ಬಾಲ್ಯದಲ್ಲಿ ಮಕ್ಕಳು ಮಾತಾಡೋದು, ನಡೆಯೋದು, ಬೇರೆಯವ್ರೊಂದಿಗೆ ರಿಯಾಕ್ಟ್ ಮಾಡೋದು, ಸರಿ ಮತ್ತು ತಪ್ಪುಗಳ ನಡುವಿನ ವ್ಯತ್ಯಾಸ ಅರ್ಥಮಾಡಿಕೊಳ್ಳೋದು ಮುಂತಾದ ವಿಷಯಗಳನ್ನು ಕಲಿಯುವ ಸಮಯ. ಆದರೆ ಚಿಕ್ಕ ಮಕ್ಕಳಿಗೆ ವಿಶೇಷವಾಗಿ ಯಾವುದು ಸರಿ ಮತ್ತು ಯಾವುದು ತಪ್ಪು ಎಂಬುದನ್ನು ವಿವರಿಸುವುದು ಸ್ವಲ್ಪ ಕಷ್ಟ. ಏತನ್ಮಧ್ಯೆ ಮಕ್ಕಳಿಗೆ ಸರಿಯಾದ ದಿಕ್ಕನ್ನು ತೋರಿಸುವುದು ಪೋಷಕರು ಮತ್ತು ಕುಟುಂಬ ಸದಸ್ಯರ ಜವಾಬ್ದಾರಿಯೂ ಆಗಿದೆ. ಒಂದು ವೇಳೆ ನಿಮ್ಮ ಮನೆಯಲ್ಲಿ ಚಿಕ್ಕ ಮಕ್ಕಳಿದ್ದರೆ ಮಕ್ಕಳಿಗೆ ಸರಿ ಮತ್ತು ತಪ್ಪುಗಳ ನಡುವಿನ ವ್ಯತ್ಯಾಸ ತೋರಿಸಲು ನೀವು ಕಲಿಸಬಹುದಾದ ಕೆಲವು ಸುಲಭ ಮತ್ತು ಪರಿಣಾಮಕಾರಿ ವಿಧಾನಗಳು ಇಲ್ಲಿವೆ ನೋಡಿ…
26
ಪ್ರೀತಿ ಮತ್ತು ತಾಳ್ಮೆಯಿಂದ ಮಾತನಾಡಿ
ಮಕ್ಕಳನ್ನು ಬೈಯೋದು ಅಥವಾ ಹೆದರಿಸೋದು ಮಾಡಿದ್ರೆ ಅವ್ರು ಸುಮ್ಮನಾಗಬಹುದೇ ಹೊರತು ನೀವು ಅವರಿಗೆ ಏನನ್ನೂ ಕಲಿಸಲು ಸಾಧ್ಯವಿಲ್ಲ. ಆದ್ದರಿಂದ ಮಕ್ಕಳು ಏನಾದ್ರೂ ತಪ್ಪು ಮಾಡಿದ್ರೆ ಸೈಲೆಂಟಾಗಿರಿ. ಆ ನಂತರ ಅವರು ಮಾಡಿದ ತಪ್ಪೇನು? ಅದರ ಪರಿಣಾಮಗಳು ಏನಾಗಿರಬಹುದು ಎಂಬುದನ್ನು ಪ್ರೀತಿಯಿಂದ ವಿವರಿಸಿ.
36
ಘಟನೆಗಳ ಮೂಲಕ ವಿವರಿಸಿ
ಕೆಲವು ವಿಷಯಗಳು ಹೇಗೆ ಸರಿ ಮತ್ತು ಹೇಗೆ ತಪ್ಪು ಎಂಬುದನ್ನ ಮಕ್ಕಳಿಗೆ ಕಥೆಗಳು ಅಥವಾ ದೈನಂದಿನ ಘಟನೆಗಳ ಮೂಲಕ ಕಲಿಸಿ. ಉದಾಹರಣೆಗೆ, “ನೀವು ಸಾಲಿನಲ್ಲಿ ನಿಲ್ಲದಿದ್ದರೆ ಎಲ್ಲರೂ ಸಮಸ್ಯೆಗಳನ್ನು ಎದುರಿಸುತ್ತಾರೆ. ಅದೇ ಸಾಲಿನಲ್ಲಿ ಇರುವುದು ಸರಿಯಾದ ದಾರಿ.”
46
ನಿಮ್ಮ ನಡವಳಿಕೆಯಿಂದ ಕಲಿಸಿ
ಮಕ್ಕಳು ತಮ್ಮ ಹೆತ್ತವರ ಪ್ರತಿಯೊಂದು ಮಾತು ಮತ್ತು ಅಭ್ಯಾಸವನ್ನು ಬಹಳ ಎಚ್ಚರಿಕೆಯಿಂದ ಗಮನಿಸುತ್ತಾರೆ. ನೀವು ಪ್ರಾಮಾಣಿಕತೆಯನ್ನು ಅಭ್ಯಾಸ ಮಾಡಿಸಿದರೆ, ಇತರರಿಗೆ ಸಹಾಯ ಮಾಡಿದರೆ ಮತ್ತು ಒಳ್ಳೆಯದನ್ನು ಅಳವಡಿಸಿಕೊಂಡರೆ, ನಿಮ್ಮ ಮಕ್ಕಳೂ ಸಹ ಅದನ್ನೇ ಮಾಡಲು ಪ್ರಯತ್ನಿಸುತ್ತಾರೆ. ನೀವು ಸರಿಯಾಗಿದ್ದಾಗ ಮಾತ್ರ ಮಕ್ಕಳು ನಿಮ್ಮಿಂದ ಸರಿಯಾದುದನ್ನೇ ಕಲೀತಾರೆ.
56
ಮಾತನಾಡಿ, ಬೈಯಬೇಡಿ
ಮಗು ಏನಾದರೂ ತಪ್ಪು ಮಾಡಿದರೆ, "ಅದು ತಪ್ಪು" ಎಂದು ಮಾತ್ರ ಹೇಳಿ. ಅವನನ್ನು ತಡೆಯಬೇಡಿ. ಅವನ ಜೊತೆ ಕುಳಿತು, "ನೀನು ಯಾಕೆ ಹೀಗೆ ಮಾಡಿದೆ?", "ನಿನಗೆ ಹೇಗನಿಸಿತು?" ಎಂದು ಕೇಳಿ, ನಂತರ ಅವನಿಗೆ ಯಾವುದು ಸರಿ ಎಂದು ಹೇಳಿ.
66
ಸತ್ಯ ಮತ್ತು ಪ್ರಾಮಾಣಿಕತೆಯ ಮಹತ್ವ
ಸತ್ಯವು ಕಹಿಯಾಗಿ ಕಂಡರೂ ಸಹ ಅದು ಯಾವಾಗಲೂ ಸರಿ ಎಂದು ಮಕ್ಕಳಿಗೆ ಕಲಿಸಿ. ಸುಳ್ಳು ತೊಂದರೆಯನ್ನು ಹೆಚ್ಚಿಸುತ್ತದೆ ಮತ್ತು ಸತ್ಯವು ಸಮಸ್ಯೆಗಳನ್ನು ಪರಿಹರಿಸುತ್ತದೆ ಎಂದು ಹೇಳಿ. ನೀವು ಹೀಗೆ ಮಾಡಿದಾಗ ನಿಮ್ಮ ಮಗು ಸರಿ ಮತ್ತು ತಪ್ಪುಗಳ ನಡುವಿನ ವ್ಯತ್ಯಾಸವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತದೆ.