ಗೆಳತಿ ನೀನು ಕೇಳಲೇ ಬೇಕು 'ಏನೀ ಅದ್ಭುತವೇ'! ಚಿತ್ರರಂಗದ ಕಲಾವಿದೆ ಮಾನಸಿ ಸುಧೀರ್!

First Published Jun 16, 2020, 4:53 PM IST

ಸಾಮಾಜಿಕ ಜಾಲತಾಣ ಅದೆಷ್ಟೋ ಪ್ರತಿಭೆಗಳಿಗೆ ತನ್ನ ಕಲೆಯನ್ನು ಪ್ರದರ್ಶಿಸಲು ಉತ್ತಮ ವೇದಿಕೆಯಾಗಿದೆ. ಇದೀಗ ಲಾಕ್ ಡೌನ್ ಸಮಯವನ್ನು  ಒಳ್ಳೆಯ ರೀತಿಯಲ್ಲಿ ಹೇಗೆ ಉಪಯೋಗಿಸಿಕೊಳ್ಳಬೇಕು ಎನ್ನುವುದನ್ನು ಈ ವೈರಲ್ ವಿಡಿಯೋ ಒಂದು ಸಾಬೀತುಮಾಡಿದೆ . ಕನ್ನಡದ ಸಾಹಿತ್ಯ ವಲಯ ಕಂಡ ಶ್ರೇಷ್ಠ ಕವಿಗಳಾದ ಅಂಬಿಕಾತನಯದತ್ತ ದ.ರಾ.ಬೇಂದ್ರೆ ಮತ್ತು ಜಾಲಿ ಬಾರಿನ ಪೋಲಿ ಗೆಳೆಯರನ್ನು ಪರಿಚಯಿಸಿದ ಬಿಆರ್ ಲಕ್ಷ್ಮಣ್ ರಾವ್ ಅವರ ಕವಿತೆಗಳಿಗೆ ತನ್ನ ಅಭಿನಯದ ಮೂಲಕ ಹೊಸದೊಂದು ರೂಪ ಕೊಟ್ಟಿರುವ ಈ ಅದ್ಭುತ ಕಲಾವಿದೆಯ ವಿಡಿಯೋ ತುಂಬಾನೇ ವೈರಲ್ ಆಗುತ್ತಿದೆ. 'ಏನೀ ಅದ್ಭುತವೇ' ಕವಿತೆಯನ್ನು ಭಾವಾಭಿನಯ ರೂಪದಲ್ಲಿ ಮತ್ತಷ್ಟು ಅದ್ಭುತವಾಗಿಸಿ ಅಪಾರ ಮೆಚ್ಚುಗೆಗಳಿಸಿದ್ದಾರೆ .ಇಷ್ಟೆಲ್ಲಾ ಪೀಠಿಕೆಗೆ ಕಾರಣರಾಗಿರುವ ಆ ಕಲಾವಿದೆ ಯಾರು ?ಎಲ್ಲಿಯವರು ? ಅವರ ಹಿನ್ನೆಲೆ ಏನು? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ ..
 

'ಏನೀ ಅದ್ಭುತವೇ' ಕಾವ್ಯಭಾವಾಭಿನಯ ಮಾಡಿರುವ ಮಾನಸಿ ಜೋಶಿ ಭರತನಾಟ್ಯ ಕಲಾವಿದೆ ಮಾತ್ರವಲ್ಲ ಗಾಯಕಿಯೂ ಹೌದು.
undefined
ಮಾನಸಿ ಅವರು ಮೂಲತಃ ಉಡುಪಿಯವರಾಗಿದ್ದು ಈ ರೀತಿಯ ಮತ್ತಷ್ಟು ವಿಭಿನ್ನ ಪ್ರಯೋಗಗಳನ್ನು ಮಾಡುವ ಯೋಜನೆ ರೂಪಿಸಿದ್ದಾರೆ.
undefined
ಲಾಕ್‌ಡೌನ್‌ ಅವಧಿಯಲ್ಲಿ ಮನೆಯಲ್ಲಿ ಕುಳಿತುಕೊಂಡು 15 ವರ್ಷಗಳ ಹಿಂದೆ ಕಲಿತ ಭಾವಗೀತೆಗಳನ್ನು ಮರು ಪ್ರಯತ್ನ ಮಾಡುತ್ತಾ ಕನ್ನಡ ನಾಡು ಕಂಡ ಶ್ರೇಷ್ಠ ಕವಿಗಳ ಕವಿತೆಗಳಿಗೆ ಹೊಸದೊಂದು ರೂಪ ನೀಡಿದ್ದಾರೆ.
undefined
ಬೇಂದ್ರೆ ಅವರ 'ಭೃಂಗದ ಬೆನ್ನೇರಿ ಹಾಗೂ ಬಿ ಆರ್ ಲಕ್ಷ್ಮಣರಾವ್‌ ಅವರ 'ಹೇಗಿದ್ದೀಯೇ ಟ್ವಿಂಕಲ' ಹಾಗೂ ಇನ್ನೂ ಅನೇಕ ಹಾಡುಗಳಿಗೆ ಭಾವಾಭಿನಯ ಮಾಡಿರುವ ಇವರು ಕನ್ನಡಿಗರ ಮೆಚ್ಚುಗೆಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
undefined
ನೃತ್ಯಕ್ಕೆ ಸಂಬಂಧ ಪ್ರಯೋಗಳನ್ನು ಮಾಡುತ್ತಲೇ ಇರುವ ಇವರು ಇದಕ್ಕೂ ಕೂಡ ತಯಾರಿ ಮಾಡಿಕೊಳ್ಳಲು ಹೆಚ್ಚಿನ ಸಮಯವನ್ನು ಮೀಸಲಿಟ್ಟಿದ್ದಾರೆ ಅದರ ಪ್ರತಿಫಲವಾಗಿ ಇಂದು ತಮ್ಮ ವಿಡಿಯೋ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ಮಂದಿಗೆ ತಲುಪಿದ್ದಾರೆ .
undefined
ಈ ವಿಡಿಯೋಗೆ ಜನರಿಂದ ಸಿಕ್ಕ ಅದ್ಭುತ ಪ್ರತಿಕ್ರಿಯೆಗೆ ಇನ್ನು ಹೆಚ್ಚು ವಿಶೇಷವಾಗಿ ವಿಭಿನ್ನ ಪ್ರಯತ್ನಗಳನ್ನು ಡಿಜಿಟಲ್ ಪರದೆಯ ಮೇಲೆ ತಂದು ಮತ್ತಷ್ಟು ಜನರನ್ನು ರಂಜಿಸುವ ಚಿಂತನೆಯಲ್ಲಿದ್ದಾರೆ ಮಾನಸಿ ಅವರು.
undefined
ಮಾನಸಿ ಅವರು ತಮ್ಮ ಪತಿ ವಿದ್ವಾನ್ ಸುಧೀರ್‌ ರಾವ್‌ ಅವರೊಂದಿಗೆ ನೃತ್ಯಶಾಲೆಯನ್ನು ನಡೆಸುತ್ತಿರುವ ಮಾನಸಿ ಅವರು ಕರುನಾಡಿಗೆ ಕರ್ನಾಟಕ ಸಾಂಸ್ಕೃತಿಕ ಲೋಕಕ್ಕೆ ಬಹಳಷ್ಟು ಪ್ರತಿಭೆಗಳನ್ನು ಪರಿಚಯಿಸಲು ತಯಾರಿ ನಡೆಸುತ್ತಿದ್ದಾರೆ.
undefined
ರಾಘವೇಂದ್ರ ರಾಜ್‌ಕುಮಾರ್ ಅಭಿನಯದ 'ಅಮ್ಮನ ಮನೆ' ಸಿನಿಮಾದಲ್ಲಿ ಅಭಿನಯಿಸಿರುವ ಇವರು ನಟನೆಯ್ಲಲೂ ತಮ್ಮ ಛಾಪು ಮೂಡಿಸಿದ್ದಾರೆ .
undefined
ಕನ್ನಡ ಮಾತ್ರವಲ್ಲದೆ 'ಕಂಚಿಲ್ದ ಬಾಲೆ 'ಎಂಬ ತುಳು ಸಿನಿಮಾದಲ್ಲೂ ಅಭಿನಯಿಸಿದ್ದಾರೆ.
undefined
ಪೌರಾಣಿಕ ಧಾರಾವಾಹಿಗಳಾದ 'ಮಹಾಭಾರತ', 'ಸೀತೆ' ಹಾಗೂ ಭಕ್ತಿ ಪ್ರಧಾನ ಧಾರಾವಾಹಿ 'ಗುರು ರಾಘವೇಂದ್ರ ವೈಭವ'ದಲ್ಲಿ ನಟಿಸಿದ್ದಾರೆ.
undefined
click me!