ಮದ್ವೆ ಬಳಿಕ ಕೆಲವರನ್ನು ಖಿನ್ನತೆ ಕಾಡುವುದೇಕೆ?

First Published Nov 17, 2022, 5:55 PM IST

ವಿವಾಹವು ಪ್ರತಿಯೊಬ್ಬ ವ್ಯಕ್ತಿಯ ಜೀವನಕ್ಕೆ ಹೊಸ ತಿರುವನ್ನು ನೀಡುತ್ತದೆ. ಸಾಮಾನ್ಯವಾಗಿ, ಈ ತಿರುವು ತುಂಬಾ ಸುಂದರವಾಗಿರುತ್ತೆ ಮತ್ತು ವ್ಯಕ್ತಿಯು ಮದುವೆ ನಂತರ ಹೆಚ್ಚಾಗಿ ರೊಮ್ಯಾಂಟಿಕ್ ಲೈಫ್ (Romantic Life) ನಡೆಸುತ್ತಾನೆ, ಈ ಸಮಯ, ಉತ್ಸಾಹ ಮತ್ತು ಸಂತೋಷದಿಂದ ಕೂಡಿರುತ್ತೆ.ಆದಾಗ್ಯೂ, ಇದು ಎಲ್ಲರಿಗೂ ಅನ್ವಯಿಸುವುದಿಲ್ಲ. ಮದುವೆಯ ನಂತರ ಹೆಚ್ಚು ಆತಂಕ ಮತ್ತು ಒತ್ತಡ (Stress) ವನ್ನು ಅನುಭವಿಸುವ ಕೆಲವು ಜನರು ಸಹ ಇದ್ದಾರೆ. ಇದನ್ನು ಮದುವೆಯ ನಂತರದ ಖಿನ್ನತೆ ಎಂದು ಕರೆಯಲಾಗುತ್ತದೆ. 

ಮದುವೆ ಅನ್ನೋದು ಮಧುರ ಬಾಂಧವ್ಯ. ಮದುವೆ ಬಳಿಕ ಎಲ್ಲವೂ ಚೆನ್ನಾಗಿರುತ್ತೆ, ಹೊಸ ಮನೆ, ಪರಿವಾರದವರ ಪ್ರೀತಿ, ರೊಮ್ಯಾನ್ಸ್, ಔಟಿಂಗ್ ವಾವ್ ಎಲ್ಲವೂ ಮ್ಯಾಜಿಕಲ್ ಅನುಭವ ನೀಡುತ್ತೆ. ಇದನ್ನೆ ಅಲ್ವಾ ಹೊಸದಾಗಿ ಮದ್ವೆ ಆಗಿರೋರು ನಿಮಗೆ ಹೇಳಿರೋದು. ಆದರೆ ಎಲ್ಲರ ಜೀವನ ಒಂದೇ ತರ ಇರಲ್ಲ, ಅಂದರೆ ಎಲ್ಲರೂ ಖುಷಿಯಾಗಿರೋಲ್ಲ. ಕೆಲವರಿಗೆ ಪೋಸ್ಟ್ ಮ್ಯಾರೇಜ್ ಡಿಪ್ರೆಶನ್ (post marriage depression) ಕಾಡುತ್ತೆ. ಹೌದು, ಮದುವೆ ನಂತರದ ಖಿನ್ನತೆಯ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲದ ಕಾರಣ, ಅವರು ಅದನ್ನು ನಿಭಾಯಿಸುವ ಕ್ರಮಗಳನ್ನು ಸಹ ತಿಳಿದಿರೋದಿಲ್ಲ. ಮದುವೆಯ ನಂತರ ನೀವು ನಿಮ್ಮಲ್ಲಿ ಬದಲಾವಣೆಯನ್ನು ಅನುಭವಿಸುತ್ತಿರಬಹುದು, ಲೈಫ್ ಅಲ್ಲಿ ಏನು ಆಗ್ತಿದೆ ಅನ್ನೋದು ನಿಮಗೆ ಅರ್ಥವಾಗಲ್ಲ. ಈ ಸಮಸ್ಯೆ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಲೇಬೇಕು… ಅದರ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಯೋಣ.

ಮದುವೆಯ ನಂತರದ ಖಿನ್ನತೆ ಎಂದರೇನು?

ಮದುವೆಯ ನಂತರದ ಖಿನ್ನತೆಯು ಒಂದು ರೀತಿಯ ಖಿನ್ನತೆಯಾಗಿದೆ. ಇದರಲ್ಲಿ ವ್ಯಕ್ತಿಯು ವಿವಾಹದ ನಂತರ ತುಂಬಾ ಒತ್ತಡ (stress) ಮತ್ತು ಆತಂಕವನ್ನು ಅನುಭವಿಸಬಹುದು. ಸಾಮಾನ್ಯವಾಗಿ, ಜನರು ಮದುವೆಯ ನಂತರದ ಖಿನ್ನತೆಯ ಬಗ್ಗೆ ಸಾಕಷ್ಟು ತಿಳಿದಿರೋದಿಲ್ಲ, ಆದ್ದರಿಂದ ಅವರು ಅದರೊಂದಿಗೆ ತುಂಬಾ ಸಮಯದವರೆಗೆ ಒದ್ದಾಡುತ್ತಿರುತ್ತಾರೆ. 

ವಿವಾಹದ ನಂತರದ ಖಿನ್ನತೆಯು ಪುರುಷ ಅಥವಾ ಮಹಿಳೆಗೆ ಸಂಭವಿಸಬಹುದು. ಖಿನ್ನತೆಯು ವ್ಯಕ್ತಿಯ ಮಾನಸಿಕ ಆರೋಗ್ಯ (mental health) ಮತ್ತು ದೈಹಿಕ ಆರೋಗ್ಯ ಎರಡರ ಮೇಲೂ ಪರಿಣಾಮ ಬೀರಬಹುದು. ಆದ್ದರಿಂದ, ಅದನ್ನು ಸಾಧ್ಯವಾದಷ್ಟು ಬೇಗ ಗುರುತಿಸಬೇಕು ಮತ್ತು ಅದನ್ನು ನಿಭಾಯಿಸಲು ಕ್ರಮಗಳನ್ನು ಕಂಡುಹಿಡಿಯಬೇಕು.

ಮದುವೆಯ ನಂತರದ ಖಿನ್ನತೆಯ ಲಕ್ಷಣಗಳು ಯಾವುವು?

ಮದುವೆಯ ನಂತರದ ಖಿನ್ನತೆಯೊಂದಿಗೆ ಹೋರಾಡುವ ಜನರು ತಮ್ಮ ಸ್ವಭಾವ, ಅಭ್ಯಾಸಗಳು ಮತ್ತು ನಡವಳಿಕೆಯಲ್ಲಿ ಅನೇಕ ಬದಲಾವಣೆಗಳನ್ನು ಅನುಭವಿಸುತ್ತಾರೆ, ಅವುಗಳೆಂದರೆ-
 • ಅವರು ಯಾವಾಗಲೂ ಖಿನ್ನತೆಗೆ ಒಳಗಾಗಬಹುದು.
 • ಅವರು ತಮ್ಮ ಸಂಗಾತಿ ಅಥವಾ ತಮ್ಮ ಆಪ್ತರ ಬಗ್ಗೆ ಅಸೂಯೆ ಪಡಬಹುದು. 
• ಅಂತಹ ಜನರು ಆಗಾಗ್ಗೆ ತಮ್ಮ ಸಂಗಾತಿಯ ಮೇಲೆ ಕೋಪಗೊಳ್ಳುತ್ತಾರೆ.

 • ಅವರು ಖಿನ್ನತೆಯನ್ನು ಹೊಂದಿರುವಾಗ ಅವರಿಗೆ ಈಟಿಂಗ್ ಡಿಸಾರ್ಡರ್ (Eating Disorder) ಸಹ ಕಾಡಬಹುದು, ಅಥವಾ ಹಸಿವು ಆಗದೇ ಇರಬಹುದು ಅಥವಾ ಆಹಾರದಲ್ಲಿ ನಿರಾಸಕ್ತಿ ಕೂಡ ಉಂಟಾಗಬಹುದು.
 • ಖಿನ್ನತೆ ಒಬ್ಬ ವ್ಯಕ್ತಿಯು ತಲೆನೋವು (headache) ಅಥವಾ ತಲೆತಿರುಗುವಿಕೆ ಇತ್ಯಾದಿಗಳನ್ನು ಅನುಭವಿಸುವಂತೆ ಮಾಡಬಹುದು.

ಮದುವೆಯ ನಂತರದ ಖಿನ್ನತೆಯು ಈ ಜನರ ಮೇಲೆ ಪರಿಣಾಮ ಬೀರಬಹುದು

ಮದುವೆಯ ನಂತರದ ಖಿನ್ನತೆಯು ಪ್ರತಿ ದಂಪತಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇಲ್ಲ. ಆದರೆ ಅಪರೂಪದ ಕೆಲವು ಸಂದರ್ಭಗಳಲ್ಲಿ, ಕೆಲವು ವ್ಯಕ್ತಿಗಳು ಮದುವೆಯ ನಂತರದ ಖಿನ್ನತೆ ಅನುಭವಿಸಬಹುದು. ಯಾವ ವ್ಯಕ್ತಿಗಳು ಈ ಸಮಸ್ಯೆ ಅನುಭವಿಸುವ ಸಾಧ್ಯತೆ ಇದೆ ಆ ಬಗ್ಗೆ ತಿಳಿಯೋಣ: 
• ತಮ್ಮ ಮದುವೆಯ ಬಗ್ಗೆ ಅಸಂತುಷ್ಟರಾಗಿರುವ ಜನರು. ಅಥವಾ ಒತ್ತಾಯದಿಂದ ಮದುವೆಯಾಗಿರೋ ಜನರು.
• ಯಾರ ಸಂಬಂಧ ಉತ್ತಮವಾಗಿಲ್ಲವೋ ಅಂತಹ ದಂಪತಿಗಳು.
• ಹೊಸ ಕುಟುಂಬ ಮತ್ತು ಹೊಸ ಪರಿಸರದ ಹೆಚ್ಚುವರಿ ಒತ್ತಡವು ನಿಮ್ಮನ್ನು ಮತ್ತಷ್ಟು ಖಿನ್ನತೆಗೆ ಒಳಗಾಗುವಂತೆ ಮಾಡಬಹುದು. . 

• ತಮ್ಮ ಸಂತೋಷವನ್ನು ನಿರ್ಲಕ್ಷಿಸುವ ಮೂಲಕ ಇನ್ನೊಬ್ಬ ವ್ಯಕ್ತಿಯನ್ನು ಮದುವೆಯಾಗಿರುವ ಜನ. 
• ವಿವಾಹದ ನಂತರ, ಒಬ್ಬ ವ್ಯಕ್ತಿಯು ತನ್ನ ಪ್ರೀತಿಪಾತ್ರರಿಂದ ದೂರವಿರುವುದರಿಂದ ಖಿನ್ನತೆಗೆ ಒಳಗಾಗಬಹುದು. 
• ವಿವಾಹದಲ್ಲಿ ದೈಹಿಕ ಅಥವಾ ಮಾನಸಿಕ ಕಿರುಕುಳವಿದ್ದರೂ ಸಹ ಒಬ್ಬ ವ್ಯಕ್ತಿಯು ಖಿನ್ನತೆಗೆ ಒಳಗಾಗಬಹುದು.

