ಜೀವನವನ್ನು ಚೆನ್ನಾಗಿ ನಡೆಸಲು ಪ್ರತಿಯೊಬ್ಬರಿಗೂ ಉತ್ತಮ ಜೀವನ ಸಂಗಾತಿಯ ಅಗತ್ಯವಿದೆ ಎಂಬುದರಲ್ಲಿ ಡೌಟೇ ಇಲ್ಲ. ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಸಂಗಾತಿಯನ್ನು ಬಯಸುತ್ತಾರೆ, ಅವರು ಸಂತೋಷ ಮತ್ತು ದುಃಖದಲ್ಲಿ ಜೊತೆಯಾಗಿರುತ್ತಾರೆ ಅನ್ನೋ ಭರವಸೆ ಇರುತ್ತೆ. ಆದರೂ ತುಂಬಾ ಜನ ಸಿಂಗಲ್ (single people) ಆಗಿರೋದಕ್ಕೆ ಇಷ್ಟಪಡ್ತಾರೆ. ಅದೇನೂ ತಪ್ಪಿಲ್ಲ ಬಿಡಿ. ಏಕೆಂದರೆ ಕೆಲವರು ತಮ್ಮ ವೈವಾಹಿಕ ಜೀವನದಲ್ಲಿ ಸಂತೋಷದಿಂದ ಬದುಕುತ್ತಿದ್ದರೆ, ಅನೇಕರು ತಮ್ಮ ಜೀವನವನ್ನು ಸಿಂಗಲ್ ಆಗಿ ಕಳೆಯೋದಕ್ಕೆ ಬಯಸ್ತಾರೆ.
ಸಿಂಗಲ್ ಆಗಿರೋದೆ ಬೆಸ್ಟ್ ಎಂದು ಯಾರು ಎಷ್ಟೆ ಕೂಗಿ ಹೇಳಿದರೂ, ಒಂಟಿಯಾಗಿರುವುದು ಆಗಾಗ್ಗೆ ಒಂಟಿತನವನ್ನು ಉಂಟುಮಾಡುತ್ತದೆ ಎಂಬುದನ್ನು ನಿರ್ಲಕ್ಷಿಸಲಾಗುವುದಿಲ್ಲ. ಆದರೆ ಕೆಲವರು ಅದನ್ನ ನಂಬುವುದಿಲ್ಲ. ಅವರ ಪ್ರಕಾರ, ರಿಲೇಶನ್’ಶಿಪ್ ನಲ್ಲಿರೋದಕ್ಕಿಂತ ಸಿಂಗಲ್ ಆಗಿರೋದೆ ಬೆಸ್ಟ್ ಅಂತೆ. ಯಾಕೆ ಅನ್ನೋದನ್ನು ನೋಡೋಣ.
ನಾನು ಸಿಂಗಲ್ ಆಗಿದ್ರೇನೆ ಖುಶಿಯಾಗಿರುತ್ತೇನೆ
ಕೆಲವರು ಎಷ್ಟೇ ವಯಸ್ಸಾದ್ರೂ ಹ್ಯಾಪಿಯಾಗಿರ್ತಾರೆ (happy being single). ಒಂಟಿಯಾಗಿರಲು ತಮಗೆ ಯಾವುದೇ ಸಮಸ್ಯೆ ಇಲ್ಲ ಅಂತಾರೆ ಜನ. ಸಂತೋಷವಾಗಿರಲು ಜನರು ಇತರರ ಸಹವಾಸವನ್ನು ಬಯಸುವ ಜಗತ್ತಿನಲ್ಲಿ. ಸಿಂಗಲ್ ಆಗಿದ್ರೂ ಸಂಪೂರ್ಣವಾಗಿ ತೃಪ್ತರಾಗಿರೋ ಜನರು ಇರ್ತಾರೆ. ಇವರಿಗೆ ಹ್ಯಾಪಿಯಾಗಿರಲು ಯಾರ ಅಗತ್ಯವೂ ಇರೋದಿಲ್ಲ.
ನನಗೆ ಯಾರೂ ಬೇಕಿಲ್ಲ ಅನ್ನೋರು (No one is needed)
ಇನ್ನೂ ಕೆಲವು ಜನರಿಗೆ ಜೀವನ ನಡೆಸಲು ಇತರ ವ್ಯಕ್ತಿಗಳ ಅಗತ್ಯ ಇದೆ ಅಂತಾನೆ ಅನಿಸೋದಿಲ್ಲ ಕೆಲವರು ತಮ್ಮ ಫ್ರೆಂಡ್ಸ್ ಜೊತೆ ಹ್ಯಾಪಿಯಾಗಿರ್ತಾರೆ, ಅಥವಾ ಮತ್ಯಾವುದೋ ಕೆಲಸದಲ್ಲಿ ಬ್ಯುಸಿಯಾಗಿದ್ತಾರೆ. ಆವಾಗ ನಮಗಾಗಿ ಮತ್ಯಾರೋ ಬೇಕು ಅಂತಾ ಅನಿಸೋದು ಇಲ್ಲ.
ಕಮಿಟ್ ಆಗಲು ಇಷ್ಟ ಇಲ್ಲದೇ ಇರೋರು
ಇನ್ನೂ ಕೆಲವರು ಕಮೀಟ್ (commitment) ಆಗಲು ಭಯಪಡುತ್ತಾರೆ. ಏಕೆಂದರೆ ಅವರು ತಮ್ಮ ಸುತ್ತಮುತ್ತಲಿನ ಜನರು, ಫ್ರೆಂಡ್ಸ್ ನೋಡಿ, ಅವರು ಅವರ ಸಂಗಾತಿಯನ್ನು ಮೆಚ್ಚಿಸಲು ಏನೆಲ್ಲಾ ಮಾಡುತ್ತಾರೆ, ಎಷ್ಟೇಲ್ಲಾ ಜಗಳ, ಕೋಪ ನಡೆಯುತ್ತೆ, ಅನ್ನೋದನ್ನೆಲ್ಲಾ ನೋಡಿ… ಅಯ್ಯಯ್ಯೋ ನಾನು ಸಿಂಗಲ್ ಆಗಿರೋದೆ ಬೆಸ್ಟ್ ಅನಿಸುತ್ತೆ.
ಪರ್ಫೆಕ್ಟ್ ಸಂಗಾತಿ ಸಿಗದೇ ಇರೋರು
ಕೆಲವರಿಗೆ ರಿಲೇಶನ್ ಶಿಪ್ ನಲ್ಲಿ ಇರೋದು ಇಷ್ಟ. ಆದರೆ ತನ್ನ ಬಯಕೆಗೆ ತಕ್ಕಂತಹ, ತನಗೆ ಇಷ್ಟವಾಗುವಂತಹ ಪರ್ಫೆಕ್ಟ್ ಸಂಗಾತಿ (perfect partner) ಸಿಗದೇ ಇದ್ದರೆ ಆವಾಗ ಅವರು ಸಿಂಗಲ್ ಆಗಿ ಉಳಿಯುತ್ತಾರೆ. ಇವರು ಪ್ರೀತಿಗಾಗಿ ಏನೂ ಬೇಕಾದರೂ ಮಾಡಲು ತಯಾರಿರುತ್ತಾರೆ, ಆದರೆ ಸೂಕ್ತ ಸಂಗಾತಿ ಸಿಗದ ವಿನಃ ಯಾರನ್ನೂ ಇಷ್ಟಪಡಲು ಇವರು ತಯಾರಿರೋದಿಲ್ಲ.
ಬ್ರೇಕಪ್ ಆಗೀರೋ ವ್ಯಕ್ತಿ
ಇನ್ನು ತುಂಬಾ ಪ್ರೀತಿ ಮಾಡಿ, ಸಂಗಾತಿಯೇ ನನ್ನ ಜೀವನ ಎಂದು ಬದುಕಿದ ವ್ಯಕ್ತಿಗೆ, ಪ್ರೀತಿಯಲ್ಲಿ ಮೋಸವಾಗಿ ಹೋದ ವ್ಯಕ್ತಿ ಮತ್ತೆ ರಿಲೇಶನ್ ಶಿಪ್ ಗೆ ಬರಲು ಭಯ ಪಡ್ತಾರೆ. ಹಾಗಾಗಿ ಇವರು ಸಿಂಗಲ್ ಆಗಿರೇ ಉಳಿಯುತ್ತಾರೆ.