99% ಜನ ತಪ್ಪಾದ ಸಮಯದಲ್ಲಿ ಮದ್ವೆ ಆಗ್ತಾರಂತೆ… ಹಾಗಿದ್ರೆ ಸರಿಯಾದ ಸಮಯ ಯಾವುದು?

Published : Jan 04, 2025, 02:03 PM ISTUpdated : Jan 04, 2025, 02:07 PM IST

ಮದುವೆಯ ಸರಿಯಾದ ವಯಸ್ಸಿನ ಬಗ್ಗೆ ಆಗಾಗ್ಗೆ ಚರ್ಚೆ ನಡೆಯುತ್ತದೆ, ಆದರೆ ರಿಲೇಶನ್’ಶಿಪ್ ಗೆ ಬಂದ ನಂತರ, ನೀವು ಮದುವೆಯಾಗಲು ಸರಿಯಾದ ಸಮಯದ ಬಗ್ಗೆ ಯೋಚನೆ ಮಾಡಿದ್ದೀರಾ?. ಹೆಚ್ಚಿನ ಕಪಲ್ಸ್  ತಪ್ಪಾದ ಸಮಯದಲ್ಲಿ ಮದುವೆಯಾಗುತ್ತಾರೆ, ನಂತರ ಯಾಕೆ ಈಗ ಮದುವೆಯಾದ ಅಂತ ಪಶ್ಚತ್ತಾಪ ಪಡುತ್ತಾರೆ.   

PREV
17
99% ಜನ ತಪ್ಪಾದ ಸಮಯದಲ್ಲಿ ಮದ್ವೆ ಆಗ್ತಾರಂತೆ… ಹಾಗಿದ್ರೆ ಸರಿಯಾದ ಸಮಯ ಯಾವುದು?

ಶುಭ ಮುಹೂರ್ತ ಸಿಕ್ಕಿದ ಕೂಡ್ಲೇ ಮದುವೆ ಮಾಡೋದೆ ಎನ್ನುವ ಕಲ್ಪನೆ ಕೆಲವೊಮ್ಮೆ ಅರೇಂಜ್ ಮ್ಯಾರೇಜ್ ಗಳಲ್ಲಿ  (arranged marriage) ಸರಿಯಾಗಿಯೇ ಕಾರ್ಯ ನಿರ್ವಹಿಸುತ್ತೆ. ಆದರೆ ಲವ್ ಮ್ಯಾರೇಜ್ ಗಳಲ್ಲಿ ಇದು ಸಾಧ್ಯ ಇಲ್ಲ. ಒಂದು ವೇಳೆ ಇದೇ ಶುಭ ಮುಹೂರ್ತ ಅಂತ ಮದುವೆಯಾದ್ರೆ, ಆ ಮದುವೆ ಸಂಬಂಧ ಹೆಚ್ಚು ದಿನ ಉಳಿಯೋದಿಲ್ಲ. ಪ್ರೇಮ ವಿವಾಹದಲ್ಲಿ (love marriage) ಪರಸ್ಪರರ ಒಳ್ಳೆಯದು ಮತ್ತು ಕೆಟ್ಟದ್ದನ್ನು ತಿಳಿದುಕೊಳ್ಳಲು ನಿಮಗೆ ಸಂಪೂರ್ಣ ಅವಕಾಶ ಸಿಕ್ಕಾಗ, ಒಬ್ಬರನ್ನೊಬ್ಬರು ಸರಿಯಾಗಿ ತಿಳಿದುಕೊಳ್ಳದೆ ಮದುವೆಯಾಗೋದು ಬುದ್ಧಿವಂತಿಕೆಯಲ್ಲ. ಆದರೆ ಅವಸರದಲ್ಲಿ, ಕೆಲವರು ಅದರ ಬಗ್ಗೆ ಗಮನ ಹರಿಸುವುದಿಲ್ಲ.

27

ರಿಲೇಶನ್ ಶಿಪ್ ಗೆ (relationship) ಬಂದ ನಂತರ ಮದುವೆಯಾಗಲು ಸರಿಯಾದ ಸಮಯ ಯಾವುದು ಎಂದು ಹೆಚ್ಚಿನ ಜನರಿಗೆ ತಿಳಿದಿರುವುದಿಲ್ಲ. ಈಗ ಮದುವೆಯಾಗುವುದು ಸರಿ ಎಂದು ತೋರುವ ಸಂಬಂಧದ ಹಂತ ಯಾವುದು? ಮದುವೆಯಾಗೋ ವಿಷಯದಲ್ಲಿ ಸುಮಾರು 99% ಜನ ಮಾಡುವಂತಹ ತಪ್ಪು ಯಾವುದು?  ಇಲ್ಲಿ ನಿಮಗೆ ಸಂಬಂಧದ 5 ಹಂತಗಳ ಬಗ್ಗೆ ಹೇಳ್ತೀವಿ. ಇದರಲ್ಲಿ ನಾಲ್ಕನೇ ಹಂತ ಬಂತು ಅಂದ್ರೆ, ಅದುವೇ ಮದುವೆಯಾಗಲು ಸರಿಯಾದ ಸಮಯ ಅನ್ನೋದನ್ನು ಅರ್ಥ ಮಾಡ್ಕೊಳಿ. 
 

37

ಲವ್, ರೋಮ್ಯಾನ್ಸ್  
ಮೊದಲ ಹಂತವೆಂದರೆ ನೀವು ಯಾರನ್ನಾದರೂ ಪ್ರೀತಿಸಿದಾಗ ರೊಮ್ಯಾನ್ಸ್ (romance) ಇರೋದು ಸಾಮಾನ್ಯ. ಜೊತೆಗೆ ನಿಮಗೆ ಅವರೊಂದಿಗೆ ಮಾತನಾಡಲು ಮತ್ತು ಸುತ್ತಾಡಲು ಇಷ್ಟ ಇರುತ್ತೆ. ಈ ಸಮಯದಲ್ಲಿ, ಆ ವ್ಯಕ್ತಿಯು ನಿಮಗೆ ಎಲ್ಲವೂ ಆಗುತ್ತಾನೆ. ನಾನು ಹುಡುಕುತ್ತಿದ್ದ ಪರ್ಫೆಕ್ಟ್ ವ್ಯಕ್ತಿ (perfect person) ಇವರು ಎಂದು ನೀವು ಭಾವಿಸುತ್ತೀರಿ. ಕೆಲವೇ ದಿನಗಳಲ್ಲಿ, ನನಗೆ ಆ ವ್ಯಕ್ತಿ ಎಂದರೆ ಬಿಟ್ಟಿರಲಾರದಷ್ಟು ಇಷ್ಟ ಎಂದು ಅನಿಸೋದಕ್ಕೆ ಶುರುವಾಗುತ್ತೆ. ಆದರೆ ಈ ಹಂತದಲ್ಲಿ ಮದುವೆಯಾಗೋದು ತಪ್ಪು. 

47

ಬದಲಾಯಿಸುವ ಸಮಯ
ನೀವು ಪರಸ್ಪರ ಜೊತೆಯಾಗಗಿ ಸಮಯ ಕಳೆಯುವಾಗ (spending more time)ನಿಮಗೆ ಒಳ್ಳೆಯದು ಮತ್ತು ಕೆಟ್ಟದ್ದು ಏನೆಂದು ತಿಳಿಯುತ್ತೆ. ಆವಾಗ ಅವರು ನಾವು ಅಂದುಕೊಂಡಷ್ಟು ಪರ್ಫೆಕ್ಟ್ ಆಗಿಲ್ಲ ಎಂದು ನೀವು ಭಾವಿಸುತ್ತೀರಿ. ಈ ಸಮಯದಲ್ಲಿ, ಕಪಲ್ಸ್ ಪರಸ್ಪರರನ್ನು ಬದಲಾಯಿಸಲು ಪ್ರಯತ್ನಿಸುತ್ತಾರೆ. ಅವರನ್ನು ತಮ್ಮಂತೆ ಮಾಡಲು ಬಯಸುತ್ತಾರೆ. ಈ ಸಮಯದಲ್ಲಿ ಎದುರಿಸುವ ತೊಂದರೆಗಳಿಂದಾಗಿ, ಕೆಲವು ಜೋಡಿಗಳ ಬ್ರೇಕಪ್ ಆಗುತ್ತೆ.
 