ಮದುವೆಯ ನಂತರದ ಖಿನ್ನತೆಯನ್ನು ನಿಭಾಯಿಸುವ ವಿಧಾನಗಳು

ಮದುವೆಯ ನಂತರದ ಖಿನ್ನತೆಯು ಸರಿಯಾದ ಗಮನದ ಅಗತ್ಯವಿರುವ ಗಂಭೀರ ಸಮಸ್ಯೆಯಾಗಿದೆ. ಮದುವೆಯ ನಂತರದ ಖಿನ್ನತೆಯನ್ನು ಎದುರಿಸಲು ಸಹಾಯ ಮಾಡುವ ಅನೇಕ ಸುಲಭ ಪರಿಹಾರಗಳಿವೆ. ಅವುಗಳ ಬಗ್ಗೆ ತಿಳಿದುಕೊಳ್ಳಲು ನೀವು ಮುಂದೆ ಓದ ಬೇಕು.
 

• ಅತಿಯಾದ ಒತ್ತಡವನ್ನು ನಿವಾರಿಸಲು ನಿಮಗೆ ವಿಶ್ರಾಂತಿ ಬೇಕು. ಅದಕ್ಕಾಗಿ ನಿಮ್ಮ ನೆಚ್ಚಿನ ಕೆಲಸ ಮಾಡಿ. 
• ವಿವಾಹ ಸಲಹೆಗಾರರು ಅಥವಾ ವೈದ್ಯರ ಸಹಾಯ ಪಡೆಯಿರಿ.
• ಸಂಗಾತಿಯೊಂದಿಗೆ ಮಾತನಾಡಿ. ಒತ್ತಡದ ಕಾರಣಗಳು (reasons for stress) ಮತ್ತು ತೊಂದರೆಗಳನ್ನು ಅವರೊಂದಿಗೆ ಹಂಚಿಕೊಳ್ಳಲು ಪ್ರಯತ್ನಿಸಿ. 
• ಖಿನ್ನತೆಯನ್ನು ತಪ್ಪಿಸಲು ಮೈಂಡ್ ಫುಲ್ ನೆಸ್ ಧ್ಯಾನ ಅಭ್ಯಾಸ ಮಾಡಬಹುದು.

• ಖಿನ್ನತೆಯ ಕಾರಣ ವಿವಾಹದ ನಂತರದ ಕಿರುಕುಳವಾಗಿದ್ದರೆ, ಆಗ ನೀವು ಕಾನೂನು ಸಹಾಯವನ್ನೂ ತೆಗೆದುಕೊಳ್ಳಬಹುದು. ಕಾನೂನು ಸಲಹೆಗಾರನು ನಿಮ್ಮನ್ನು ಈ ಅಸಂತುಷ್ಟ ವಿವಾಹದಿಂದ ಹೊರತರಲು ಮತ್ತು ಹೆಚ್ಚು ಸಂತೋಷವಾಗಿರಲು ಕೆಲವು ಮಾರ್ಗಗಳನ್ನು ಸೂಚಿಸಬಹುದು. 

• ಹೆಚ್ಚಿನ ಖಿನ್ನತೆ ಅನುಭವಿಸುತ್ತಿದ್ದರೆ, ನೀವು ನಿಮಗೆ ಅತ್ಯಂತ ನಿಕಟವಾಗಿರುವ ಯಾರೊಂದಿಗಾದರೂ ಮಾತನಾಡಬಹುದು ಮತ್ತು ಸಮಸ್ಯೆಗೆ ಪರಿಹಾರವನ್ನು ಕಂಡುಹಿಡಿಯಲು ಪ್ರಯತ್ನಿಸಬಹುದು. ಆದಾಗ್ಯೂ, ನಿಮ್ಮ ಆಪ್ತರು ನಿಮ್ಮ ವಿಷಯವನ್ನು ಬೇರೆಲ್ಲೂ ಬಹಿರಂಗ ಮಾಡೋದಿಲ್ಲ ಅನ್ನೋದನ್ನು ಖಚಿತಪಡಿಸಿ.
 

click me!