ಈ ಎಲ್ಲಾ ಗುಣಗಳು ನಿಮ್ಮಲ್ಲಿದ್ರೆ… ನೀವು ಜಗತ್ತಿನ ಬೆಸ್ಟ್ ಹ್ಯಾಪಿ ಜೋಡಿಗಳು… ಇವರಲ್ಲಿ ನೀವು ಒಬ್ಬರಾಗಿದ್ದೀರಾ? ಚೆಕ್ ಮಾಡಿ!

Published : Dec 05, 2024, 02:04 PM ISTUpdated : Dec 05, 2024, 02:29 PM IST

ಸಂಬಂಧ ಸ್ಟ್ರಾಂಗ್ ಆಗಬೇಕು ಅಂದ್ರೆ ಇಬ್ಬರನ್ನು ಬೆಸೆಯಲು ದೊಡ್ಡ ದೊಡ್ಡ ವಿಷಯಗಳೇ ಬೇಕಿಲ್ಲ,  ಅನೇಕ ಸಣ್ಣ ವಿಷಯಗಳು ಕೂಡ ಕೆಲಸ ಮಾಡುತ್ತವೆ. ಒಂದು ಜೋಡಿ ಚೆನ್ನಾಗಿದೆ ಅಂದ್ರೆ ಅವರ ನಡುವೆ ಈ ಅಭ್ಯಾಸಗಳು ಇದ್ದೆ ಇರುತ್ತೆ.  ಇಬ್ಬರ ನಡುವೆ  ಜಗಳ ಆದ್ರೂನು, ಅವರು ಒಬ್ಬರಿಗೊಬ್ಬರು ಗೌರವ ಕೊಡೋದನ್ನ ಮರಿಯೋದಿಲ್ಲ. ಹಾಗಿದ್ರೆ ಯಾವ ವಿಷ್ಯಗಳು ನಿಮ್ಮನ್ನು ಹ್ಯಾಪಿ ಕಪಲ್ಸ್ ಅಂತ ಹೇಳುತ್ತೆ ಅನ್ನೋದನ್ನ ನೋಡೋಣ.   

PREV
110
ಈ ಎಲ್ಲಾ ಗುಣಗಳು ನಿಮ್ಮಲ್ಲಿದ್ರೆ… ನೀವು ಜಗತ್ತಿನ ಬೆಸ್ಟ್ ಹ್ಯಾಪಿ ಜೋಡಿಗಳು… ಇವರಲ್ಲಿ ನೀವು ಒಬ್ಬರಾಗಿದ್ದೀರಾ? ಚೆಕ್ ಮಾಡಿ!

ಗೌರವ ನೀಡುತ್ತಾರೆ
ಹ್ಯಾಪಿ ಕಪಲ್ಸ್ (Happy couples) ಪರಸ್ಪರರ ಅಭಿಪ್ರಾಯಗಳು, ವೈಯಕ್ತಿಕ ಜೀವನ ಮತ್ತು ಭಾವನೆಗಳನ್ನು ಹೇಗೆ ಗೌರವಿಸಬೇಕೆಂದು ತಿಳಿದಿದ್ದಾರೆ. ಅವರಿಬ್ಬರ ನಡುವೆ ಜಗಳಗಳು ನಡೆದ್ರೂ ಒಬ್ಬರಿಗೊಬ್ಬರು ಗೌರವ ನೀಡೋದನ್ನ ಮರೆಯೋದಿಲ್ಲ. 

210

ಮುಕ್ತವಾಗಿ ಮಾತನಾಡ್ತಾರೆ
ತಪ್ಪು ತಿಳುವಳಿಕೆಗಳಿಂದ ಸಂಬಂಧವನ್ನು ಉಳಿಸೋದಕ್ಕಾಗಿ , ಈ ಜೋಡಿಗಳು ತಮ್ಮ ಭಾವನೆಗಳು ಮತ್ತು ಸಮಸ್ಯೆಗಳ ಬಗ್ಗೆ ಪರಸ್ಪರ ಮುಕ್ತವಾಗಿ ಮಾತನಾಡುತ್ತಾರೆ. ಯಾವುದೇ ವಿಷ್ಯಗಳನ್ನು ಅವರು ಮುಚ್ಚಿಡೋದಿಲ್ಲ. 

310

ನಂಬಿಕೆ ಇಟ್ಟಿರ್ತಾರೆ
ಹ್ಯಾಪಿ ಕಪಲ್ಸ್ ಯಾವಾಗಲೂ ಸಂಬಂಧದಲ್ಲಿ ಪಾಸಿಟಿವ್ (possitive) ಆಗಿ ಯೋಚನೆ ಮಾಡ್ತಾರೆ, ಜೊತೆಗೆ ಒಬ್ಬರಿಗೊಬ್ಬರು ನಂಬಿಕೆ ಇಟ್ಟಿರುತ್ತಾರೆ. ಯಾವತ್ತೂ ಸಂಶಯದಿಂದ ನೋಡೋದಿಲ್ಲ. 
 

