ಪುರುಷರು ಏನಾದರೂ ಹೇಳಲು ಬಯಸಿದ್ರೆ, ಸಿಂಪಲ್ ಆಗಿ ಹೇಳಿಬಿಡ್ತಾರೆ. ತಮ್ಮ ಸಂಗಾತಿ ತನ್ನ ಹೃದಯದಲ್ಲಿರೋದನ್ನು ತಾವಾಗಿ ಅರ್ಥಮಾಡಿಕೊಳ್ಳುವವರೆಗೆ ಕಾಯುತ್ತಾ ಅವರು ತನ್ನ ಸಮಯವನ್ನು ವ್ಯರ್ಥ ಮಾಡೋ ಜಾಯಮಾನವೇ ಅಲ್ಲ. ಆದರೆ, ಮಹಿಳೆಯರು ಮಾತ್ರ ಅದಕ್ಕೆ ತದ್ವಿರುದ್ದ . ತಾನು ಏನು ಹೇಳದೆ ತನ್ನವರು ತನ್ನ ಮನಸ್ಸನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಇಷ್ಟ ಪಡ್ತಾರೆ.
ಮಹಿಳೆಯರನ್ನು ಅರ್ಥಮಾಡಿಕೊಳ್ಳುವುದು ಕಷ್ಟ, ಅವರ ಮಾತುಗಳು ಮತ್ತು ಸನ್ನೆಗಳ ಕಡೆಗೆ ಸೂಕ್ಷ್ಮವಾಗಿ ಗಮನ ನೀಡದಿದ್ದರೆ, ಅವರನ್ನು ಅರ್ಥ ಮಾಡಿಕೊಳ್ಳೋದೆ ಕಷ್ಟ. ಹಾಗಾಗಿಯೇ ಪುರುಷರು ತಾವು ದೀರ್ಘಕಾಲದಿಂದ ಮಹಿಳೆ ಜೊತೆ ಇದ್ದರೂ ಅವರನ್ನು ಅರ್ಥ ಮಾಡಿಕೊಳ್ಳೋದು ಕಷ್ಟ. ಅನೇಕ ಬಾರಿ ಪುರುಷರು ಮಹಿಳೆಯರಿಗೆ ಅರ್ಥವಾಗದ ವಿಷಯಗಳನ್ನು ಅಸಂಬದ್ಧ ಎಂದು ಕರೆಯುತ್ತಾರೆ. ಆದರೆ ಸತ್ಯವೆಂದರೆ ಅವರು ತಮ್ಮ ಸಂಗಾತಿಯನ್ನು ಸೂಕ್ಷ್ಮವಾಗಿ ಅರ್ಥಮಾಡಿಕೊಳ್ಳಲು (Understanding) ಎಂದಿಗೂ ಪ್ರಯತ್ನಿಸುವುದಿಲ್ಲ.
ಹೆಂಡತಿಯನ್ನು ಅರ್ಥ ಮಾಡಿಕೊಳ್ಳೋದು(understanding wife) ಅಷ್ಟು ಕಷ್ಟವಲ್ಲ, ಆದ್ದರಿಂದ ಇಲ್ಲಿ ನಾವು ನಿಮಗೆ ಇದೇ ರೀತಿಯ ಕೆಲವು ವಿಷಯಗಳ ಬಗ್ಗೆ ಹೇಳುತ್ತಿದ್ದೇವೆ, ನೀವು ನಿಮ್ಮಾಕೆಯನ್ನು ಅರ್ಥ ಮಾಡಿಕೊಳ್ಳಲು ಬಯಸಿದ್ರೆ ಇಲ್ಲಿ ಕೊಟ್ಟಿರೋ ವಿಷಯಗಳನ್ನು ಅರ್ಥ ಮಾಡ್ಕೊಳಿ.
