ಗಂಡ - ಹೆಂಡತಿಯ ನಡುವೆ ಜಗಳ ಆಗ್ಬೇಕಂತೆ… ಯಾಕೆ ಗೊತ್ತಾ?

First Published Feb 5, 2023, 5:24 PM IST

ಜಗಳವಾಡುವುದು ಒಳ್ಳೆಯದಲ್ಲ. ಅದರಲ್ಲೂ ಗಂಡ ಹೆಂಡತಿ ನಡುವೆ ಜಗಳ ಬರಲೇ ಬಾರದು, ಇದರಿಂದ ಹಾಗಾಗುತ್ತೆ, ಹೀಗಾಗುತ್ತೆ ಅನ್ನೋದನ್ನೆಲ್ಲಾ ನೀವು ಕೇಳಿದ್ದೀರಿ. ಆದರೆ ಗಂಡ-ಹೆಂಡತಿ ಸಂಬಂಧದ ದೃಷ್ಟಿಯಿಂದ ಇದು ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ. ಯಾಕೆ ಅನ್ನೋದನ್ನು ನೋಡೋಣ.

ಗಂಡ ಮತ್ತು ಹೆಂಡತಿಯ ನಡುವಿನ ಜಗಳ (couple fight), ಅಂದರೆ, ಸಂಬಂಧದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂದರ್ಥ. ಜಗಳಗಳನ್ನು ಯಾವಾಗಲೂ ಈ ಕೋನದಿಂದಲೇ ನೋಡಲಾಗುತ್ತದೆ. ಆದರೆ, ನಕಾರಾತ್ಮಕವಾಗಿ ಕಾಣುವ ಈ ವಿಷಯವು ನಿಜವಾಗಿಯೂ ದಂಪತಿಗಳಿಗೆ ಪ್ರಯೋಜನಕಾರಿ ಅನ್ನೋದು ನಿಮಗೆ ಗೊತ್ತಾ?. ಗಂಡ ಮತ್ತು ಹೆಂಡತಿಯ ನಡುವಿನ ವಾದಗಳು ಅಥವಾ ಜಗಳಗಳನ್ನು ಮತ್ತೊಂದು ಕೋನದಿಂದ ನೋಡಿದರೆ, ಅವು ದಂಪತಿಗಳನ್ನು ದೂರ ಮಾಡುವ ಬದಲಾಗಿ, ಅವರನ್ನು ಹತ್ತಿರ ತರುತ್ತದೆ. ಹೇಗೆ ಅನ್ನೋದನ್ನು ನೋಡೋಣ.

ಜಗಳ ನಿಮಗಿರುವ ಕಾಳಜಿಯನ್ನು ತೋರಿಸುತ್ತೆ: ಸಂಗಾತಿ ಕೆಲವೊಮ್ಮೆ ಕೋಪದಲ್ಲಿ ಏನಾದರೂ ಹೇಳಿದಾಗ, ನಿಮಗೆ ಇಷ್ಟವಾಗೋದಿಲ್ಲ, ಬೇಸರವಾಗುತ್ತೆ. ಇದರ ಅರ್ಥ, ನೀವು ಅವರ ಬಗ್ಗೆ ಎಷ್ಟು ಕಾಳಜಿ ಹೊಂದಿದ್ದೀರಿ ಅನ್ನೋದನ್ನು ತೋರಿಸುತ್ತೆ. ಒಂದು ವೇಳೆ ನಿಮ್ಮ ಯಾವುದೇ ಮಾತಿಗೆ ಸಂಗಾತಿ ರಿಯಾಕ್ಟ್ ಮಾಡದೇ ಇದ್ದರೆ ಅದರರ್ಥ ಅವರಿಗೆ ನಿಮ್ಮ ಮೇಲೆ ಯಾವುದೇ ಫೀಲಿಂಗ್ ಇಲ್ಲ ಎಂದು.

