ಪ್ರವಾಸಿಗರು ಅತಿಹೆಚ್ಚು ಭೇಟಿ ನೀಡಿದ ಟಾಪ್-10 ದೇಶಗಳಿವು..! ಈ ಲಿಸ್ಟ್‌ನಲ್ಲಿದೆಯಾ ಭಾರತ?

Published : Oct 24, 2026, 06:57 PM IST

ಪ್ರತಿ ವರ್ಷ ವಿವಿಧ ದೇಶಗಳ ಲಕ್ಷಾಂತರ ಪ್ರವಾಸಿಗಳು ಬೇರೆ ಬೇರೆ ದೇಶಗಳ ಕಲೆ, ಸಂಸ್ಕೃತಿ, ಪ್ರವಾಸಿ ತಾಣಗಳನ್ನು ವೀಕ್ಷಿಸಲು ಭೇಟಿ ನೀಡುತ್ತಾರೆ. ಹೀಗಾಗಿ ಪ್ರವಾಸೋದ್ಯಮವೂ ನಿರಂತರವಾಗಿ ಬೆಳೆಯುತ್ತಿದೆ. ಬನ್ನಿ ನಾವಿಂದು 2024ರಲ್ಲಿ ಪ್ರವಾಸಿಗರು ಅತಿಹೆಚ್ಚು ಭೇಟಿ ನೀಡಿದ ಟಾಪ್-10 ದೇಶಗಳು ಯಾವುವು ನೋಡೋಣ.

PREV
16
1. ಫ್ರಾನ್ಸ್:

ಗ್ಲೋಬಲ್ ಟೂರಿಸಂ ಏಜೆನ್ಸಿ ವರದಿಯ ಪ್ರಕಾರ, 2024ರಲ್ಲಿ ಸುಮಾರು 102 ಮಿಲಿಯನ್ ಮಂದಿ ಫ್ರಾನ್ಸ್‌ಗೆ ಭೇಟಿ ನೀಡಿದ್ದಾರೆ. ಐಫೆಲ್ ಟವರ್, ಲೌರೆನ್ಸ್‌ ಮ್ಯೂಸಿಯಂ ಸೇರಿದಂತೆ ಹಲವು ಪ್ರವಾಸಿ ಸ್ಥಳಗಳು ಫ್ರಾನ್ಸ್‌ನಲ್ಲಿವೆ.

26
2. ಸ್ಪೇನ್‌:

2024ರಲ್ಲಿ ಅತಿಹೆಚ್ಚು ಪ್ರವಾಸಿಗರು ಭೇಟಿ ನೀಡಿದ ಎರಡನೇ ದೇಶವೆಂದರೆ ಅದು ಸ್ಪೇನ್. ಸ್ಪೇನ್‌ಗೆ ಸುಮಾರು 93.8 ಮಿಲಿಯನ್ ಪ್ರವಾಸಿಗರು ಭೇಟಿ ನೀಡಿದ್ದಾರೆ. ಮೆಡಿಟರೇನಿಯನ್ ಸಮುದ್ರ ತೀರಗಳು, ಬಾರ್ಸಿಲೋನಾ, ಮ್ಯಾಡ್ರಿಡ್‌ ಪ್ರವಾಸಿಗರನ್ನು ಸ್ಪೇನ್‌ಗೆ ಕೈಬೀಸಿ ಕರೆಯುವಂತೆ ಮಾಡಿವೆ.

36
3. ಅಮೆರಿಕ ಸಂಯುಕ್ತ ಸಂಸ್ಥಾನ:

ಇನ್ನು 2024ರಲ್ಲಿ ಅತಿಹೆಚ್ಚು ಪ್ರವಾಸಿಗರು ಭೇಟಿ ನೀಡಿದ ಮೂರನೇ ದೇಶವೆಂದರೇ ಅದು ಯುಎಸ್‌ಎ. ಈ ದೇಶಕ್ಕೆ ಸುಮಾರು 73.4 ಮಿಲಿಯನ್ ಪ್ರವಾಸಿಗರು ಭೇಟಿ ನೀಡಿದ್ದಾರೆ. ನ್ಯೂಯಾರ್ಕ್ ಸಿಟಿಯಿಂದ ಹಿಡಿದು ಹಲವು ನ್ಯಾಷನಲ್ ಪಾರ್ಕ್‌ಗಳು ಪ್ರವಾಸಿಗರಿಗೆ ಬೇರೆಯದ್ದೇ ಲೋಕಕ್ಕೆ ಕರೆದೊಯ್ಯುವಂತೆ ಮಾಡುತ್ತವೆ.

46
4. ಟರ್ಕಿ:

ಯೂರೋಪ್‌ನ ಟರ್ಕಿ ದೇಶಕ್ಕೆ ಸುಮಾರು 60.6 ಮಿಲಿಯನ್ ಮಂದಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ಟರ್ಕಿ ದೇಶವು ಯೂರೋಪ್ ಹಾಗೂ ಏಷ್ಯಾಗೆ ಸಂಪರ್ಕ ಕೊಂಡಿಯಾಗಿದೆ. ಇಲ್ಲಿನ ಪಾರಂಪರಿಕ ತಾಣಗಳನ್ನು ವೀಕ್ಷಿಸಲು ಲಕ್ಷಾಂತರ ಪ್ರವಾಸಿಗರು ಟರ್ಕಿ ದೇಶಕ್ಕೆ ಭೇಟಿ ನೀಡುತ್ತಾರೆ.

56
5. ಇಟಲಿ:

ಜಗತ್ತಿನ ಪ್ರವಾಸಿಗರನ್ನು ಕೈಬೀಸಿ ಕರೆಯುವ ಮತ್ತೊಂದು ದೇಶವೆಂದರೇ ಅದು ಇಟಲಿ. 2024ರಲ್ಲಿ ಈ ದೇಶಕ್ಕೆ 57.7 ಮಿಲಿಯನ್ ಮಂದಿ ಭೇಟಿ ನೀಡಿದ್ದಾರೆ. ಇಲ್ಲಿನ ಇತಿಹಾಸ, ಕಲೆ, ಸಂಸ್ಕೃತಿ, ಆಹಾರ ಪದ್ದತಿ ಪ್ರವಾಸಿಗರ ಪಾಲಿಗೆ ಅಚ್ಚುಮೆಚ್ಚಾಗಿದೆ. ಈ ಮೂಲಕ ಅತಿಹೆಚ್ಚು ಮಂದಿ ಭೇಟಿ ನೀಡಿದ ದೇಶಗಳ ಪಟ್ಟಿಯಲ್ಲಿ ಇಟಲಿ 5ನೇ ಸ್ಥಾನ ಪಡೆದುಕೊಂಡಿದೆ.

66
6. ಟಾಪ್ 10 ಪಟ್ಟಿಯಲ್ಲಿ ಭಾರತವಿಲ್ಲ:

ಇನ್ನುಳಿದಂತೆ ಆರನೇ ಸ್ಥಾನದಲ್ಲಿ ಮೆಕ್ಸಿಕೋ, ಏಳನೇ ಸ್ಥಾನದಲ್ಲಿ ಇಂಗ್ಲೆಂಡ್, ಎಂಟನೇ ಸ್ಥಾನದಲ್ಲಿ ಜರ್ಮನಿ, ಒಂಬತ್ತನೇ ಸ್ಥಾನದಲ್ಲಿ ಜಪಾನ್ ಹಾಗೂ 10ನೇ ಸ್ಥಾನದಲ್ಲಿ ಗ್ರೀಸ್‌ ದೇಶಗಳು ಸ್ಥಾನ ಪಡೆದಿವೆ. ಭಾರತಕ್ಕೂ ಪ್ರತಿವರ್ಷ ಲಕ್ಷಾಂತರ ಮಂದಿ ಭೇಟಿ ನೀಡುತ್ತಾರೆಯಾದರೂ, ಟಾಪ್ 10 ಪಟ್ಟಿಯಲ್ಲಿ ಭಾರತ ಸ್ಥಾನ ಪಡೆಯಲು ವಿಫಲವಾಗಿದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories