ಮೆಡಿಕಲ್ ಶಾಪ್‌ನಲ್ಲಿ ಔಷಧಿಗಳನ್ನು ಖರೀದಿಸುವ ಮೊದಲು ಅದರ ಎಕ್ಸ್‌ಪೇರಿ ಡೇಟ್ ಪರಿಶೀಲಿಸುವುದು ಅಗತ್ಯ. ಇದು ಕಂಡೋಮ್‌ಗಳಿಗೂಅನ್ವಯಿಸುತ್ತದೆ ಎಂದರೆ ಆಶ್ಚರ್ಯ ಆಗುತ್ತದೆ ಅಲ್ವಾ?
ಆದರೆ ಇದು ನಿಜ. ಅದನ್ನು ಖರೀದಿಸಿದಗ ಮೊದಲು ದಿನಾಂಕವನ್ನು ಪರಿಶೀಲಿಸಿ. ಅವಧಿ ಮೀರಿದ ಕಾಂಡೋಮ್‌ಗಳನ್ನು ಎಂದಿಗೂ ಬಳಸಬೇಡಿ. ವಾಸ್ತವವಾಗಿ, ಕಾಂಡೋಮ್ ಮೇಲೆ ಇರುವ ಲೂಬ್ರಿಕಂಟ್ ಅವಧಿ ಮುಗಿದಾಗ ಹಾಳಾಗುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಅದನ್ನು ಬಳಸಿದರೆ, ಖಾಸಗಿ ಭಾಗಗಳಳಿಗೆ ತೊಂದರೆಯಾಗುತ್ತದೆ.
ಮುಕ್ತಾಯ ದಿನಾಂಕವನ್ನು ಹೊರತುಪಡಿಸಿ ಅನೇಕ ಕಾರಣಗಳಿಂದ ಕಾಂಡೋಮ್‌ಗಳು ಮೌಲ್ಯ ಕ್ಷೀಣಿಸಲು ಕಾರಣವಾಗುತ್ತದೆ. ಸಾಮಾನ್ಯವಾಗಿ ಪುರುಷರ ಅಭ್ಯಾಸವೆಂದರೆ ಅವರು ತಮ್ಮ ಪರ್ಸ್‌ನಲ್ಲಿ ಕಾಂಡೋಮ್‌ಗಳನ್ನು ಇಟ್ಟುಕೊಳ್ಳುತ್ತಾರೆ. ಆದರೆ ಹಾಗೇ ಮಾಡವುದರಿಂದ ಪರ್ಸ್‌ನಲ್ಲಿನ ಘರ್ಷಣೆಯಿಂದಾಗಿ, ಪ್ಯಾಕೆಟ್‌ನೊಳಗೆ ಇದ್ದರೂ ಅವು ಹಾಳಾಗುತ್ತವೆ.
ತಾಪಮಾನವು ಕಾಂಡೋಮ್‌ಗಳ ಗುಣಮಟ್ಟದ ಮೇಲೆ ಸಹ ಪರಿಣಾಮ ಬೀರುತ್ತದೆ. ಕಾಂಡೋಮ್‌ಗಳನ್ನು ಎಂದಿಗೂ ಬೆಚ್ಚಗಿನ ಸ್ಥಳದಲ್ಲಿ ಇಡಬೇಡಿ. ಹಾಗೇ ಅದನ್ನು ತುಂಬಾ ತಂಪಾದ ಸ್ಥಳದಲ್ಲಿ ಇಟ್ಟರೂ ಕೆಡುತ್ತದೆ.ರೂಮ್ ಟೆಂಪರೆಚರ್‌ನಲ್ಲಿ ಕಾಂಡೋಮ್ ಇರಿಸಿ.
ಕಾಂಡೋಮ್‌ಗಳ ಸೆಲ್ಫ್ ಲೈಫ್ ಬಗ್ಗೆ ಹೇಳುವುದಾದರೆ, ಸಿಂಥೆಟಿಕ್ ವಸ್ತುಗಳಿಂದ ಮಾಡಿದ ಕಾಂಡೋಮ್ ಹೆಚ್ಚಾಗಿ ನಾಲ್ಕರಿಂದ ಐದು ವರ್ಷಗಳವರೆಗೆ ಸುರಕ್ಷಿತವಾಗಿರುತ್ತವೆ. ಇದನ್ನು ಸಾಮಾನ್ಯ ತಾಪಮಾನವಿರುವ ಸ್ಥಳದಲ್ಲಿ ಇರಿಸಿದರೆ ಮಾತ್ರ ಅಷ್ಟು ಸಮಯ ಸೇಫ್ ಆಗಿರುತ್ತವೆ.
ಅದೇ ಸಮಯದಲ್ಲಿ, ನೈಸರ್ಗಿಕ ವಸ್ತುಗಳಿಂದ ತಯಾರಿಸಿದ ಕಾಂಡೋಮ್‌ಗಳಿಗೆ ಹೆಚ್ಚು ಲೈಫ್ ಇಲ್ಲ. ಅವುಗಳನ್ನು ಖರೀದಿಸಿದ ನಂತರಆದಷ್ಟು ಬೇಗ ಬಳಸುವುದು ಬೆಸ್ಟ್.
ಇದಲ್ಲದೆ, ಕಾಂಡೋಮ್ ಖರೀದಿಸುವಾಗ, ಅದರಲ್ಲಿ ವೀರ್ಯನಾಶಕ ರಾಸಾಯನಿಕ (spermicide chemical) ಬಳಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಬೇಕು. ಅದು ಕಾಂಡೋಮ್‌ಗಳ ಜೀವಿತಾವಧಿಯನ್ನು ಕಡಿಮೆ ಮಾಡುತ್ತದೆ.
ಯಾವಾಗಲೂ ಉತ್ತಮ ಗುಣಮಟ್ಟದ ಹಾಗೂ ಬ್ರಾಂಡ್‌ನ ಕಾಂಡೋಮ್‌ಗಳನ್ನು ಮಾತ್ರ ಬಳಸಿ. ಕಳಪೆ ಗುಣಮಟ್ಟದ ಕಾಂಡೋಮ್‌ಗಳು ಸೆಕ್ಸ್ ಸಮಯದಲ್ಲಿ ಹರಿಯುವ ಸಾಧ್ಯತೆ ಹೆಚ್ಚಿರುತ್ತದೆ.