ದಾಂಪತ್ಯದಲ್ಲಿ personal space ಎಷ್ಟಿರಬೇಕು?
First Published | Aug 17, 2022, 1:59 PM ISTರಿಲೇಶನ್‌ಶಿಪ್‌ನಲ್ಲಿರುವಾಗ ಜನರು ಎಲ್ಲಾ ವಿಷಯವನ್ನು, ಅದು ಸಣ್ಣದಾಗಿರಲಿ ಅಥವಾ ದೊಡ್ಡದಾಗಿರಲಿ ತಮ್ಮ ಸಂಗಾತಿಯೊಂದಿಗೆ ಹಂಚಿಕೊಳ್ಳುತ್ತಾರೆ, ಆದರೆ ನೀವು ಬಯಸಿದರೂ ನೀವು ಹಂಚಿಕೊಳ್ಳಲಾಗದ ಕೆಲವು ವಿಷಯಗಳಿರುತ್ತವೆ. ಆ ವಿಷಯಗಳನ್ನು ನೀವು ಹೇಳದೇ ಇದ್ದಾಗ, ಸಂಬಂಧಗಳು ದೂರವಾಗುತ್ತವೆ ಮತ್ತು ಅನುಮಾನ ಮೂಡುತ್ತವೆ. ಸಂಬಂಧಗಳಲ್ಲಿ ಅಷ್ಟೊಂದು ಇಂಟರ್ ಫಿಯರೆನ್ಸ್ ಅಗತ್ಯ ಇದ್ಯಾ? ಖಂಡಿತಾ ಇಲ್ಲ.! ಪರಸ್ಪರ ಸಂಬಂಧಗಳಲ್ಲಿ ಸ್ವಲ್ಪ ಸ್ಪೇಸ್ ಕೊಡಬೇಕು, ಆದರೆ ಈ ಸ್ಪೇಸ್ ಸಹ ಸಂಬಂಧ ಮನಸ್ಸಿನಲ್ಲಿಟ್ಟುಕೊಂಡು ಕೊಡಬೇಕು, ಆಗ ನಿಮ್ಮ ಸಂಬಂಧವು ಹದಗೆಡುವುದಿಲ್ಲ.