Happy Birthday Shivarajkumar: ಶಿವಣ್ಣನಿಗೆ ಆನ್‌ಸ್ಕ್ರೀನ್‌ ಡಿಫರೆಂಟ್‌ ರೂಪ ತಂದುಕೊಟ್ಟ ನಿರ್ದೇಶಕರಿವರು

Published : Jul 12, 2022, 10:52 AM IST

ಇಂದು ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ 60ನೇ ಹುಟ್ಟುಹಬ್ಬ. ಯಾರಿಗೆ ತಾನೆ ಶಿವಣ್ಣ ಗೊತ್ತಿಲ್ಲ ಹೇಳಿ?  

PREV
16
Happy Birthday Shivarajkumar: ಶಿವಣ್ಣನಿಗೆ ಆನ್‌ಸ್ಕ್ರೀನ್‌ ಡಿಫರೆಂಟ್‌ ರೂಪ ತಂದುಕೊಟ್ಟ ನಿರ್ದೇಶಕರಿವರು

ಅಣ್ಣಾವ್ರ ಹಾಗೆಯೇ ಶಿವರಾಜ್‌ಕುಮಾರ್‌ ಕೂಡ ಮೂರು ತಲೆಮಾರುಗಳ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡ ನಟ. ಅವರ ಮೊದಲ ಸಿನಿಮಾಗಳನ್ನು ನೋಡಿ ಮೆಚ್ಚಿಕೊಂಡವರು ಈಗ ಮಧ್ಯವಯಸ್ಸು ತಲುಪಿಸಿದ್ದಾರೆ. 

26

ಎರಡನೆಯ ಹಂತದಲ್ಲಿ ಓಂ ಚಿತ್ರದ ನಂತರ ಕನ್ನಡದಲ್ಲಿ ರೌಡಿಯಿಸಂ ಚಿತ್ರಗಳ ಸರದಾರ ಅನ್ನಿಸಿಕೊಂಡವರು ಶಿವಣ್ಣ. ಮೂರನೆಯ ತಲೆಮಾರು ಅವರ ಸಾಫ್ಟ್‌ ಸಿನಿಮಾಗಳ ಆರಾಧಕರು. ಕತೆಯೇ ಜೀವಾಳವಾದ ಅನೇಕ ಚಿತ್ರಗಳನ್ನು ಶಿವಣ್ಣ ಮಾಡಿದ್ದಾರೆ.

36

ನಿರ್ದೇಶಕರ ಪೈಕಿ ಹಿರಿಯರಾದ ಸಿಂಗೀತಂ ಶ್ರೀನಿವಾಸರಾವ್‌, ಎಂ ಎಸ್‌ ರಾಜಶೇಖರ್‌, ವಿ ಸೋಮಶೇಖರ್‌, ಡಿ. ರಾಜೇಂದ್ರ ಬಾಬು, ರಾಜೇಂದ್ರ ಸಿಂಗ್‌ ಬಾಬು, ಬರಗೂರು ರಾಮಚಂದ್ರಪ್ಪ ಮುಂತಾದ ಹಿರಿಯ ನಿರ್ದೇಶಕರ ಜತೆಗೇ, ಪ್ರೇಮ್‌, ದುನಿಯಾ ಸೂರಿ ಮೊದಲಾದ ನಿರ್ದೇಶಕರ ಚಿತ್ರಗಳನ್ನೂ ಶಿವಣ್ಣ ಮಾಡಿದ್ದಾರೆ. 

46

ಈಗ ಬರುತ್ತಿರುವ ಹೊಸ ನಿರ್ದೇಶಕರಾದ ಶ್ರೀನಿ, ಕೊಟ್ರೇಶಿ, ವಿಜಯ್‌ ಮಿಲ್ಟನ್‌, ಹರ್ಷ ಮುಂತಾದವರ ಸಿನಿಮಾಗಳನ್ನೂ ಒಪ್ಪಿಕೊಳ್ಳುತ್ತಾರೆ. ಎಲ್ಲರ ಕಣ್ಮಣಿಯಾಗಿ ಶಿವರಾಜ್‌ಕುಮಾರ್‌ ರಂಜಿಸುತ್ತಿರುವುದಕ್ಕೆ ಈ ಬೆರೆಯುವ ಗುಣವೇ ಕಾರಣ

56

ಶಿವಣ್ಣ ಈ ಸಲವೂ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಲು ನಿರ್ಧರಿಸಿದ್ದಾರೆ. ಅಭಿಮಾನಿಗಳ ಮನೆ ಬಳಿ ಬರುವುದು ಬೇಡ ಎಂದು ಕೇಳಿಕೊಂಡಿರುವ ಅವರು ಕುಟುಂಬಸ್ಥರ ಜೊತೆ ಸಮಯ ಕಳೆಯಲಿದ್ದಾರೆ. ಅವರ ಕೆಲವು ಹೊಸ ಸಿನಿಮಾಗಳ ಪೋಸ್ಟರ್ ರಿಲೀಸ್ ಆಗಲಿದೆ.

66

ಬೈರಾಗಿ (Bairagi) ಸಿನಿಮಾ ಶಿವಣ್ಣ ಜನ್ಮದಿನಕ್ಕೂ ಕೆಲವು ದಿನ ಹಿಂದೆ ಬಿಡುಗಡೆಯಾಯಿತು.ಇದಕ್ಕೂ ಮುನ್ನ ನಡೆದ ಮಾತುಕತೆಯಲ್ಲಿ ಶಿವಣ್ಣ ಹೀಗೆ ರಿಯಾಕ್ಟ್ ಮಾಡಿದ್ದು. 'ಈ ಸಿನಿಮಾವನ್ನು ಶಿವಣ್ಣ ಬರ್ತ್‌ಡೇಯಂದೇ ಬಿಡುಗಡೆ ಮಾಡಬಹುದಿತ್ತಲ್ವಾ?' ಅನ್ನೋ ಪ್ರಶ್ನೆಯನ್ನು ನಿರ್ಮಾಪಕರಿಗೆ ಕೇಳಿದಾಗ, ಇದು ಅವರ ಜನ್ಮದಿನಕ್ಕೂ ಮೊದಲೇ ನೀಡುವ ಅಡ್ವಾನ್ಸ್ಡ್ ಗಿಫ್ಟ್' ಅಂದರು ಕೃಷ್ಣ ಸಾರ್ಥಕ್.

Read more Photos on
click me!

Recommended Stories