Women Alcohol Consumption ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಪ್ರಕಾರ, ಭಾರತದಲ್ಲಿ ಮಹಿಳೆಯರು ಅತಿ ಹೆಚ್ಚು ಮದ್ಯಪಾನ ಮಾಡುವ ಟಾಪ್ 7 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪಟ್ಟಿ ಇಲ್ಲಿದೆ.
ಅರುಣಾಚಲ ಪ್ರದೇಶದಲ್ಲಿ 15 ರಿಂದ 49 ವರ್ಷ ವಯಸ್ಸಿನ ಶೇ. 26ರಷ್ಟು ಮಹಿಳೆಯರು ಮದ್ಯಪಾನ ಮಾಡುತ್ತಾರೆ. ಈ ರಾಜ್ಯದ ಸಂಸ್ಕೃತಿಯಲ್ಲಿ ಮದ್ಯಪಾನಕ್ಕೆ ವಿಶೇಷ ಸ್ಥಾನವಿದೆ. ಇಲ್ಲಿ ಅತಿಥಿಗಳಿಗೆ 'ಅಪೊಂಗ್' (ಅಕ್ಕಿ ಬಿಯರ್), ಓಪೋ, ಮಧುವಾದಂತಹ ಸಾಂಪ್ರದಾಯಿಕ ಪಾನೀಯಗಳನ್ನು ನೀಡಿ ಸತ್ಕರಿಸಲಾಗುತ್ತದೆ. ಹಬ್ಬ, ಸಾಂಪ್ರದಾಯಿಕ ಆಚರಣೆಗಳು ಮತ್ತು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಇವು ಸಾಮಾನ್ಯ. ಹೀಗಾಗಿಯೇ ಅರುಣಾಚಲ ಪ್ರದೇಶ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.
27
ತೆಲಂಗಾಣ
ತೆಲಂಗಾಣ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇಲ್ಲಿ ಹಬ್ಬ, ಆಚರಣೆ ಮತ್ತು ಪಾರ್ಟಿಗಳ ಸಮಯದಲ್ಲಿ ಮದ್ಯಪಾನ ಮಾಡುವುದು ಸಾಮಾನ್ಯ. ಈ ದಕ್ಷಿಣ ಭಾರತದ ರಾಜ್ಯದಲ್ಲಿ ಶೇ. 6.7ರಷ್ಟು ಮಹಿಳೆಯರು ಮದ್ಯಪಾನ ಮಾಡುತ್ತಾರೆ. ನಗರ ಪ್ರದೇಶದ ಮಹಿಳೆಯರಿಗಿಂತ ಗ್ರಾಮೀಣ ಮಹಿಳೆಯರೇ ಹೆಚ್ಚು ಮದ್ಯಪಾನ ಮಾಡುತ್ತಾರೆ.
37
ಸಿಕ್ಕಿಂ
ಸಿಕ್ಕಿಂ ರಾಜ್ಯದಲ್ಲಿ ಶೇ. 16.2ರಷ್ಟು ಮಹಿಳೆಯರು ಮದ್ಯಪಾನ ಮಾಡುತ್ತಾರೆ. ಇದು ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಧಾರ್ಮಿಕ ಆಚರಣೆಗಳು, ಹಬ್ಬಗಳಂತಹ ಕಾರ್ಯಕ್ರಮಗಳಲ್ಲಿ ಮದ್ಯವನ್ನು ಬಳಸುವುದು ಸಾಮಾನ್ಯವಾಗಿದೆ.