410

 ಸಾರಿ ಕೇಳೋದಕ್ಕೆ ಹಿಂದೇಟು ಹಾಕಲ್ಲ 
ಯಾವುದೇ ಸಂಬಂಧದಲ್ಲಿ ಸಣ್ಣ ತಪ್ಪುಗಳು ಸಂಭವಿಸಬಹುದು ಆದರೆ ಕ್ಷಮೆಯಾಚಿಸುವುದು ಮತ್ತು ಕ್ಷಮಿಸುವುದು ಎಷ್ಟು ಮುಖ್ಯ ಎಂದು ಹ್ಯಾಪಿ ಕಪಲ್ಸ್ ಅರ್ಥ ಮಾಡಿಕೊಂಡಿರುತ್ತಾರೆ. ಸಾರಿ ಕೇಳೊದ್ರಿಂದ ಯಾರು ಸಣ್ಣವರಾಗೋದಿಲ್ಲ ಅನ್ನೋದು ಅವರಿಗೆ ತಿಳಿದಿರುತ್ತೆ.

510

ಪ್ರಶಂಸೆ
ಈ ಹ್ಯಾಪಿ ಕಪಲ್ಸ್ ತಬ್ಬಿಕೊಳ್ಳುವ ಮೂಲಕ, ಥ್ಯಾಂಕ್ಸ್ ಹೇಳುವ ಮೂಲಕ ಹಾಗೂ ಪ್ರಶಂಸೆ  (praising)ನೀಡುವ ಮೂಲಕ ಒಬ್ಬರಿಗೊಬ್ಬರು ಎಷ್ಟು ಮುಖ್ಯ ಅನ್ನೋದನ್ನು ತೋರಿಸುತ್ತಾರೆ. 

610

ಪ್ರೀತಿಯೇ ಜೀವನ
ಈ ಹ್ಯಾಪಿ ಕಪಲ್ಸ್ ಯಾವುದೇ ವೈಯಕ್ತಿಕ ಸ್ವಾರ್ಥವಿಲ್ಲದೆ ಪರಸ್ಪರ ಪ್ರೀತಿಸುತ್ತಾರೆ ಮತ್ತು ಇದು ಅವರ ಸಂಬಂಧವನ್ನು ಎಲ್ಲಾರಿಗಿಂತಲೂ ವಿಭಿನ್ನವಾಗಿಸುತ್ತೆ. ಇವರು ತಪ್ಪನ್ನು ಕೂಡ ಪ್ರೀತಿಯಿಂದಲೇ ದೂರ ಮಾಡ್ತಾರೆ. 

710

ಕಿರಿಕಿರಿಯಿಂದ ದೂರ
ಪರಸ್ಪರರ ಯಶಸ್ಸಿನ ಬಗ್ಗೆ ಅಸೂಯೆ ಪಡುವುದರಲ್ಲಿ ತಮ್ಮ ಶಕ್ತಿಯನ್ನು ವ್ಯರ್ಥ ಮಾಡುವ ಬದಲು, ಈ ಜೋಡಿಗಳು ಸಣ್ಣ ಪುಟ್ಟ ಸಂತೋಷಗಳನ್ನು ಜೊತೆಯಾಗಿ ಎಂಜಾಯ್ ಮಾಡಲು ಬಯಸುತ್ತಾರೆ. 

810

ಸ್ವಾತಂತ್ರ್ಯ ನೀಡುವುದು
ಎಲ್ಲದಕ್ಕೂ ಅಡ್ಡಿಪಡಿಸುವುದು, ಫೋನ್ ಚೆಕ್ ಮಾಡೋದು ಅಥವಾ ಅನುಮಾನಿಸುವುದು, ಈ ಅಭ್ಯಾಸಗಳು ಹ್ಯಾಪಿ ಕಪಲ್ಸ್ ನಲ್ಲಿ ಕಾಣಿಸೋದೆ ಇಲ್ಲ. ಇಬ್ಬರು ಸ್ವತಂತ್ರ್ಯರಾಗಿರುತ್ತಾರೆ. 
 

910

ಬೆಂಬಲಿಸುವ ಸ್ವಭಾವ
ಪರಸ್ಪರರ ಬೆಳವಣಿಗೆ ಮತ್ತು ಏಳು ಬೀಳಿನಲ್ಲಿ ಒಬ್ಬರಿಗೊಬ್ಬರು ಜೊತೆಯಾಗಿ ಬೆಂಬಲ ನೀಡುತ್ತಾ, ಬೆಳೆಯುವ ಜೋಡಿಗಳನ್ನು ಹ್ಯಾಪಿ ಕಪಲ್ಸ್ ಎನ್ನಲಾಗುತ್ತೆ. 

1010

ನೀವೂ ಹ್ಯಾಪಿ ಕಪಲ್ಸ್ ಹೌದೋ? ಅಲ್ಲವೇ? 
ಹ್ಯಾಪಿ ಕಪಲ್ಸ್ ಆಗಬೇಕಾದರೆ ಮೊದಲನೆಯದಾಗಿ, ನೀವು ನಿಮ್ಮ ಸಂಗಾತಿಯ ಉತ್ತಮ ಸ್ನೇಹಿತರಾಗಿರಬೇಕು. ಉತ್ತಮ ಸ್ನೇಹಿತರು ಮಾತ್ರ ಒಬ್ಬರನ್ನೊಬ್ಬರು ಪರಸ್ಪರ ಅರ್ಥ ಮಾಡಿಕೊಳ್ಳೊದಕ್ಕೆ, ಬೆಂಬಲಿಸೋದಕ್ಕೆ ಜೊತೆಯಾಗಿ ಹ್ಯಾಪಿಯಾಗಿರೋದಕ್ಕೆ ಸಾಧ್ಯ. 

Read more Photos on
click me!

Recommended Stories