ಸದಾ ಗಂಭೀರವಾಗಿರು ಗೌತಮ್ ಗಂಭೀರ್ ಸಹ ಪ್ರೀತಿಯಲ್ಲಿ ಬಿದ್ದಿದ್ದರು. ಆದರೆ ಹುಡುಗಿಯನ್ನು ತುಂಬಾ ಇಷ್ಟಪಡುತ್ತಿದ್ದರೂ ಸಹ ಗಂಭೀರ್ ನತಾಶಾ ಜೈನ್‌ರನ್ನು ಮದುವೆಯಾಗಲು ಕಟ್ಟುನಿಟ್ಟಾದ ಕಂಡೀಷನ್ ಹಾಕಿದ್ದರು. ಏನದು?
ಭಾರತದ ಅತ್ಯುತ್ತಮ ಕ್ರಿಕೆಟಿಗರಲ್ಲಿ ಗೌತಮ್ ಗಂಭೀರ್ ಕೂಡಾ ಒಬ್ಬರು. ಕ್ರಿಕೆಟ್ ಮೈದಾನದಲ್ಲಿ ಆಕ್ರಮಣಕಾರಿ ಪ್ಲೇಯರ್ ಆಗಿರುವಂತೆಯೇ ಗ್ರೌಂಡ್‌ನ ಹೊರಗೆ ಬೋಲ್ಡ್ ಆಗಿ ಸ್ಟೇಟ್‌ಮೆಂಟ್ ನೀಡುವ ಮೂಲಕ ಎಲ್ಲರ ಕೆಂಗಣ್ಣಿಗೆ ಗುರಿಯಾಗುತ್ತಾರೆ. ಆದರೆ ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ತುಂಬಾ ರೊಮ್ಯಾಂಟಿಕ್ ವ್ಯಕ್ತಿಯಾಗಿದ್ದಾರೆ. ಅವರು ತಮ್ಮ ತಂದೆಯ ಸ್ನೇಹಿತನ ಮಗಳು ನತಾಶಾ ಜೈನ್ ಅವರನ್ನು ಪ್ರೀತಿಸಿ ಮದುವೆಯಾದರು.
26
ಮೊದಲಿಗೆ ಇಬ್ಬರೂ ಸ್ನೇಹಿತರಾದರು. ಇದಾದ ನಂತರ ಇಬ್ಬರೂ ಕ್ರಮೇಣ ಪರಸ್ಪರ ಪ್ರೀತಿಸಿ 2011ರಲ್ಲಿ ಮನೆಯವರ ಒಪ್ಪಿಗೆಯೊಂದಿಗೆ ವಿವಾಹವಾದರು. ಗೌತಮ್ ಗಂಭೀರ್ ತನ್ನ ಆಯ್ಕೆಯ ಬಗ್ಗೆ ಸ್ಪಷ್ಟತೆ ಹೊಂದಿದ್ದು, ತನ್ನ ಜೀವನ ಸಂಗಾತಿ ಡೌನ್ ಟು ಅರ್ಥ್ ಆಗಿರಬೇಕು ಎಂದುಕೊಂಡಿದ್ದರು. ನತಾಶಾ ಅವರಲ್ಲಿ ಈ ಗುಣವನ್ನು ಕಂಡುಕೊಂಡಾಗ, ಅವರು ತಡಮಾಡದೆ ಅವಳ ಕೈ ಹಿಡಿಯಲು ನಿರ್ಧರಿಸಿದರು ಎಂದು ತಿಳಿಸಿದ್ದರು.