47
ಅಸ್ಸಾಂ
ಅಸ್ಸಾಂನಲ್ಲಿ ಶೇ. 7.3ರಷ್ಟು ಮಹಿಳೆಯರು ಮದ್ಯಪಾನ ಮಾಡುತ್ತಾರೆ. ಈಶಾನ್ಯದ ಇತರ ಎರಡು ರಾಜ್ಯಗಳಂತೆಯೇ, ಅಸ್ಸಾಂನ ಬುಡಕಟ್ಟು ಸಮುದಾಯಗಳು ಮದ್ಯ ತಯಾರಿಕೆ ಮತ್ತು ಸೇವನೆಯ ಸುದೀರ್ಘ ಸಂಪ್ರದಾಯವನ್ನು ಹೊಂದಿವೆ. ಅವರಿಗೆ, ಮದ್ಯಪಾನವು ಜೀವನಶೈಲಿಯ ಭಾಗವಾಗಿರುವಂತೆಯೇ ಒಂದು ಧಾರ್ಮಿಕ ಆಚರಣೆಯೂ ಆಗಿದೆ.
57
ಜಾರ್ಖಂಡ್
ಜಾರ್ಖಂಡ್‌ನಲ್ಲಿ ಶೇ. 6.1ರಷ್ಟು ಮಹಿಳೆಯರು ಮದ್ಯಪಾನ ಮಾಡುತ್ತಾರೆ. ಇವರಲ್ಲಿ ಹೆಚ್ಚಿನವರು ಹಲವು ವರ್ಷಗಳಿಂದ ಮೂಲೆಗುಂಪಾದ ಬುಡಕಟ್ಟು ಸಮುದಾಯಗಳಿಗೆ ಸೇರಿದವರು. ಉದ್ಯೋಗಾವಕಾಶಗಳು ಕಡಿಮೆ ಇರುವುದರಿಂದ, ಈ ಸಮುದಾಯಗಳಲ್ಲಿ ಹಲವರು ತಮ್ಮ ಸವಾಲುಗಳನ್ನು ಎದುರಿಸಲು ಮದ್ಯದ ಮೊರೆ ಹೋಗುತ್ತಾರೆ.
67
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು
ಪಟ್ಟಿಯಲ್ಲಿರುವ ಏಕೈಕ ಕೇಂದ್ರಾಡಳಿತ ಪ್ರದೇಶವಾದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಶೇ. 5ರಷ್ಟು ಮಹಿಳೆಯರು ಮದ್ಯಪಾನ ಮಾಡುತ್ತಾರೆ. ಸಾಮಾಜಿಕ ಪದ್ಧತಿಗಳು, ಒತ್ತಡ ಮತ್ತು ಮಹಿಳೆಯರು ಕುಡಿಯಲು ಪ್ರಾರಂಭಿಸುವ ವಯಸ್ಸು ಇದರ ಮೇಲೆ ಪ್ರಭಾವ ಬೀರುತ್ತವೆ.
77
ಛತ್ತೀಸ್‌ಗಢ
ಛತ್ತೀಸ್‌ಗಢದಲ್ಲಿ ಸುಮಾರು ಶೇ. 5ರಷ್ಟು ಮಹಿಳೆಯರು ಮದ್ಯಪಾನ ಮಾಡುತ್ತಾರೆ. ಇದು ರಾಜ್ಯವನ್ನು ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿರಿಸಿದೆ. ಒತ್ತಡ ಮತ್ತು ಮಹಿಳೆಯರಿಗೆ ಅವಕಾಶಗಳ ಕೊರತೆಯು ಈ ಸಂಖ್ಯೆಗೆ ಪ್ರಮುಖ ಕಾರಣವಾಗಿದೆ. ಗ್ರಾಮೀಣ ಜನರಲ್ಲಿ ಮದ್ಯಪಾನವು ಸಾಮಾನ್ಯ ಅಭ್ಯಾಸವಾಗಿದೆ. ಅಲ್ಲಿನ ಆಚರಣೆಗಳು, ಹಬ್ಬಗಳಲ್ಲಿ ಇದನ್ನು ಸಾಂಪ್ರದಾಯಿಕವಾಗಿ ತಯಾರಿಸಲಾಗುತ್ತದೆ. ಈ ಟಾಪ್ 7 ಪಟ್ಟಿಯಲ್ಲಿ ತಮಿಳುನಾಡು ರಾಜ್ಯವು ಸ್ಥಾನ ಪಡೆದಿಲ್ಲ ಎಂಬುದು ಗಮನಾರ್ಹ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.