ಟ್ರೆಂಡಿಂಗ್’ನಲ್ಲಿದೆ ಮದುವೆಯಾಗಿ ಬೇರೆ ಬೇರೆ ರೂಮಲ್ಲಿ ಮಲಗೋ ಫ್ರೆಂಡ್’ಶಿಪ್ ಮ್ಯಾರೇಜ್

Published : Apr 30, 2025, 12:32 PM ISTUpdated : Apr 30, 2025, 12:50 PM IST

ಚೀನಾದಲ್ಲಿ ಯುವಕರು ಸಾಮಾಜಿಕ ನಿರೀಕ್ಷೆಗಳನ್ನು ವಿರೋಧಿಸಲು ಮತ್ತು ತಮ್ಮ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಲು  ಫ್ರೆಂಡ್’ಶಿಪ್ ಮ್ಯಾರೇಜ್ ಮಾಡಿಕೊಳ್ಳುತ್ತಿದ್ದಾರೆ. ಇದರಲ್ಲಿ, ದಂಪತಿಗಳು ಪ್ರತ್ಯೇಕ ಕೋಣೆಗಳಲ್ಲಿ ಮಲಗಲು ಬಯಸುತ್ತಾರೆ.  

PREV
16
ಟ್ರೆಂಡಿಂಗ್’ನಲ್ಲಿದೆ ಮದುವೆಯಾಗಿ ಬೇರೆ ಬೇರೆ ರೂಮಲ್ಲಿ ಮಲಗೋ ಫ್ರೆಂಡ್’ಶಿಪ್ ಮ್ಯಾರೇಜ್

ಚೀನಾದ ಯುವಕರು ಸಾಮಾಜಿಕ ನಿರೀಕ್ಷೆಗಳನ್ನು ಧಿಕ್ಕರಿಸಿ ತಮ್ಮ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಲು ಫ್ರೆಂಡ್’ಶಿಪ್ ಮ್ಯಾರೇಜ್ (friendship marriage) ಮಾಡಿಕೊಳ್ಳುತ್ತಿದ್ದಾರೆ. ಇದೇನಿದು ಫ್ರೆಂಡ್ ಶಿಪ್ ಮ್ಯಾರೇಜ್ ಅನ್ನೋದನ್ನು ತಿಳ್ಕೋಳ್ತೀರಾ? 
 

26

ಫ್ರೆಂಡ್’ಶಿಪ್ ಮ್ಯಾರೇಜ್ ಅಂದ್ರೆ ಯುವಜನರು ರೋಮ್ಯಾಂಟಿಕ್ ಸಂಗಾತಿಗಳ (romantic partner) ಬದಲಿಗೆ ತಮ್ಮ ಆತ್ಮೀಯ ಸ್ನೇಹಿತರನ್ನು ಮದುವೆಯಾಗುತ್ತಿದ್ದಾರೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.
 

36

ಈ ಫ್ರೆಂಡ್’ಶಿಪ್ ಮ್ಯಾರೇಜ್ ನಲ್ಲಿ ಯಾವುದೇ ರೀತಿಯ ರೊಮ್ಯಾನ್ಸ್ ಆಗಿರಲಿ ಅಥವಾ ಲೈಂಗಿಕ ಆಕರ್ಷಣೆ (sexual desire) ಆಗಲಿ ಇರೋದೆ ಇಲ್ಲ. ಕೇವಲ ಹೆಸರಿಗೆ ಮದುವೆಯಾಗೋದು ಅಷ್ಟೇ. 
 

46

ಕಾನೂನುಬದ್ಧವಾಗಿ ಸಂಗಾತಿಗಳೆಂದು ಗುರುತಿಸಲ್ಪಟ್ಟ ಈ ದಂಪತಿಗಳು ಹೆಚ್ಚಾಗಿ ಒಟ್ಟಿಗೆ ವಾಸಿಸುತ್ತಾರೆ. ಆದರೆ ಪ್ರತ್ಯೇಕ ಮಲಗುವ ಕೋಣೆಗಳನ್ನು ಹೊಂದಿರುತ್ತಾರೆ. ಯಾಕಂದ್ರೆ ಪ್ರಪಂಚದೆದುರು ಮಾತ್ರ ಗಂಡ ಹೆಂಡತಿ. 

56

ಈ ಫ್ರೆಂಡ್’ಶಿಪ್ ಮ್ಯಾರೇಜ್ ಸಂಬಂಧದಲ್ಲಿ ಗಂಡ ಆಗಲಿ, ಹೆಂಡ್ತಿ ಆಗಲಿ ಬಯಸಿದರೆ ಇತರರೊಂದಿಗೆ ಡೇಟಿಂಗ್ ಮಾಡಲು ಹೋಗಬಹುದು. ಅವರು ಮಕ್ಕಳನ್ನು ಹೊಂದಲು ನಿರ್ಧರಿಸಿದರೆ, ದತ್ತು ಅಥವಾ ಕೃತಕ ಗರ್ಭಧಾರಣೆಯನ್ನು ಆಯ್ಕೆ ಮಾಡಿಕೊಳ್ಳಬಹುದು.
 

66

ಈ ಕುರಿತು ಚೀನಾದ ಜನರು ಹೇಳುವಂತೆ "ನನ್ನ ಗಂಡ ಮತ್ತು ನಾನು ಒಟ್ಟಿಗೆ ವಾಸಿಸುವ ರೂಮ್‌ಮೇಟ್‌ಗಳು ಆದರೆ ನಾವು ಕುಟುಂಬವೂ ಹೌದು.  ಜಪಾನ್‌ನಲ್ಲೂ ಇಂತಹ ಫ್ರೆಂಡ್’ಶಿಪ್ ಮ್ಯಾರೇಜ್ ಟ್ರೆಂಡ್ ಇದೆ.
 

Read more Photos on
click me!

Recommended Stories