ಸ್ಮಾಲ್ ಟಾಕ್ ಇಷ್ಟಪಡೋದಿಲ್ಲ
ಹುಡುಗಿಯರು ಸಾಮಾನ್ಯವಾಗಿ ಸ್ಮಾಲ್ ಟಾಕ್ (small talk) ಇಷ್ಟಪಡುವುದಿಲ್ಲ. ಅದರಲ್ಲೂ ತಾನು ಇಷ್ಟ ಪಡೋ ಹುಡುಗ, ಹೌದು, ಅಲ್ಲ, ಇಷ್ಟರಲ್ಲೇ ಮಾತು ಮುಗಿಸಿದ್ರೆ ಆಕೆಗೆ ಇಷ್ಟವಾಗೋದಿಲ್ಲ. ಸಂಗಾತಿಯು ಈ ವಿಷಯವನ್ನು ಅರ್ಥಮಾಡಿಕೊಳ್ಳದಿದ್ದಾಗ, ಅವರ ಹೃದಯವು ಒಡೆಯಲು ಪ್ರಾರಂಭಿಸುತ್ತದೆ.
ಆದ್ಯತೆಯಾಗಲು ಬಯಸುತ್ತಾರೆ
ಪ್ರತಿಯೊಬ್ಬ ಹುಡುಗಿಯೂ ತನ್ನ ನೆಚ್ಚಿನ ಪುರುಷನಿಗೆ ಪ್ರಯೋರಿಟಿ (priority) ಆಗೋಕೆ ಇಷ್ಟಪಡ್ತಾರೆ. ಆದರೆ ಈ ಬಯಕೆಯನ್ನು ಅವಳು ಸ್ವತಃ ವ್ಯಕ್ತಪಡಿಸಲು ಸಾಧ್ಯವಿಲ್ಲ. ಆದ್ದರಿಂದ, ಪುರುಷರು ತಮ್ಮ ಸಂಗಾತಿಯನ್ನು ಅರ್ಥ ಮಾಡಿಕೊಂಡು ಆಕೆಗೆ ಹೆಚ್ಚು ಪ್ರಾಮುಖ್ಯತೆ ನೀಡೋದು ಬೆಸ್ಟ್.
ಪ್ರೀತಿ ಮಾತ್ರವಲ್ಲ, ಗೌರವವೂ ಮುಖ್ಯ
ಹುಡುಗಿಯರಿಗೆ ಪ್ರೀತಿಯ ಜೊತೆ ಜೊತೆಗೆ ಗೌರವವನ್ನು ಸಹ ತಮ್ಮ ಸಂಗಾತಿಯಿಂದ ಬಯಸುತ್ತಾರೆ. ಸಂಗಾತಿಯಿಂದ ಆ ಗೌರವ ಸಿಗದೇ ಹೋದರೆ ಆಕೆ ತುಂಬಾನೆ ದುಃಖಪಡ್ತಾಳೆ. ಹಾಗಾಗಿ ನೀವು ನಿಮ್ಮಾಕೆಗೆ ಗೌರವವನ್ನು (respect) ಸಹ ಕೊಡೋದನ್ನು ಕಲಿತರೆ ಉತ್ತಮ.
ರೋಮ್ಯಾನ್ಸ್ ಇಷ್ಟ ಆದ್ರೆ ಮಾತಾನಾಡೋದಿಲ್ಲ
ಮಹಿಳೆಯರು ತಮ್ಮ ಲೈಂಗಿಕ ಕಲ್ಪನೆಗಳ (sexual fantasy) ಬಗ್ಗೆ ಪುರುಷರಿಗಿಂತ ಹೆಚ್ಚು ಬಹಿರಂಗವಾಗಿ ಮಾತನಾಡುವುದಿಲ್ಲ, ಹಾಗಂದ ಮಾತ್ರಕ್ಕೆ ಅವರು ಆಸಕ್ತಿ ಹೊಂದಿಲ್ಲ ಎಂದು ಅರ್ಥವಲ್ಲ. ಆದ್ದರಿಂದ, ಪುರುಷನು ತನ್ನ ಸ್ತ್ರೀ ಸಂಗಾತಿಯ ಮನಸ್ಸನ್ನು ಸ್ವತಃ ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು.