿಯ ವಿನೋದ್ ಗೊಬ್ಬರಗಾಲ ಸೇರಿದಂತೆ ಅನೇಕ ಕಲಾವಿದರು ಬಣ್ಣ ಹಚ್ಚಲಿದ್ದಾರೆ. ಆಸ್ಕರ್ ಕೃಷ್ಣ ಈ ಸಿನಿಮಾ ನಿರ್ದೇಶನ ಮಾಡ್ತಿದ್ದಾರೆ.

37
ಸಿನಿಮಾ ಬಗ್ಗೆ ಚೈತ್ರಾ ಹೇಳಿದ್ದೇನು?

ಕುಡುಕ ನನ್ ಮಕ್ಳು ಅಂದ್ರೆ ಬಯ್ಯೋದಲ್ಲ. ಎಲ್ಲ ಕುಡುಕರು ನಮ್ಮ ಆಪ್ತರೆ. ಅವರ ಮೇಲೆ ಪ್ರೀತಿ ಇರೋದ್ರಿಂದ ಈ ಸಿನಿಮಾ ಮಾಡ್ತಿದ್ದೇವೆ. ಕುಡುಕರು ಮಾತ್ರವಲ್ಲ ಅವರ ಜೊತೆಗಿರುವವರು ಕೂಡ ಮುಖ್ಯ. ಈ ಸಿನಿಮಾ ಎಲ್ಲ ಪ್ರೇಕ್ಷಕರಿಗೆ ಮನರಂಜನೆ ನೀಡಲಿದೆ ಎಂದು ಚೈತ್ರಾ ಕೋಟೂರ್ ಹೇಳಿದ್ದಾರೆ.

47
ಚೈತ್ರಾ ಕೋಟೂರ್ ಡ್ರೆಸ್ ಟ್ರೋಲ್

ಸಿನಿಮಾ ಮುಹೂರ್ತಕ್ಕೆ ಬಂದಿದ್ದ ಚೈತ್ರಾ ಡ್ರೆಸ್ ನೆಟ್ಟಿಗರ ಕಣ್ಣು ಕುಕ್ಕಿದೆ. ಡೀಪ್ ನೆಕ್ ಡ್ರೆಸ್ ಹಾಕಿ ಬಂದಿದ್ದ ಚೈತ್ರಾ ಕೋಟೂರ್ ವಿಡಿಯೋ ನೋಡಿದ ಬಳಕೆದಾರರು, ಕಮೆಂಟ್ ಸುರಿಮಳೆ ಮಾಡಿದ್ದಾರೆ.

57
ಸಿನಿಮಾ ರಂಗಕ್ಕೆ ಚೈತ್ರಾ ಕೋಟೂರ್ ಬ್ಯಾಕ್

ಬಿಗ್ ಬಾಸ್ ನಂತ್ರ ಚೈತ್ರಾ ಕೋಟೂರ್ ಒಂದೆರಡು ಸಿನಿಮಾದಲ್ಲಿ ಕಾಣಿಸಿಕೊಂಡಿದ್ರೂ ನಂತ್ರ ಸಂಪೂರ್ಣ ಮರೆಯಾಗಿದ್ದರು. ಚೈತ್ರಾ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಈಗ ಚೈತ್ರಾ ಮತ್ತೆ ವಾಪಸ್ ಆಗಿದ್ದಾರೆ. ಇಷ್ಟು ದಿನ ನಾನು ನನ್ನ ಬಗ್ಗೆಯೇ ಸ್ಟಡಿ ಮಾಡ್ತಿದ್ದೆ. ಎಲ್ಲರೂ ಚೆನ್ನಾಗಿದ್ದಾರೆ. ನಾನೂ ಚೆನ್ನಾಗಿರಬೇಕು ಎನ್ನುವ ನಿರ್ಧಾರ ತೆಗೆದುಕೊಂಡು ಮತ್ತೆ ವಾಪಸ್ ಆಗಿದ್ದೇನೆ ಅಂತ ಚೈತ್ರಾ ಹೇಳಿದ್ದಾರೆ.

67
ಚೈತ್ರಾ ಕೈನಲ್ಲಿರುವ ಸಿನಿಮಾ

ಚೈತ್ರಾ ಬಿಗ್ ಬಾಸ್ ನಂತ್ರ ಜಗ್ಗೇಶ್ ಅಭಿನಯದ ರಂಗನಾಯಕ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಈಗ ಚೈತ್ರಾ ಕೈನಲ್ಲಿ ಎರಡು ಸಿನಿಮಾಗಳಿವೆ. ಉಪೇಂದ್ರ ಅಭಿನಯದ ಭಾರ್ಗವ ಸಿನಿಮಾದಲ್ಲಿ ಚೈತ್ರಾ ಕೋಟೂರ್ ನಟಿಸ್ತಿದ್ದಾರೆ. ಇದ್ರ ಜೊತೆ ಕುಡುಕ ನನ್ ಮಕ್ಳು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

77
ಬಿಗ್ ಬಾಸ್ ನಲ್ಲಿ ಯಾರು ಫೆವರೆಟ್

ಬಿಗ್ ಬಾಸ್ ಕನ್ನಡ 12ರ ಶೋ ನೋಡ್ತಿರುವ ಚೈತ್ರಾ ಕೋಟೂರ್ ತಮಗೆ ಯಾರು ಫೆವರೆಟ್ ಅನ್ನೋದನ್ನು ಬಾಯಿ ಬಿಟ್ಟಿಲ್ಲ. ಆದ್ರೆ ಅಶ್ವಿನಿ, ಗಿಲ್ಲಿ, ರಕ್ಷಿತಾ ಟಾಪ್ ನಲ್ಲಿದ್ದಾರೆ ಎಂದ ಚೈತ್ರಾ ಕೋಟೂರ್, ದಿನ ಕಳೆದಂತೆ ಎಲ್ಲ ಬದಲಾಗುತ್ತೆ. ಕೊನೆ ವಾರಗಳಲ್ಲಿ ಆಟ ಮಜವಾಗಿರುತ್ತೆ. ಎಲ್ಲರ ನಿಜ ಸ್ವಭಾವ ಹೊರಕ್ಕೆ ಬರುತ್ತೆ. ಕೊನೆ ಎಪಿಸೋಡ್ ನೋಡಲು ನಾನು ಆಸಕ್ತಿ ಹೊಂದಿದ್ದೇನೆ ಎಂದಿದ್ದಾರೆ. ಬಿಗ್ ಬಾಸ್ ನಲ್ಲಿರುವ ಸ್ಪರ್ಧಿಗಳ ಆಟ ನೋಡಿ ಅವರ ಕ್ಯಾರೆಕ್ಟರ್ ಡಿಸೈಡ್ ಮಾಡ್ಬೇಡಿ ಎಂದಿದ್ದಾರೆ.

Read more Photos on
click me!

Recommended Stories