20 ಹರೆಯದಲ್ಲಿ ಲವ್, ಗಿವ್ ಡವ್ವ್ ಅಂತ ಜಾರಬಾರದು ಅಂತ ಹೇಳೋದ್ಯಾಕೆ?

First Published | Nov 17, 2023, 11:55 AM IST

ಬಾಲ್ಯದ ಪ್ರೀತಿಯನ್ನು ಅತ್ಯಂತ ಸುಂದರ ಮತ್ತು ಮುಗ್ಧವೆಂದು ಪರಿಗಣಿಸಬಹುದು, ಆದರೆ ಪ್ರೀತಿಯಲ್ಲಿ ಬೀಳುವುದು ಪ್ರತಿಯೊಬ್ಬರ ಜೀವನಕ್ಕೂ ದುಬಾರಿಯಾಗುತ್ತೆ. ಅಂತಹ ಪರಿಸ್ಥಿತಿಯಲ್ಲಿ, ಶಾಲಾ ಮತ್ತು ಕಾಲೇಜು ದಿನಗಳಲ್ಲಿ ಸೀರಿಯಸ್ ಆಗಿ ಲವ್ ಮಾಡೋ ಬಗ್ಗೆ ನೀವು ಯೋಚನೆ ಮಾಡ್ತಿದ್ರೆ…ನಾವು ಹೇಳ್ತಿವಿ ಅಂತ ರಿಲೇಶನ್’ಶಿಪ್ ಬೇಡವೇ ಬೇಡ…

ಪ್ರೀತಿ ಯಾವಾಗ ಬೇಕಾದ್ರೂ ಆಗಬಹುದು ಅಲ್ವಾ? ಅದು ಯಾವುದೇ ವಯಸ್ಸಿನಲ್ಲಿ ಸಹ ಸಂಭವಿಸಬಹುದು ಎಂಬುದರಲ್ಲಿ ಸಂದೇಹವಿಲ್ಲ. ಆದರೆ ನಿಮಗೆ ಲವ್ ಆಗದೇ ಇದ್ರೆ ನೀವು ಅದೃಷ್ಟವಂತರು. ವಿಶೇಷವಾಗಿ ಇಲ್ಲಿ ನಾವು ತಮ್ಮ 20ರ ಹರೆಯದಲ್ಲಿ (teenage love) ಪ್ರೀತಿಗಾಗಿ ತಮ್ಮ ಸಮಯವನ್ನು ವ್ಯರ್ಥ ಮಾಡದವರ ಬಗ್ಗೆ ಮಾತನಾಡುತ್ತಿದ್ದೇವೆ. ಏಕೆಂದರೆ ಈ ವಯಸ್ಸಿನಲ್ಲಿ, ಲವ್ ಮಾಡೋದು ಅಂದ್ರೆ ಅದು ಹೆಚ್ಚಿನ ಜನರಿಗೆ ಲವ್ ಆಗಿರೋದೆ ಇಲ್ಲ, ಬರೀ ಆಕರ್ಷಣೆಯಾಗಿರುತ್ತೆ. 
 

20ರ ಹರೆಯದಲ್ಲಿ ಲವ್ ಆಗದೇ ಇರೋದೆ ಬೆಸ್ಟ್ ಅನ್ನೋದು ಯಾಕೆ ಅಂದ್ರೆ, ಆ ವಯಸ್ಸಲ್ಲಿ ವ್ಯಕ್ತಿ ತನ್ನ ಮನಸ್ಸಿನ ಮೇಲೆ ಹೆಚ್ಚಿನ ನಿಯಂತ್ರಣವನ್ನು ಹೊಂದಿರುವುದಿಲ್ಲ. ಅವರು ರೋಮಾಂಚನಕಾರಿ ಎಂದು ಕಂಡುಕೊಳ್ಳುವ ವಿಷಯಗಳಿಗೆ ಆಕರ್ಷಿತನಾಗುತ್ತಾನೆ. ಅದಕ್ಕಾಗಿಯೇ ಹೆಚ್ಚಿನ ಜನರು ಈ ವಯಸ್ಸಿನಲ್ಲಿ ಲವ್ ಮಾಡ್ತಾರೆ. ಆದರೆ ಈ ವಯಸ್ಸಲ್ಲಿ ಲವ್ (Love) ಮಾಡದೇ ಇರೋದೆ ಬೆಸ್ಟ್. ಯಾಕೆ ಅನ್ನೋದನ್ನು ಡೀಟೇಲ್ ಆಗಿ ತಿಳಿದುಕೊಳ್ಳೋಣ ಬನ್ನಿ. 
 

Tap to resize

ಗುರಿ ಸಾಧಿಸೋದು ಕಷ್ಟ
20 ರ ಹರೆಯ ಆಗಷ್ಟೇ ಹರೆಯ ಮುಗಿದು ವಯಸ್ಸಿಗೆ ಬರುವ ಹಂತ, ಅಲ್ಲಿ ಒಬ್ಬ ವ್ಯಕ್ತಿ ತನ್ನದೇ ಆದ ಹೊಸ ಸಾಧ್ಯತೆಗಳನ್ನು ಅನ್ವೇಷಿಸಬಹುದು. ಅವರು ಸವಾಲುಗಳ ವಿರುದ್ಧ ಹೋರಾಡುವ ಮತ್ತು ಕಠಿಣ ಗುರಿಗಳನ್ನು (goal) ಸಾಧಿಸುವ ವಿಶ್ವಾಸ ಹೊಂದಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಪ್ರೇಮ ಸಂಬಂಧಗಳು ಗುರಿ ಸಾಧಿಸಲು ಅಡ್ಡಿ ಉಂಟು ಮಾಡಬಹುದು. ಇದರ ಫಲಿತಾಂಶವು ಜೀವನಪೂರ್ತಿ ಸಮಸ್ಯೆಯನ್ನುಂಟು ಮಾಡುತ್ತೆ. 

