ಮಕ್ಕಳನ್ನು ಬೆಳೆಸುವುದು ಬಹಳ ಜವಾಬ್ದಾರಿಯುತ ಕೆಲಸ. ಪ್ರತಿಯೊಬ್ಬ ಪೋಷಕರು ತಮ್ಮ ಮಗು ಯಶಸ್ವಿ ವ್ಯಕ್ತಿಯಾಗಬೇಕೆಂದು, ಸಂತೋಷವಾಗಿರಬೇಕೆಂದು ಮತ್ತು ಸ್ವಾವಲಂಬಿಯಾಗಬೇಕೆಂದು ಬಯಸುತ್ತಾರೆ. ಆದರೆ ಕೆಲವೊಮ್ಮೆ ನಮ್ಮ ಸಣ್ಣ ತಪ್ಪುಗಳೇ ಮಕ್ಕಳ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು.
26
ಈಗಲೂ ಕಾಲ ಮಿಂಚಿಲ್ಲ
ಹಾಗಾದ್ರೆ ನಮ್ಮ ಮಗುವಿನ ಭವಿಷ್ಯವನ್ನು ಹಾಳುಮಾಡುವಂತಹ ಯಾವ ತಪ್ಪುಗಳನ್ನು ನಾವು ಮಾಡುತ್ತಿದ್ದೇವೆ ಎಂದು ನೀವು ಯೋಚಿಸುತ್ತಿದ್ದೀರಾ?, ಒಂದು ವೇಳೆ ನೀವು ಅದೇ ತಪ್ಪು ಮಾಡುತ್ತಿದ್ದರೆ ಈಗಲೂ ಕಾಲ ಮಿಂಚಿಲ್ಲ, ನೀವದನ್ನು ಸರಿಪಡಿಸಿಕೊಳ್ಳುವ ಮೂಲಕ ನಿಮ್ಮ ಮಕ್ಕಳ ಜೀವನವನ್ನು ಅದ್ಭುತವಾಗಿರಿಸಬಹುದು.
36
ಕಾರಣವಿಲ್ಲದೆ ಮಕ್ಕಳನ್ನ ತುಂಬಾ ಬೈಯೋದು, ಒತ್ತಡ ಹೇರೋದು
ಆಗಾಗ್ಗೆ ಪೋಷಕರು ತಮ್ಮ ಮಕ್ಕಳಿಗೆ ಕಟ್ಟುನಿಟ್ಟಾಗಿಡುವ ಮೂಲಕ ಸರಿಯಾದ ಮಾರ್ಗವನ್ನು ತೋರಿಸಲು ಬಯಸುತ್ತಾರೆ. ಆದರೆ ಅವರನ್ನು ಹೆಚ್ಚು ಬೈಯುವುದು ಮತ್ತು ಒತ್ತಡ ಹೇರುವುದು ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರಿಂದಾಗಿ ಅವರು ಭಯ ಮತ್ತು ಒತ್ತಡದಲ್ಲಿ ಬದುಕುತ್ತಾರೆ. ತಮ್ಮನ್ನು ತಾವು ವೀಕ್ ಎಂದು ಪರಿಗಣಿಸಲು ಪ್ರಾರಂಭಿಸುತ್ತಾರೆ. ಅದೇ ಪ್ರೀತಿ ಮತ್ತು ತಿಳುವಳಿಕೆಯೊಂದಿಗೆ ವಿವರಿಸಿದಾಗ ಮಕ್ಕಳು ಹೆಚ್ಚು ಆತ್ಮವಿಶ್ವಾಸದಲ್ಲಿ ಬೆಳೆಯುತ್ತಾರೆ.