36
ನತಾಶಾ ಅವರಲ್ಲಿ ಗಂಭೀರ್ ಕಂಡುಕೊಂಡ ಉತ್ತಮ ವಿಷಯವೆಂದರೆ ಅವಳು ಅವನೊಂದಿಗೆ ಕ್ರಿಕೆಟ್ ಬಗ್ಗೆ ಎಂದಿಗೂ ಮಾತನಾಡುವುದಿಲ್ಲ. ಪಂದ್ಯ ಒಳ್ಳೆಯದಾಗಲಿ ಅಥವಾ ಕೆಟ್ಟದ್ದಾಗಿರಲಿ, ಗೌತಮ್‌ನೊಂದಿಗೆ ಅದರ ಬಗ್ಗೆ ಚರ್ಚಿಸುವುದಿಲ್ಲ ಎಂದು ಸಂದರ್ಶನವೊಂದರಲ್ಲಿ ಗೌತಮ್ ಗಂಭೀರ್ ತಿಳಿಸಿದ್ದರು. ಆದರೆ ಈ ಎಲ್ಲಾ ವಿಷಯಗಳು ಅಲ್ಲದೆಯೂ ಗೌತಮ್ ಗಂಭೀರ್ ಮದುವೆಗೆ ನತಾಶಾ ಮುಂದೆ ಕಂಡೀಷನ್ ಹಾಕಿದ್ದರು ಎಂದು ಹೇಳಲಾಗುತ್ತದೆ.
46
ವಿಶ್ವಕಪ್ ನಂತರವೇ ಮದುವೆಯಾಗುವುದಾಗಿ ಗೌತಮ್ ಗಂಭೀರ್ ನತಾಶಾ ಜೈನ್‌ಗೆ ಹೇಳಿದ್ದರು. 2011ರ ವಿಶ್ವಕಪ್ ನಂತರ ಮದುವೆಯಾಗುವುದು ನನ್ನ ಏಕೈಕ ನಿರ್ಧಾರವಾಗಿತ್ತು ಎಂದು ಗಂಭೀರ್ ಹೇಳಿದ್ದರು. ಅದಕ್ಕೂ ಮೊದಲು ನಾವು ಒಬ್ಬರಿಗೊಬ್ಬರು ತಿಳಿದಿದ್ದೆವು, ಆದರೆ ನಾನು 2011 ರ ವಿಶ್ವಕಪ್ ಅನ್ನು ಆಡಲು ಬಯಸಿದ್ದೆ ಎಂದು ಗೌತಮ್ ಗಂಭೀರ್ ತಿಳಿಸಿದ್ದರು.
56
ಈ ಕಂಡೀಷನ್‌ಗೆ ನತಾಶಾ ಒಪ್ಪಿದ ಕಾರಣ ಇಬ್ಬರೂ, 2011ರಲ್ಲಿ ಪಂಜಾಬಿ ಪದ್ಧತಿಯಂತೆ ವಿವಾಹವಾದರು. ಮೆಹೆಂದಿ ಮತ್ತು ಸಂಗೀತ ಸಮಾರಂಭಗಳೂ ವಿಜೃಂಭಣೆಯಿಂದ ನಡೆದವು. ನತಾಶಾ ತಮ್ಮ ಮದುವೆಯಲ್ಲಿ ಖ್ಯಾತ ವಿನ್ಯಾಸಕ ತರುಣ್ ತಹಿಲಿಯಾನಿ ಅವರ ಲೆಹೆಂಗಾವನ್ನು ಧರಿಸಿದ್ದರು. ಮದುವೆಗೆ ಒಂದು ವರ್ಷ ಮೊದಲು ನತಾಶಾ ಮತ್ತು ಗೌತಮ್ ನಿಶ್ಚಿತಾರ್ಥ ಮಾಡಿಕೊಂಡರು.
66
ಜೊತೆಯಲ್ಲೇ ಊಟಕ್ಕೆ ಹೋದಾಗ ಗೌತಮ್ ಗಂಭೀರ್ ಅವರ ಜನಪ್ರಿಯತೆ ಬಗ್ಗೆ ನನಗೆ ತಿಳಿಯಿತು. ಸ್ಟಾರ್ ಆಗಿದ್ದರೂ ಅವರು ಸರಳವಾಗಿರುವ ಗುಣ ತುಂಬಾ ಮೆಚ್ಚುಗೆಯಾಯಿತು ಎಂದು ನತಾಶ ಸಂದರ್ಶನವೊಂದರಲ್ಲಿ ತಿಳಿಸಿದ್ದರು. ಗೌತಮ್ ಮತ್ತು ನತಾಶಾಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ ಅಜೀನ್ ಮತ್ತು ಅನೈಜಾ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.