Happy Birthday Shivarajkumar: ನೋಡಲೇ ಬೇಕು ಶಿವಣ್ಣನ ಈ 10 ಸಿನಿಮಾಗಳು!

Published : Jul 12, 2022, 12:12 PM IST

1986ರಲ್ಲಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಮೂರು ತಲೆಮಾರುಗಳನ್ನು ಮನೋರಂಜಿಸುತ್ತಿರುವ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್...

PREV
110
Happy Birthday Shivarajkumar: ನೋಡಲೇ ಬೇಕು ಶಿವಣ್ಣನ ಈ 10 ಸಿನಿಮಾಗಳು!

 ಆನಂದ್‌ -  1986ರಲ್ಲಿ ಆನಂದ್ ಸಿನಿಮಾ ಮೂಲಕ ಎಂಟ್ರಿ ಕೊಟ್ಟರು ಶಿವಣ್ಣ.  ಸುಧಾರಾಣಿ ನಾಯಕಿಯಾಗಿ ಅಭಿನಯಿಸಿರುವ ಈ ಚಿತ್ರಕ್ಕೆ ಸಂಗೀತಮ್ ಶ್ರೀನಿವಾಸ್‌ ರಾವ್‌ ನಿರ್ದೇಶನ ಮಾಡಿದ್ದಾರೆ, ಶಂಕರ್-ಗಣೇಶ್‌ ಸಂಗೀತ ನೀಡಿದ್ದಾರೆ.

210

ಗಂಧದ ಗುಡಿ 2 -1994ರಲ್ಲಿ ಬಿಡುಗಡೆಯಾದ ಈ ಸಿನಿಮಾದಲ್ಲಿ ಡಾ.ರಾಜ್‌ಕುಮಾರ್ ಮತ್ತು ಡಾ. ಶಿವರಾಜ್‌ಕುಮಾರ್ ಕಂಬಿನೇಷನ್‌ನ ನೋಡಬಹುದು. ವಿಜಯ್ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ರಾಜೇಶ್ವರಿ ಮತ್ತು ತಾರಾ ಅಭಿನಯಿಸಿದ್ದಾರೆ ಹಾಗೇ ರಾಜನ್ ನಾಗೇಂದ್ರ ಸಂಗೀತ ನಿರ್ದೇಶನ ಮಾಡಿದ್ದಾರೆ. 

310

ಮುತ್ತಣ್ಣ - 1994ರಲ್ಲಿ ಬಿಡುಗಡೆಯಾದ ಈ ಸಿನಿಮಾದಲ್ಲಿ ಶಿವಣ್ಣ ಅಣ್ಣ-ತಂಗಿ ಸಂಬಂಧವನ್ನು ಅದ್ಭುತವಾಗಿ ತೋರಿಸಿದ್ದಾರೆ.  ಎಮ್‌ಎಸ್ ರಾಜಶೇಖರ್ ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ಹಂಸಲೇಖ ಸಂಗೀತ ನಿರ್ದೇಶನ ಮಾಡಿದ್ದಾರೆ.

410

ಓಂ - 1995ರಲ್ಲಿ ತೆರೆಕಂಡ ಈ ಸಿನಿಮಾದಲ್ಲಿ ಶಿವಣ್ಣನಿಗೆ ಜೋಡಿಯಾಗಿ ಪ್ರೇಮಾ ಅಭಿನಯಿಸಿದ್ದಾರೆ.  ಉಪೇಂದ್ರ ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ಹಂಸಲೇಖ ಸಂಗೀತ ನಿರ್ದೇಶನ ಮಾಡಿದ್ದಾರೆ. 

510

ಜನುಮದ ಜೋಡಿ - 1996ರಲ್ಲಿ ರಿಲೀಸ್ ಆದ ಈ ಸಿನಿಮಾದಲ್ಲಿ ಶಿವಣ್ಣನಿಗೆ ಜೋಡಿಯಾಗಿ ಚಿತ್ರ ಅಭಿನಯಿಸಿದ್ದಾರೆ.  ಟಿಎಸ್‌ ನಾಗಾಭರಣ ನಿರ್ದೇಶನ ಮಾಡಿರುವ ಈ ಸಿನಿಮಾ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.

610

ಎಕೆ 47 - 1999ರಲ್ಲಿ ರಿಲೀಸ್ ಆಗಿರುವ ಈ ಸಿನಿಮಾವನ್ನು ಕೋಟಿ ರಾಮು ನಿರ್ಮಾಣ ಮಾಡಿದ್ದಾರೆ, ಓಂ ಪ್ರಕಾಶ್ ರಾವ್ ನಿರ್ದೇಶನ ಮತ್ತು ಹಂಸಲೇಖ ಸಂಗೀತ ನಿರ್ದೇಶನ ಮಾಡಿದ್ದಾರೆ. 

710

 ನಮ್ಮೂರ ಮಂದಾರ ಹೂವೇ - ಮತ್ತೆ ಪ್ರೇಮಾ ಜೋಡಿಯಾಗಿ ಅಭಿನಯಿಸಿರುವ ಈ ಚಿತ್ರವನ್ನು  ಸುನಿಲ್ ಕುಮಾರ್ ದೇಸಾಯಿ ನಿರ್ದೇಶನ ಮಾಡಿದ್ದಾರೆ. ಇಳಯ ರಾಜ್‌ ಸಂಗೀತವಿದೆ.

810

ತವರಿಗೆ ಬಾ ತಂಗಿ - 2002ರಲ್ಲಿ ತೆರೆಕಂಡ ಈ ಚಿತ್ರದಲ್ಲಿ ಅನುಪ್ರಭಾಕರ್, ರಾಧಿಕಾ ಕುಮಾರಸ್ವಾಮಿ ಅಭಿನಯಿಸಿದ್ದಾರೆ. ಸಾಯಿ ಪ್ರಕಾಶ್ ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ಹಂಸಲೇಖ ಸಂಗೀತ ನೀಡಿದ್ದಾರೆ.

910

ಚಿಗುರಿದ ಕನಸು - ಶಿವಣ್ಣ, ಅನಂತ್ ನಾಗ್, ಅವಿನಾಶ್ ಸೇರಿದಂತೆ ದೊಡ್ಡ ತಾರಾ ಬಳಗ ಹೊಂದಿರುವ ಈ ಸಿನಿಮಾವನ್ನು ಟಿಎಸ್‌ ನಾಗಾಭರಣ ನಿರ್ದೇಶನ ಮಾಡಿದ್ದಾರೆ. ವಿ ಮನೋಹರ್‌ ಸಂಗೀತ ನೀಡಿದ್ದಾರೆ.

1010

 ಜೋಗಿ - 2005ರಲ್ಲಿ ಪ್ರೇಮ್ ನಿರ್ದೇಶನ ಮಾಡಿರುವ ಈ ಸಿನಿಮಾದಲ್ಲಿ ಶಿವಣ್ಣ ಮತ್ತು ಜೆನಿಫರ್ ಅಭಿನಯಿಸಿದ್ದಾರೆ. ತಾಯಿ ಸೆಂಟಿಮೆಂಟ್‌ನ ಅದ್ಭುತವಾಗಿ ತೋರಿಸಲಾಗಿದ್ದು, ಶಿವಣ್ಣ ಲಾಂಗ್ ಹಿಡಿದಿ ಮೊದಲ ಸಿನಿಮಾ ಇದು. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories