ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ನಟ ದರ್ಶನ್ ಹಾಗೂ ಆತನ ಗ್ಯಾಂಗ್ ಮೇಲಿನ ಕೇಸ್ ಬಿಗಿಗೊಂಡಿದೆ. ಪೊಲೀಸರ ಚಾರ್ಜ್ ಶೀಟ್‌ನಲ್ಲಿ ಈ ಪ್ರಕರಣ ಸ್ಫೋಟಕ ಮಾಹಿತಿಗಳು ಹೊರಬಂದಿದೆ. ಇಷ್ಟೇ ಅಲ್ಲ ಚಾರ್ಚ್ ಶೀಟ್ ಪ್ರಕಾರ ಮೇಲ್ನೋಟಕ್ಕೆ ದರ್ಶನ್‌ಗೆ ಸದ್ಯಕ್ಕೆ ಬಿಡುಗಡೆ ಭಾಗ್ಯ ಸಿಗುವ ಸಾಧ್ಯತೆಗಳಿಲ್ಲ.
ದರ್ಶನ್ ಬಿಡುಗಡೆಗಾಗಿ ಪತ್ನಿ ವಿಜಯಲಕ್ಷ್ಮಿ ಹೋರಾಟ ಮುಂದುವರಿಸಿದ್ದಾರೆ. ಒಂದೆಡೆ ಕಾನೂನು ಹೋರಾಟದ ಪ್ರಕ್ರಿಯೆ ಕುರಿತು ವಕೀಲರ ಜೊತೆ ಚರ್ಚಿಸಿರುವ ವಿಜಯಲಕ್ಷ್ಮಿ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ವಿಜಯಲಕ್ಷ್ಮಿ ದೇವರ ಮೊರೆ ಹೋಗಿದ್ದಾರೆ. ಇದೀಗ ಅಸ್ಸಾಂನ ಗುವ್ಹಾಟಿಯಲ್ಲಿರುವ ಕಾಮಾಕ್ಯ ದೇಗುಲಕ್ಕೆ ಭೇಟಿ ನೀಡಿದ್ದಾರೆ. ಆದರೆ ಈ ವೇಳೆ ಪತ್ನಿ ವಿಜಯಲಕ್ಷಿ ಧರಿಸಿದ ಕುರ್ತಾ ಭಾರಿ ಸದ್ದು ಮಾಡುತ್ತಿದೆ. ಬನಾರಸಿ ಸಿಲ್ಕ್ ಕುರ್ತಾ ಧರಿಸಿದ ವಿಜಯಲಕ್ಷ್ಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಇದರ ಬೆಲೆ 41,700 ರೂಪಾಯಿ ಎಂದು ಹೇಳಲಾಗುತ್ತಿದೆ.
ಭಾರತದ 51 ಶಕ್ತೀಪೀಠಗಳ ಪೈಕಿ ಕಾಮಾಕ್ಯ ದೇವಸ್ಥಾನ ಕೂಡ ಒಂದಾಗಿದೆ. ದುಷ್ಟ ಶಕ್ತಿಗಳಿಂದ ಮುಕ್ತಿ ಪಡೆಯಲು ಬಹುತೇಕರು ಈ ದೇವಸ್ಥಾನಕ್ಕೆ ಬೇಟಿ ನೀಡುತ್ತಾರೆ. ಮಾಟ ಮಂತ್ರಗಳನ್ನು, ನೆಗೆಟೀವ್ ಎನರ್ಜಿಗಳನ್ನು ತೊಡೆದು ಹಾಕಲು ಭಕ್ತರು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಕಾಮಾಕ್ಯ ಆಶೀರ್ವಾದದಿಂದ ಹಲವರ ಸಮಸ್ಯೆಗಳು ನೀರಿನಂತೆ ಕರಗಿಹೋದ ಉದಾಹರಣೆಗಳು ಇವೆ.
ಪ್ರಮುಖವಾಗಿ ಸಂಕಷ್ಟಗಳು ಎದುರಾದಾಗ, ಶತ್ರುಗಳ ಮಾಟ ಮಂತ್ರಗಳು, ಏಕಾಏಕಿ ಎದುರಾಗುವ ಸಂಕಷ್ಟಗಳಿಂದ ದೂರವಾಗಲು ಭಕ್ತರು ಕಾಮಾಕ್ಯ ದೇಗುಲಕ್ಕೆ ಭೇಟಿ ನೀಡಿ ದರ್ಶನ್ ಪಡೆದು ಪುನೀತರಾಗುತ್ತಾರೆ. ಇದೀಗ ವಿಜಯಲಕ್ಷ್ಮಿ ಕೂಡ ಈ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಅತ್ಯಂತ ಪ್ರಭಾವಿ ಹಾಗೂ ಶಕ್ತಿ ದೇವತೆಯಾಗಿ ಗುರುತಿಕೊಂಡಿರುವ ಮಾತೆ ಸತಿಯ ದೇಹದ ತುಣುಕುಗಳು ಬಿದ್ದ ಸ್ಥಳಗಳೇ ಶಕ್ತಿಪೀಠಗಳು. ಭಾರತದ 51 ಭಾಗದಲ್ಲಿ ಸತಿ ದೇವಿಯ ತುಣುಕುಗಳು ಬಿದ್ದಿದೆ. ಈ ಸ್ಥಳಗಳು ಇದೀಗ ಶಕ್ತಪೀಠವಾಗಿ ಗುರುತಿಸಿಕೊಂಡಿದೆ. ಈ ಪೈಕಿ ಕಾಮಾಕ್ಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದರೆ ಸಂಕಷ್ಟಗಳು ಬಹುತೇಕ ನಿವಾರಣೆಯಾಗುತ್ತದೆ ಅನ್ನೋದು ನಂಬಿಕೆ. ಹೀಗಾಗಿ ವಿಜಯಲಕ್ಷ್ಮಿ ಈ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
ಇತ್ತೀಚೆಗೆ ವಿಜಯಲಕ್ಷ್ಮಿ ಕೊಲ್ಲೂರಿನ ಮೂಕಾಂಬಿಕೆ ದೇವಸ್ಥಾನಕ್ಕೆ ಭೇಟಿ ನೀಡಿ ನವಚಂಡಿಕಾ ಹೋಮ ಹಾಗೂ ಯಾಗ ನಡೆಸಿದ್ದರು. ನವಚಂಡಿಕಾ ಯಾಗ, ಪಾರಾಯಣದಲ್ಲೂ ವಿಜಯಲಕ್ಷ್ಮಿ ಭಾಗಿಯಾಗಿದ್ದರು. ಮೂಕಾಂಬಿಕಾ ಸನ್ನಿಧಾನದ ಯಾಗಶಾಲೆಯಲ್ಲಿ ನರಸಿಂಗ ಅಡಿಗ ನೇತೃತ್ವದಲ್ಲಿ ನವಚಂಡಿಕಾ ಯಾಗ ನೆರವೇರಿತ್ತು.
ಮೂಕಾಂಬಿಕಾ ದೇವಿಗೆ ರೇಷ್ಣೆ ಸೇರಿ, ಫಲಪುಷ್ಪ ಅರ್ಪಿಸಿ ಸಂಕಲ್ಪ ಮಾಡಿದ್ದರು. ದರ್ಶನ್ ಬಿಡುಗಡೆಗೆ ವಿಶೇಷವಾಗಿ ಈ ಪೂಜೆ ನೆರವೇರಿಸಿದ್ದರು. ದೇವಿಯ ಅನುಗ್ರಹ ಪಡೆಯಲು ಕೈಗೊಳ್ಳುವ ವಿಶೇಷ ಹಾಗೂ ಪ್ರಬಲ ಹೋಮ ಇದಾಗಿದೆ. ದುಷ್ಠಪೀಡೆ, ಅರಿಷ್ಠೆ, ಶತ್ರುಬಾಧೆ ಸೇರಿದಂತ ನಕರಾತ್ಮಕ ಶಕ್ತಿಗಳು ದೂರವಾಗಲು ಈ ಯಾಗ ಮಾಡಿದ್ದರು.
ಇದಾದ ಬಳಿಕ ಭೀಮನ ಅಮಾಸ್ಯೆ ದಿನ ಬನಶಂಕರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ವಿಜಯಲಕ್ಷ್ಮಿ ವಿಶೇಷ ಪೂಜೆ ಸಲ್ಲಿಸಿದ್ದರು. ದರ್ಶನ್ ಬಿಡುಗಡೆಗಾಗಿ ಪ್ರಾರ್ಥನೆ ಸಲ್ಲಿಸಿದ್ದರು. ವಿಜಯಲಕ್ಷ್ಮಿ, ಡಾ.ಶುತ್ರಿ ಗೌಡ ಸೇರಿದಂತೆ ಆಪ್ತರು ದೇವಸ್ಥಾನಕ್ಕೆ ಬೇಟಿ ನೀಡಿದ್ದರು.