ಮದುವೆಯಾದ ಬಳಿಕ ಮೊದಲ ರಾತ್ರಿಯ ಸಮಯದಲ್ಲಿ ವಧುವಾಗಿ ನೀವು ಮಾಡಬಹುದಾದ ಮೊದಲ ಕೆಲಸವೆಂದರೆ ಶಾಂತವಾಗಿರಿ. ಮದುವೆಯ ರಾತ್ರಿಯಲ್ಲಿ ನಿಮ್ಮ ಮೊದಲ ಬಾರಿಯ ಲೈಂಗಿಕ ಆತಂಕಗಳನ್ನು (sexual anxiety) ನಿರ್ವಹಿಸಲು ನಿಮಗೆ ಸಹಾಯ ಮಾಡುವ ಈ ಕೆಳಗಿನ ಸಲಹೆಗಳನ್ನು ಓದಿ.
ಇದು ಒಂದು ವಿಭಿನ್ನ ಅನುಭವ
ಇದೊಂದು ವಿಚಿತ್ರ ಅನುಭವ. ಅಲ್ಲಲ್ಲಿ ಸಾಕಷ್ಟು ಗಡಿಬಿಡಿ, ನೋವು, ವಿಚಿತ್ರತೆ ಇತ್ಯಾದಿಗಳು ಇರುತ್ತವೆ, ಆದರೆ ಚಿಂತಿಸಬೇಡಿ, ಇದು ಎಲ್ಲರಿಗೂ ಸಂಭವಿಸುತ್ತದೆ. ನೀವು ಮಾಡಬೇಕಾಗಿರುವುದು ವಿಶ್ರಾಂತಿ ಮತ್ತು ಆರಾಮವಾಗಿ ಪ್ರತಿಸ್ಪಂದಿಸುವುದು.
ಸಂವಹನ (talk with your partner)
ಲೈಂಗಿಕತೆಯ ಬಗ್ಗೆ ಮಾತನಾಡಲು ನೀವು ಎಷ್ಟೇ ನಾಚಿಕೆಪಡುತ್ತಿದ್ದರೂ, ನಿಮ್ಮ ಆಲೋಚನೆಗಳು ಮತ್ತು ಕಾಳಜಿಗಳನ್ನು ಸಂಗಾತಿಯೊಂದಿಗೆ ಮಾತನಾಡಿ, ನಿಮ್ಮ ಭಾವನೆಗಳನ್ನು ಶೇರ್ ಮಾಡಿ. ಒಬ್ಬರ ಜೊತೆ ಇನ್ನೊಬ್ಬರು ಮನಸ್ಸು ಬಿಚ್ಚಿ ಮಾತನಾಡಿದರೆ ಆತಂಕ ಕಡಿಮೆಯಾಗುತ್ತದೆ. ಅರ್ಥ ಮಾಡಿಕೊಳ್ಳಲು, ಬೇಕು ಬೇಡಗಳನ್ನು ತಿಳಿದುಕೊಳ್ಳಲು ಸಹಾಯಕವಾಗಿದೆ.
ಒಂದು ದಿನ ಕಾಯಿರಿ
ಮದುವೆಯ ರಾತ್ರಿಯೇ ಸೆಕ್ಸ್ ನಡೆಸುವುದು ಬೇಡ ಎಂದು ನಿಮಗೆ ಅನಿಸಿದರೆ, ಸಂಗಾತಿಯೊಂದಿಗೆ ಅದರ ಬಗ್ಗೆ ಮಾತನಾಡಿ ಮತ್ತು ಮೊದಲು ಒಂದೆರಡು ದಿನ ಕಾಯುವಂತೆ ಅವರಿಗೆ ತಿಳಿಸಿ. ಇದು ನಿಮ್ಮಿಬ್ಬರ ನಡುವಿನ ಬಂಧವನ್ನು ಹೆಚ್ಚಿಸುತ್ತದೆ ಮತ್ತು ಕೆಲವು ಉತ್ತಮ, ಬಹುನಿರೀಕ್ಷಿತ ಲೈಂಗಿಕತೆಗೆ ನಿಮ್ಮನ್ನು ಸಿದ್ಧಗೊಳಿಸುತ್ತದೆ.
ತಾಳ್ಮೆ (patience)
ಮೊದಲ ಬಾರಿ ಸೆಕ್ಸ್ ನಡೆಸಿದಾಗ ಸಾಕಷ್ಟು ಅತೃಪ್ತಿ ಮತ್ತು ನಿರಾಶೆ ಇರುತ್ತದೆ. ಆದರೆ ನಿಮ್ಮ ಲೈಂಗಿಕ ಚಲನೆಗಳನ್ನು ಪರಿಪೂರ್ಣಗೊಳಿಸಲು ಅಭ್ಯಾಸ ಮತ್ತು ಸಮಯ ತೆಗೆದುಕೊಳ್ಳುತ್ತದೆ. ಸಮಯದೊಂದಿಗೆ, ನೀವು ಬಯಸಿದ ಸಂತೋಷವನ್ನು ಸಾಧಿಸಲು ಸಾಧ್ಯ.
ವರ್ಜಿನಿಟಿ (virginity)
ಕನ್ಯತ್ವದ ಬಗ್ಗೆ ಹೆಚ್ಚು ಯೋಚಿಸಬೇಡಿ ಅಥವಾ ಕೇಂದ್ರೀಕರಿಸಬೇಡಿ. ಇದು ನಿಮ್ಮನ್ನು ಇನ್ನಷ್ಟು ಆತಂಕಗೊಳಿಸುತ್ತದೆ, ಮತ್ತು ನಿಮ್ಮ ಮತ್ತು ಸಂಗಾತಿಯ ನಡುವಿನ ಲೈಂಗಿಕ ಮನಸ್ಥಿತಿಯನ್ನು ಕುಗ್ಗಿಸಬಹುದು. ಮೊದಲ ಬಾರಿಗೆ ಸೆಕ್ಸೆ ನಡೆಸಿದಾಗ ಅದು ನೋವನ್ನುಂಟು ಮಾಡಬಹುದು, ಆದರೆ ಒಮ್ಮೆ, ಅದು ಮುಗಿದ ನಂತರ, ವೈವಾಹಿಕ ಜೀವನದಲ್ಲಿ ಲೈಂಗಿಕ ಸಂತೋಷ ಮುಂದುವರಿಯುತ್ತದೆ.
ಲೈಂಗಿಕತೆಯ ಬಗ್ಗೆ ಸಂಗಾತಿ ಜೊತೆ ಮನಸ್ಸು ಬಿಚ್ಚಿ ಮಾತನಾಡುವುದರಲ್ಲಿ ಏನು ತಪ್ಪಿಲ್ಲ. ಯಾಕೆಂದರೆ ಉತ್ತಮ ದಾಂಪತ್ಯ ಜೀವನಕ್ಕೆ (marriage life) ಪ್ರೀತಿ, ನಂಬಿಕೆ ಜೊತೆಗೆ ಸೆಕ್ಸ್ ಕೂಡ ಭದ್ರ ಬುನಾದಿ ಹಾಕುತ್ತದೆ. ಉತ್ತಮ ಲೈಂಗಿಕ ಜೀವನ ಇದ್ದರೆ ಮಾತ್ರ ವ್ಯವಹಿಕ ಜೀವನದಲ್ಲಿ ಹೊಂದಾಣಿಕೆ ಮೂಡಬಹುದು.