ಮದ್ವೆ ಆದವರಿಗಿಂತ ಸಿಂಗಲ್ ಮಹಿಳೆಯರು ತುಂಬಾನೆ ಹ್ಯಾಪಿಯಾಗಿರ್ತಾರಂತೆ!

First Published | Aug 19, 2022, 6:32 PM IST

ಸಿಂಗಲ್ಸ್ ಮತ್ತು ಮ್ಯಾರೀಡ್ ಆಗಿರೋರ ಬಗ್ಗೆ ಅನೇಕ ಸಂಶೋಧನೆಗಳು ನಡೀತಾನೆ ಇರುತ್ತವೆ. ಅದರಲ್ಲೊಂದು ಸಂಶೋಧನೆಯ ಪ್ರಕಾರ, ಮಕ್ಕಳಿಲ್ಲದ ಅವಿವಾಹಿತ ಮಹಿಳೆಯರು, ಪುರುಷರು ಮತ್ತು ವಿವಾಹಿತ ಮಹಿಳೆಯರಿಗಿಂತ ಹೆಚ್ಚು ಸಂತೋಷ ಮತ್ತು ಆರೋಗ್ಯಕರವಾಗಿರುತ್ತಾರೆ ಅನ್ನೋದು ತಿಳಿದು ಬಂದಿದೆ. ಇಷ್ಟೇ ಅಲ್ಲ, ಸಂಗಾತಿಯನ್ನು ಆಯ್ಕೆ ಮಾಡುವಾಗ ಅವಿವಾಹಿತ ಮಹಿಳೆಯರು ಅವಿವಾಹಿತ ಪುರುಷರಿಗಿಂತ ಹೆಚ್ಚು ಆಯ್ಕೆಯಾಗಬಹುದು, ಏಕೆಂದರೆ ಅವರು ತಮ್ಮ ಲೈಫ್ ಸ್ಟೈಲ್ ಮತ್ತು ಫ್ರೀಡಂ ನ್ನು ಸಂಪೂರ್ಣವಾಗಿ ಎಂಜಾಯ್ ಮಾಡೋದನ್ನು ಇಷ್ಟಪಡುತ್ತಾರೆ ಅನ್ನೋದು ತಿಳಿದು ಬಂದಿದೆ. 

ಜೀವನವನ್ನು ಸರಿಯಾದ ರೀತಿಯಲ್ಲಿ ಬದುಕಲು ಪ್ರತಿಯೊಬ್ಬರಿಗೂ ಉತ್ತಮ ಜೀವನ ಸಂಗಾತಿಯ (life partner) ಅಗತ್ಯವಿದೆ ಎಂದು ಹೇಳಲಾಗುತ್ತದೆ. ನಿಮ್ಮ ಎಲ್ಲಾ ಸಂತೋಷ ಮತ್ತು ದುಃಖಗಳಲ್ಲಿ ನಿಮ್ಮೊಂದಿಗೆ ನಿಲ್ಲುವ, ನಿಮ್ಮನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವ, ನಿಮ್ಮ ಭಾವನೆಗಳನ್ನು ಗೌರವಿಸುವ ಮತ್ತು ನಿಮ್ಮನ್ನು ತುಂಬಾ ಪ್ರೀತಿಸುವ ಜೀವನ ಸಂಗಾತಿ ಅಗತ್ಯ ಇದೆ ಎನ್ನುತ್ತಾರೆ. ಈ ಎಲ್ಲಾ ಗುಣ ಹೊಂದಿರೋ ಜೀವನ ಸಂಗಾತಿಯನ್ನು ಪಡೆದರೆ, ಆಗ ಯಾರು ಅವಿವಾಹಿತರಾಗಲು ಬಯಸುತ್ತಾರೆ? ಅಲ್ವಾ? 

ಈ ಜಗತ್ತು ಇಷ್ಟು ಬೆಳೆದರೂ ಸಹ ಈ ಸಮಾಜವು ಪುರುಷರು ಸಿಂಗಲ್ ಆಗಿ ವಾಸಿಸುವುದನ್ನು ಒಪ್ಪಿಕೊಳ್ಳುತ್ತದೆ, ಆದರೆ ಮಹಿಳೆ ಮದುವೆಯಾಗದೆ ತನ್ನ ಜೀವನವನ್ನು ಏಕಾಂಗಿಯಾಗಿ ಕಳೆಯಲು ಬಯಸಿದಾಗ, ಜನರು ಹತ್ತು ರೀತಿಯ ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸುತ್ತಾರೆ. ಮಹಿಳೆಯಲ್ಲೇ, ನ್ಯೂನತೆಗಳು ಕೊರತೆಯನ್ನು ತೆಗೆದುಹಾಕಲು ಪ್ರಾರಂಭಿಸುತ್ತಾರೆ. ಯಾಕೆ ಹೀಗೆ?. 