46
ಮಕ್ಕಳನ್ನ ನಿಯಂತ್ರಿಸಬೇಡಿ
ಮಕ್ಕಳು ಹೊಸ ಪ್ರಪಂಚವನ್ನು ಅರ್ಥಮಾಡಿಕೊಳ್ಳಲು ಮತ್ತು ಹೊಸ ವಿಷಯಗಳನ್ನು ಕಲಿಯಲು ಬಯಸುತ್ತಾರೆ. ಆದರೆ ಪೋಷಕರು ಎಲ್ಲವನ್ನೂ ನಿಯಂತ್ರಿಸಲು ಹೋದಾಗ ಮಕ್ಕಳು ಡಿಪೆಂಡ್ ಆಗ್ತಾರೆ. ಅವರಿಗೆ ಸೀಮಿತ ಸ್ವಾತಂತ್ರ್ಯವನ್ನು ನೀಡುವುದು ಸಹ ಮುಖ್ಯ, ಇದರಿಂದ ಅವರು ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಇದು ಅವರ ಚಿಂತನೆ ಮತ್ತು ತಿಳುವಳಿಕೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
56
ಮಕ್ಕಳ ಭಾವನೆ ಅರ್ಥಮಾಡಿಕೊಳ್ಳುವಲ್ಲಿ ಫೆಲ್ಯೂರ್
ಪ್ರತಿಯೊಂದು ಮಗುವೂ ತನ್ನದೇ ಆದ ಭಾವನೆಯನ್ನ ಹೊಂದಿರುತ್ತದೆ. ಅದನ್ನು ಅರ್ಥಮಾಡಿಕೊಳ್ಳಬೇಕು. ಪೋಷಕರು ಅವರ ಭಾವನೆಗಳನ್ನು ನಿರ್ಲಕ್ಷಿಸಿದರೆ, ಮಕ್ಕಳು ಒಳಗಿನಿಂದಲೇ ಕಮರಿ ಹೋಗುತ್ತಾರೆ. ಮಕ್ಕಳನ್ನು ಎಚ್ಚರಿಕೆಯಿಂದ ಆಲಿಸುವುದು ಮತ್ತು ಅವರ ಭಾವನೆಗಳಿಗೆ ಪ್ರಾಮುಖ್ಯತೆ ನೀಡುವುದರಿಂದ ಸಂಬಂಧವು ಬಲಗೊಳ್ಳುತ್ತದೆ. ಇದು ಮಗುವನ್ನು ಮಾನಸಿಕವಾಗಿ ಆರೋಗ್ಯವಾಗಿಡುತ್ತದೆ.
66
ಮಕ್ಕಳನ್ನು ಇತರರೊಂದಿಗೆ ಹೋಲಿಸುವುದು
ಇದನ್ನಂತೂ ಪೋಷಕರು ಮಾಡ್ಲೇಬಾರ್ದು. ಆದರೆ ಆಗಾಗ ಪೋಷಕರು ತಮ್ಮ ಮಕ್ಕಳನ್ನು ಇತರ ಮಕ್ಕಳೊಂದಿಗೆ ಹೋಲಿಸಲು ಪ್ರಾರಂಭಿಸುತ್ತಾರೆ. ಇದು ಅವರ ಮಕ್ಕಳು ಯಾವುದೇ ಕೆಲಸವನ್ನಾಗಲಿ ಚೆನ್ನಾಗಿ ಮಾಡದಂತೆ ಮಾಡುತ್ತದೆ. ಅವನ ಆತ್ಮಕ್ಕೆ ನೋವುಂಟು ಮಾಡುತ್ತದೆ. ಕಂಪೇರ್ ಮಾಡಿದಷ್ಟು ಮಕ್ಕಳು ಕೀಳರಿಮೆ ಅನುಭವಿಸಲು ಪ್ರಾರಂಭಿಸುತ್ತಾರೆ ಮತ್ತು ಅವರ ಆತ್ಮವಿಶ್ವಾಸ ಕಡಿಮೆಯಾಗುತ್ತದೆ. ಪ್ರತಿ ಮಗುವೂ ವಿಭಿನ್ನವಾಗಿರುತ್ತದೆ, ಅವನ ಗುರುತು ಮತ್ತು ಸಾಮರ್ಥ್ಯವನ್ನು ಗುರುತಿಸುವುದು ಹೆಚ್ಚು ಮುಖ್ಯ.