ಇಷ್ಟ ಇಲ್ಲದ್ದನ್ನು ಹೇಳೋದು ತಪ್ಪಲ್ಲ:  ಕೋಪದಲ್ಲಿ, ಒಬ್ಬ ವ್ಯಕ್ತಿಯು ಹೃದಯದ ಕೋಪವನ್ನು ಬಹಿರಂಗವಾಗಿ ತೆಗೆದುಹಾಕುತ್ತಾನೆ. ವೈವಾಹಿಕ ಜೀವನದ (married life) ಬಗ್ಗೆ ಮಾತನಾಡುವಾಗ, ದಂಪತಿಗಳು ಶಾಂತಿಯನ್ನು ಕಾಪಾಡಿಕೊಳ್ಳಲು ವಿಷಯಗಳನ್ನು ಹೆಚ್ಚಾಗಿ ಮನಸ್ಸಿನಲ್ಲಿಟ್ಟುಕೊಳ್ಳುತ್ತಾರೆ. ಆದರೆ ಕೆಲವೊಮ್ಮೆ ಪರಿಸ್ಥಿತಿ, ಇಬ್ಬರನ್ನು ಹತ್ತಿರವಾಗಿಸೋ ಬದಲು, ದೂರ ಮಾಡುತ್ತದೆ.. ಉತ್ತಮ ವಿಷಯವೆಂದರೆ, ಏನಾದರೂ ಚೆನ್ನಾಗಿ ಕಾಣದಿದ್ದರೆ, ಅದನ್ನು ಸಂಗಾತಿಗೆ ಬಹಿರಂಗವಾಗಿ ಹೇಳಿ, ಆಗ ಮಾತ್ರ ನೀವು ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ಸಂಬಂಧದಲ್ಲಿ ಕಹಿ ಇರೋದಿಲ್ಲ: ಜಗಳಗಳನ್ನು ನಕಾರಾತ್ಮಕವಾಗಿ ನೋಡಲಾಗುತ್ತದೆ ಮತ್ತು ಜಗಳದಿಂದ ಸಂಬಂಧ ಹಾಳಾಗುತ್ತದೆ ಎನ್ನಲಾಗುತ್ತೆ. ಆದರೆ, ಸಣ್ಣ ಪುಟ್ಟ ಜಗಳಗಳು ದಂಪತಿಗಳನ್ನು ಹತ್ತಿರ ತರುತ್ತದೆ. ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವ ಬದಲು, ಅವುಗಳ ಬಗ್ಗೆ ಮಾತನಾಡುವಾಗ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ. ಇದು ಸಂಬಂಧದಲ್ಲಿ ಕಹಿ ಹರಡಲು (no bitterness in relationship) ಬಿಡೋದಿಲ್ಲ.

ವಿಶ್ವಾಸವನ್ನು ಹೆಚ್ಚಿಸುತ್ತದೆ: ದಂಪತಿಗಳ ನಡುವೆ ವಾಗ್ವಾದ ನಡೆದಾಗ ಮತ್ತು ನಂತರ ಇಬ್ಬರೂ ಒಟ್ಟಿಗೆ ವಿಷಯಗಳನ್ನು ಪರಿಹರಿಸಿದಾಗ, ಅದು ಅವರ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸುತ್ತದೆ. ಇದು ಮಾತ್ರವಲ್ಲ, ಅವರ ನಡುವಿನ ಪರಸ್ಪರ ನಂಬಿಕೆಯೂ ಹೆಚ್ಚಾಗುತ್ತದೆ. ಏಕೆಂದರೆ ದಂಪತಿಗಳ ದೊಡ್ಡ ಭಯವೆಂದರೆ ಜಗಳ ನಡೆದರೆ, ಅವರ ನಡುವೆ ಅಂತರ ಏರ್ಪಡುತ್ತೆ ಎಂದು. ಜಗಳದ ಬಳಿಕವೂ ಒಂದಾಗಿದ್ದರೆ, ಭರವಸೆ ಹೆಚ್ಚುತ್ತೆ. 

ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಸಹಾಯ: ಜಗಳದ ಸಮಯದಲ್ಲಿ, ವ್ಯಕ್ತಿಯ ನಿಜವಾದ ಸ್ವಭಾವ (rela character revealing) ಬಹಿರಂಗಗೊಳ್ಳುತ್ತದೆ. ಇದು ದಂಪತಿಗಳಿಗೆ ಪರಸ್ಪರರ ನಿಜವಾದ ನಡವಳಿಕೆಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.  ಇದರೊಂದಿಗೆ, ಇದು ಅವರ ನಡುವಿನ ವ್ಯತ್ಯಾಸಗಳನ್ನು ಸಹ ಹೊರತರುತ್ತದೆ. ಈ ವ್ಯತ್ಯಾಸಗಳ ಮೇಲೆ ಒಟ್ಟಿಗೆ ಕೆಲಸ ಮಾಡಲು ಅವರಿಗೆ ಅವಕಾಶವನ್ನು ನೀಡುತ್ತದೆ. ಇದು ಸಂಬಂಧವನ್ನು ಬಲಪಡಿಸುತ್ತದೆ ಮತ್ತು ಆರೋಗ್ಯಕರವಾಗಿಸುತ್ತದೆ.

click me!