Tap to resize

ಪುರುಷರು ಮತ್ತು ಮಹಿಳೆಯರು ಮದ್ವೆ ಆಗದೇ ಇರುವಾಗ ಅವರ ಬಳಿ ಕೇಳುವ ಪ್ರಶ್ನೆಗಳು ಸಹ ತುಂಬಾ ವಿಭಿನ್ನವಾಗಿವೆ. ಅನೇಕ ಮಹಿಳೆಯರು ಮತ್ತು ಪುರುಷರು ಸಂತೋಷದಿಂದ ಜೀವಿಸುತ್ತಿದ್ದರೂ, ಒಂದು ಸಂಶೋಧನೆಯ ಪ್ರಕಾರ, ಕೆಲವು ಮಹಿಳೆಯರು ಸಿಂಗಲ್ (single women) ಆಗಿರೋದ್ರಿಂದ ತುಂಬಾನೆ ಸಂತೋಷವಾಗಿರುತ್ತಾರೆ ಅನ್ನೋದು ತಿಳಿದು ಬಂದಿದೆ. ಅಷ್ಟಕ್ಕೂ, ಇದಕ್ಕೆ ಕಾರಣವೇನು, ಇಲ್ಲಿ ತಿಳಿದುಕೊಳ್ಳೋಣ …

ಮಗುವಿಲ್ಲದ ಸಿಂಗಲ್ ಮಹಿಳೆ ಹ್ಯಾಪಿ & ಹೆಲ್ತಿಯಾಗಿರ್ತಾಳೆ 
ಒಂದು ವರದಿಯ ಪ್ರಕಾರ, ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನ ಸಂತೋಷ ತಜ್ಞ ಮತ್ತು ಬಿಹೆವಿಯರ್ ಸಯನ್ಸ್  ಪ್ರೊಫೆಸರ್ ಪಾಲ್ ಡೋಲನ್, ಮಕ್ಕಳಿಲ್ಲದ ಅವಿವಾಹಿತ ಮಹಿಳೆಯರು ಅತ್ಯಂತ ಸಂತೋಷವಾಗಿರುತ್ತಾರೆ ಎಂದು ಹೇಳುತ್ತಾರೆ. 

ಪುರುಷರು ಮದುವೆಯಾಗೋದ್ರಿಂದ ಅನೇಕ ಪ್ರಯೋಜನಗಳನ್ನು ಪಡೆಯುತ್ತಾರೆ, ಆದರೆ ಮಹಿಳೆಯರಿಗೆ ಇದನ್ನು ಹೇಳಲು ಸಾಧ್ಯವಿಲ್ಲ. ವಿವಾಹಿತ ಪುರುಷನು (married man) ಕಡಿಮೆ ಅಪಾಯವನ್ನು ತೆಗೆದುಕೊಳ್ಳುತ್ತಾನೆ, ಇದರಿಂದಾಗಿ ಅವರು ಆರೋಗ್ಯವಾಗಿರುತ್ತಾರೆ ಎನ್ನಲಾಗಿದೆ. ಆದರೆ ಮಧ್ಯವಯಸ್ಕ ವಿವಾಹಿತ ಮಹಿಳೆಯರು ಸಿಂಗಲ್ ಮಹಿಳೆಯರಿಗಿಂತ ಮಾನಸಿಕ ಮತ್ತು ದೈಹಿಕವಾಗಿ ತುಂಬಾನೆ ನೊಂದಿರುತ್ತಾರೆ ಎಂದು ತಜ್ಞರು ತಿಳಿಸಿದ್ದಾರೆ. 

ಈ ಹಿನ್ನೆಲೆಯಲ್ಲಿ, ಡೋಲನ್ ತನ್ನ ಸಂಶೋಧನೆಯಲ್ಲಿ, ಎಂದಿಗೂ ಮದುವೆಯಾಗದ (unmarried) ಅಥವಾ ಮಕ್ಕಳನ್ನು ಹೊಂದಿರದ ಮಹಿಳೆಯರು, ಮದುವೆಯಾಗಿರುವ ಪುರುಷರು ಮತ್ತು ಮಹಿಳೆಯರಿಗಿಂತ ಅತ್ಯಂತ ಆರೋಗ್ಯಕರ ಮತ್ತು ಸಂತೋಷವಾಗಿದ್ದಾರೆ ಎಂದು ತೀರ್ಮಾನಿಸಿದರು.

ಮಹಿಳೆಯರು ಸಿಂಗಲ್ ಆಗಿದ್ರೂ ಖುಷಿಯಾಗಿರ್ತಾರಾ?
ಪುರುಷರಿಗಿಂತ ಮಹಿಳೆಯರು ಸಿಂಗಲ್ ಆಗಿರೋ ಬಗ್ಗೆ ಹೆಚ್ಚು ತೃಪ್ತರಾಗಿದ್ದಾರೆ ಮತ್ತು ಅವರು ಇನ್ನು ಮುಂದೆ ಯಾವುದೇ ರೀತಿಯ ರಿಲೇಶನ್ ಶಿಪ್ ನಲ್ಲಿ ಇರಲು ಬಯಸೋದಿಲ್ಲ ಎಂದು ಕೆಲವು ಸಂಶೋಧನೆಗಳು ತೋರಿಸುತ್ತವೆ. ಎಸೆಕ್ಸ್ ವಿಶ್ವವಿದ್ಯಾಲಯದ ಪ್ರೊಫೆಸರ್ ಎಮಿಲಿ ಗ್ರಂಡಿ ಪ್ರಕಾರ, ಪುರುಷರಿಗಿಂತ ಮಹಿಳೆಯರು ಮನೆಕೆಲಸಗಳಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ. ಅವರು ಹೆಚ್ಚು ಭಾವನಾತ್ಮಕ ಕೆಲಸ ಮಾಡ್ತಾರೆ. ಅವರು ಇತರ ವಿಷಯಗಳೊಂದಿಗೆ ಭಾವನಾತ್ಮಕವಾಗಿ ಹೆಚ್ಚು ಕಷ್ಟಪಟ್ಟು ಕೆಲಸ ಮಾಡುತ್ತಾರೆ, ಇದರಿಂದ ಸಂತಸವಾಗಿರುತ್ತಾರೆ.

ಇಷ್ಟೇ ಅಲ್ಲ, ಅನೇಕ ಮಹಿಳೆಯರು ಜೀವನ ಸಂಗಾತಿಯನ್ನು ಆಯ್ಕೆ ಮಾಡುವಲ್ಲಿ ತುಂಬಾ ಆಯ್ಕೆ ಮಾಡ್ತಾರೆ. ಹೀಗಿರುವಾಗ ಅವರಿಗೆ ತಮ್ಮ ಆಯ್ಕೆಯ ಸಂಗಾತಿ ಸಿಗದೇ ಇದ್ದರೆ, ಅವರು ಸಿಂಗಲ್ ಆಗಿರಲು ಸಹ ಇಷ್ಟಪಡುತ್ತಾರೆ. ಇದನ್ನು ಅವರು ಯಾವುದೇ ನೋವಿಲ್ಲದೇ, ಸಂತೋಷದಿಂದ ಸ್ವೀಕರಿಸುತ್ತಾರೆ.

ಸಿಂಗಲ್ ಮಹಿಳೆಯರು ತಮ್ಮ ಲೈಫ್ ಸ್ಟೈಲ್ (life style) ಮತ್ತು ಫ್ರೀಡಂ ನ್ನು ಸಂಪೂರ್ಣವಾಗಿ ಆನಂದಿಸುವಲ್ಲಿ ಹೆಚ್ಚು ನಂಬಿಕೆ ಇಟ್ಟಿದ್ದಾರೆ. ಅವಿವಾಹಿತರಾಗಿರುವುದರಿಂದ, ಅವರು ತಮ್ಮದೇ ಆದ ರೀತಿಯಲ್ಲಿ ಜೀವನವನ್ನು ನಡೆಸುತ್ತಾರೆ. ಇದರಿಂದ ಅವರು ಜೀವನದಲ್ಲಿ ತಮಗೆ ಬೇಕೆನಿಸಿದನ್ನು ಮಾಡುತ್ತಾ  ತುಂಬಾನೆ ಸಂತೋಷವಾಗಿರುತ್ತಾರೆ.

Latest Videos

click me!