57

ಪರಸ್ಪರ ಅರ್ಥಮಾಡಿಕೊಂಡಾಗ
ಈ ಜಗಳ ಹೋರಾಟದ ಬಳಿಕ, ಕಪಲ್ಸ್ ಪರಸ್ಪರರನ್ನು ಸ್ವೀಕರಿಸುತ್ತಾರೆ ಮತ್ತು ಪರಸ್ಪರ ಬದಲಾಗುತ್ತಾರೆ. ತಮ್ಮ ಕೋಪ, ದುರ್ಬುದ್ಧಿಯನ್ನು ಬದಿಗಿಟ್ಟು, ಅವರು ತಮ್ಮ ಪ್ರೀತಿ ಪಾತ್ರರಿಗಾಗಿ ಉತ್ತಮ ಗುಣದೊಂದಿಗೆ ಮುಂದುವರಿಯಲು ನಿರ್ಧರಿಸುತ್ತಾರೆ. ಅವರು ಒಳ್ಳೆಯ ಮತ್ತು ಕೆಟ್ಟ ಅಭ್ಯಾಸಗಳಿಗೆ ಹೊಂದಿಕೊಳ್ಳಲು ಕಲಿಯುತ್ತಾರೆ, ಇದು ಅವರ ಜೀವನದಲ್ಲಿನ ತೊಂದರೆಗಳನ್ನು ಕಡಿಮೆ ಮಾಡುತ್ತದೆ. ಮತ್ತು, ಪರಸ್ಪರ ಬೆಂಬಲಿಸುವ  (understanding eachother)ವಿಶ್ವಾಸವನ್ನು ಇದು ಸೃಷ್ಟಿಸುತ್ತೆ..

67

ಇದು ಮದುವೆ ಬಗ್ಗೆ ಯೋಚನೆ ಮಾಡುವ ಸಮಯ 
ಸಂಬಂಧದ ನಾಲ್ಕನೇ ಹಂತವೆಂದರೆ ನೀವು ಯಾವಾಗ ಮದುವೆಯಾಗಬೇಕು ಎಂಬ ಬದ್ಧತೆಗಳನ್ನು ಮಾಡುವುದು. 3 ಹಂತಗಳಲ್ಲಿ, ನಿಮ್ಮ ಸಂಗಾತಿಯ ಎಲ್ಲಾ ಒಳ್ಳೆಯ ಮತ್ತು ಕೆಟ್ಟ ಅಭ್ಯಾಸಗಳನ್ನು ನೀವು ನೋಡಿದ್ದೀರಿ. ಈ ಸಮಯದಲ್ಲಿ, ನೀವು ಪ್ರೀತಿ, ಸ್ವಂತಿಕೆ, ಅರ್ಥಮಾಡಿಕೊಳ್ಳೋದು, ಪರಸ್ಪರರ ವೀಕ್ ನೆಸ್, ಸೋಲು, ಗೆಲುವು, ಖುಷಿ, ಸ್ವಾತಂತ್ರ್ಯ ಎಲ್ಲವನ್ನೂ ಹಂಚಿಕೊಂಡು, ಖುಷಿಯಾಗಿ ಎಲ್ಲವನ್ನೂ ಬ್ಯಾಲೆನ್ಸ್ ಮಾಡಿದ್ದೀರಿ. ಹಾಗಾಗಿ ಮದುವೆಯಾಗಲು ಇದು ಸರಿಯಾದ ಸಮಯ.

77

ಕೊನೆಯ ಹಂತ 
ಮದುವೆಯಾದ ನಂತರ, ದಂಪತಿಗಳು ಜೊತೆಯಾಗಿ ಒಂದು ತಂಡವಾಗಿ ಕೆಲಸ ಮಾಡಲು ಪ್ರಾರಂಭಿಸುತ್ತಾರೆ. ಈ ಸಮಯದಲ್ಲಿ, ಅವರೊಂದಿಗೆ ಮಕ್ಕಳಿರುತ್ತಾರೆ ಅಥವಾ ಯಾವುದಾದರೂ ಬ್ಯುಸಿನೆಸ್ ಇರುತ್ತೆ ಅಥವಾ ಬೇರೆ ಯಾವುದಾದರೂ ಯೋಜನೆ ಇರುತ್ತೆ. ಈ ಸಮಯದಲ್ಲಿ ಇಬ್ಬರು ಪರಸ್ಪರ ಒಬ್ಬರಿಗೊಬ್ಬರು ಬೆಂಬಲ ನೀಡಿ, ಜೊತೆಯಾಗಿ ಬೆಳೆಯಲು ಇಷ್ಟಪಡುತ್ತಾರೆ.   

Read more Photos on
click me!

Recommended Stories