ಜವಾಬ್ದಾರಿ ತೆಗೆದುಕೊಳ್ಳಲು ಸಿದ್ಧರಿಲ್ಲ
20ರ ಹರೆಯದಲ್ಲಿ, ಒಬ್ಬ ವ್ಯಕ್ತಿ ಭಾವನಾತ್ಮಕವಾಗಿ ಮತ್ತು ಆರ್ಥಿಕವಾಗಿ (economically) ಬೆಳೆಯುತ್ತಿರುತ್ತಾನೆ. ಅಂತಹ ಪರಿಸ್ಥಿತಿಯಲ್ಲಿ, ಈ ಹಂತದಲ್ಲಿ ಅವರು ಪ್ರೀತಿ, ಪ್ರೇಮ ಎಂದು ಹೋದರೆ ಅದು ತಪ್ಪಾಗುತ್ತೆ. ಯಾಕಂದ್ರೆ ಮೆಚ್ಯೂರಿಟಿ ಇಲ್ಲದ ಪ್ರೀತಿ, ಮತ್ತೆ ಇಬ್ಬರಿಗೂ ಭಾರವಾಗಲು ಆರಂಭವಾಗುತ್ತೆ. 

ಪ್ರೀತಿಯಲ್ಲ ಬರೀ ಆಕರ್ಷಣೆ
20ರ ಹರೆಯದಲ್ಲಿ ಹೆಚ್ಚಾಗಿ ಯುವ ಜನರು ಆಕರ್ಷಣೆಗೆ (attraction) ಒಳಗಾಗೋ ಚಾನ್ಸಸ್ ತುಂಬಾನೆ ಹೆಚ್ಚಾಗಿರುತ್ತೆ. ಅಂತಹ ಪರಿಸ್ಥಿತಿಯಲ್ಲಿ, ಈ ವಯಸ್ಸಿನಲ್ಲಿ ಆಕರ್ಷಣೆಯ ಸಾಧ್ಯತೆ ಹೆಚ್ಚಾಗಿರುತ್ತೆ, ಇದರಿಂದಾಗಿ ಅನೇಕ ಜನರು ತಪ್ಪು ವ್ಯಕ್ತಿಯೊಂದಿಗೆ ಸಂಬಂಧ ಬೆಳೆಸುತ್ತಾರೆ. ಆದ್ದರಿಂದ, ಈ ವಯಸ್ಸಿನಲ್ಲಿ, ಸಿರಿಯಸ್ ರಿಲೇಶನ್ ಶಿಪ್ ಬೇಡವೇ ಬೇಡ ಅನ್ನೋದು. 

ಸಂಬಂಧಗಳು ವಿಷಕಾರಿಯಾಗಲು ಪ್ರಾರಂಭಿಸುತ್ತವೆ
ಸಂಬಂಧದ ಜವಾಬ್ದಾರಿ ಸುಲಭವಲ್ಲ. ಅಂತಹ ಪರಿಸ್ಥಿತಿಯಲ್ಲಿ, ಒಬ್ಬ ವ್ಯಕ್ತಿಯು ಚಿಕ್ಕ ವಯಸ್ಸಿನ ಹುಚ್ಚು ಮನಸ್ಸಿನಿಂದ ಲವ್ ಮಾಡಲು ಆರಂಭಿಸಿದ್ರೆ, ಕೆಲವೊಮ್ಮೆ ವಿಷಯಗಳನ್ನು ನಿರ್ವಹಿಸುವುದು ಅವರಿಗೆ ಕಷ್ಟವಾಗಿ, ಈ ಸಂಬಂಧ ಅನ್ನೋದೇ ವಿಷಕಾರಿಯಾಗಬಹುದು.

ಇಂದಿನ ಬಗ್ಗೆ ಗಮನ ಹರಿಸುವುದು ಕಷ್ಟ
20ರ ಹರೆಯದಲ್ಲಿ, ಒಬ್ಬ ವ್ಯಕ್ತಿ ಮೊದಲ ಬಾರಿಗೆ ಜೀವನದಲ್ಲಿ ಸಾಕಷ್ಟು ಅನುಭವಗಳನ್ನು ಅನುಭವಿಸುತ್ತಾನೆ, ಇದು ಬದುಕಲು ಬಹಳ ಮುಖ್ಯ. ಅಂತಹ ಪರಿಸ್ಥಿತಿಯಲ್ಲಿ, ನೀವು ಪ್ರೀತಿ ಗೀತಿ ಎಂದು ಪ್ರೀತಿಯ ಸುಳಿಯಲ್ಲಿ ಬಿದ್ರೆ, ನಿಮ್ಮ ಪ್ರಸ್ತುತ ಜೀವನದ ಬಗ್ಗೆ ಗಮನ ಹರಿಸೋದು ಕಷ್ಟವಾಗಬಹುದು. 

Latest Videos

click me!