ಸೆಕ್ಸ್‌ನ ಪ್ರಾಮುಖ್ಯತೆ ಏನು? ಈ ಬಗ್ಗೆ ವಿಜ್ಞಾನ ಏನು ಹೇಳುತ್ತೆ?

Suvarna News   | Asianet News
Published : Dec 22, 2020, 03:51 PM IST

ಆರೋಗ್ಯಕರ ಲೈಂಗಿಕ ಜೀವನವನ್ನು ಕಾಪಾಡಿಕೊಳ್ಳುವುದು ಆರೋಗ್ಯಕರ ಸಂಬಂಧಕ್ಕೆ ಮಾತ್ರವಲ್ಲ, ಒಟ್ಟಾರೆ ಮಾನಸಿಕ, ದೈಹಿಕ ಮತ್ತು ಭಾವನಾತ್ಮಕ ಆರೋಗ್ಯಕ್ಕೂ ಅತ್ಯಗತ್ಯ. ಲೈಂಗಿಕತೆಯು ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ ಎಂದು ಸಂಶೋಧನೆ ಸಾಬೀತುಪಡಿಸಿದೆ. ಸಂಶೋಧಕರ ಪ್ರಕಾರ, ಲೈಂಗಿಕತೆಯು ಮೆದುಳು ಸೇರಿ  ದೇಹದ ಹಲವಾರು ಇತರ ಅಂಗಗಳ ಮೇಲೆ ಪರಿಣಾಮ ಬೀರುವ ವಿವಿಧ ರೀತಿಯ ನ್ಯೂರೋ ಟ್ರಾನ್ಸ್ಮಿಟರ್‌ಗಳನ್ನು ಸಕ್ರಿಯಗೊಳಿಸುತ್ತದೆ. 

PREV
19
ಸೆಕ್ಸ್‌ನ ಪ್ರಾಮುಖ್ಯತೆ ಏನು? ಈ ಬಗ್ಗೆ ವಿಜ್ಞಾನ ಏನು ಹೇಳುತ್ತೆ?

ವಾಸ್ತವವಾಗಿ, ಕೆಲವು ತಜ್ಞರು ಹೇಳುವಂತೆ ಉತ್ತಮ ಮತ್ತು ತೃಪ್ತಿಕರವಾದ ಲೈಂಗಿಕ ಜೀವನವು ಆರೋಗ್ಯದ ಅನೇಕ ಗಂಭೀರ ತೊಡಕುಗಳ ಅಪಾಯವನ್ನು ತಗ್ಗಿಸುವ ಮೂಲಕ ಮನುಷ್ಯನ ಜೀವಿತಾವಧಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆದಾಗ್ಯೂ, ಪ್ರಯೋಜನಗಳನ್ನು ಪಡೆಯಲು ಸುರಕ್ಷಿತ ಲೈಂಗಿಕತೆಯನ್ನು ಅಭ್ಯಾಸ ಮಾಡಬೇಕಾಗುತ್ತದೆ. 

29

ಅಸುರಕ್ಷಿತ ಲೈಂಗಿಕತೆಯಿಂದಾಗಿ ಲೈಂಗಿಕವಾಗಿ ಹರಡುವ ಸೋಂಕುಗಳನ್ನು (ಎಸ್ಟಿಐ) ಪಡೆಯುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಹೆಲ್ತಿ ಸೆಕ್ಸ್ ಅಭ್ಯಾಸ ಮಾಡುತ್ತಿದ್ದರೆ, ಅದು ಅನೇಕ ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ. ವಾರಕ್ಕೆ ಎರಡು ಬಾರಿಯಾದರೂ ಸೆಕ್ಸ್ ಮಾಡುವುದರಿಂದ ಪ್ರಯೋಜನಗಳು ಹಲವಾರಿವೆ ಎಂದು ವಿಜ್ಞಾನ ಹೇಳುತ್ತದೆ.  

39

ಕಡಿಮೆ ರಕ್ತದೊತ್ತಡ: ಕಡಿಮೆ ರಕ್ತದೊತ್ತಡ ಮತ್ತು ಲೈಂಗಿಕತೆ ಈ ಎರಡರ ಕುರಿತು ಅನೇಕ ಅಧ್ಯಯನಗಳು ನಡೆದಿವೆ. ರಕ್ತದೊತ್ತಡ ಪರೀಕ್ಷೆಯ ಮೊದಲ ಸಂಖ್ಯೆಯಾದ ಸಿಸ್ಟೊಲಿಕ್ ರಕ್ತದೊತ್ತಡವನ್ನು ಕಡಿಮೆ ಮಾಡಲು ಲೈಂಗಿಕ ಸಂಭೋಗವು ವಿಶೇಷವಾಗಿ ಸಹಾಯಕವಾಗುತ್ತದೆ.

49

ಉತ್ತಮ ರೋಗನಿರೋಧಕ ಶಕ್ತಿ: ಲೈಂಗಿಕವಾಗಿ ಸಕ್ರಿಯವಾಗಿರುವ ಜನರು ಬಲವಾದ ರೋಗನಿರೋಧಕ ಶಕ್ತಿಯನ್ನು ಹೊಂದಿರುತ್ತಾರೆ. ವಾರದಲ್ಲಿ ಕೆಲವು ಬಾರಿ ಲೈಂಗಿಕ ಸಂಬಂಧ ಹೊಂದಿದ್ದ ಜನರು ಹೆಚ್ಚಿನ ಮಟ್ಟದ ಇಮ್ಯುನೊಗ್ಲಾಬ್ಯುಲಿನ್ ಎ ಅನ್ನು ಹೊಂದಿದ್ದಾರೆ. ಇದು ಸೋಂಕು ಮತ್ತು ನೆಗಡಿಯ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.  

59

ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ: ಸೆಕ್ಸ್ ನಿಮ್ಮ ಹೃದಯಕ್ಕೆ ವ್ಯಾಯಾಮದ ಒಂದು ಉತ್ತಮ ರೂಪವಾಗಿದೆ. ನಿಮ್ಮ ಹೃದಯ ಬಡಿತವನ್ನು ಹೆಚ್ಚಿಸುವುದರ ಜೊತೆಗೆ, ನಿಮ್ಮ ಈಸ್ಟ್ರೊಜೆನ್ ಮತ್ತು ಟೆಸ್ಟೋಸ್ಟೆರಾನ್ ಮಟ್ಟವನ್ನು ಸಮತೋಲನದಲ್ಲಿಡಲು ಲೈಂಗಿಕತೆಯು ಸಹಾಯ ಮಾಡುತ್ತದೆ. ಈ ಹಾರ್ಮೋನುಗಳ ಕಡಿಮೆಯಾದರೆ ಆಸ್ಟಿಯೊಪೊರೋಸಿಸ್ ಮತ್ತು ಹೃದ್ರೋಗ ಸೇರಿದಂತೆ ಅನೇಕ ಕಾಯಿಲೆಗಳ ಅಪಾಯವನ್ನುಂಟು ಮಾಡುತ್ತದೆ. 

69

ಒಂದು ಅಧ್ಯಯನದಲ್ಲಿ, ವಾರಕ್ಕೆ ಎರಡು ಬಾರಿಯಾದರೂ ಲೈಂಗಿಕ ಸಂಬಂಧ ಹೊಂದಿದ್ದ ಪುರುಷರು ವಿರಳವಾಗಿ ಲೈಂಗಿಕ ಸಂಬಂಧ ಹೊಂದಿದ್ದ ಪುರುಷರಿಗಿಂತ  ಹೃದ್ರೋಗದಿಂದ ಸಾಯುವ ಪ್ರಮಾಣ ಅರ್ಧದಷ್ಟು ಮಾತ್ರವೇ ಸಾಧ್ಯತೆಯಿದೆ ಎಂದು ಕಂಡುಬಂದಿದೆ.

79

ತಕ್ಷಣದ ನೋವು ನಿವಾರಣೆಯನ್ನು ನೀಡುತ್ತದೆ: ಉತ್ತಮ ಸೆಕ್ಸ್ ನೋವನ್ನು ತಡೆಯುತ್ತದೆ ಎಂದು ತಜ್ಞರು ಹೇಳುತ್ತಾರೆ. ಜನನಾಂಗದ ಸ್ವಯಂ-ಪ್ರಚೋದನೆಯು ಮುಟ್ಟಿನ ಸೆಳೆತ, ಸಂಧಿವಾತ ನೋವು ಮತ್ತು ಕೆಲವು ಸಂದರ್ಭಗಳಲ್ಲಿ ತಲೆನೋವು, ದೀರ್ಘಕಾಲದ ಬೆನ್ನು ಮತ್ತು ಕಾಲು ನೋವುಗಳನ್ನು ಕಡಿಮೆ ಮಾಡಲು ಸಹಕಾರಿಯಾಗುತ್ತದೆ.

89

ಮಹಿಳೆಯರ ಬ್ಲಾಡರ್ ನಿಯಂತ್ರಣವನ್ನು ಸುಧಾರಿಸುತ್ತದೆ: ಮೂತ್ರದ ಅಸಂಯಮ - ಇದು ಸಾಮಾನ್ಯ ಮತ್ತು ಆಗಾಗ್ಗೆ ಮುಜುಗರದ ಸಮಸ್ಯೆಯಾಗಿದ್ದು, ಇದು ಅವರ ಜೀವನದ ಒಂದು ಹಂತದಲ್ಲಿ ಸುಮಾರು 30% ಮಹಿಳೆಯರ ಮೇಲೆ ಪರಿಣಾಮ ಬೀರುತ್ತದೆ ಎಂದು ಅಂದಾಜಿಸಲಾಗಿದೆ. ನಿಯಮಿತ ಲೈಂಗಿಕತೆಯು ನಿಮ್ಮ ಪೆಲ್ವಿಕ್ ಫ್ಲೋರ್ ಮಸಲ್ಗಳನ್ನು ಬಲಪಡಿಸುತ್ತದೆ, ಇದು ಅಸಂಯಮವನ್ನು ತಪ್ಪಿಸಲು ಮುಖ್ಯವಾಗಿದೆ.

99

ಉತ್ತಮ ನಿದ್ರೆ: ಲೈಂಗಿಕತೆಯ ನಂತರ ನಿಮಗೆ ನಿದ್ರೆ ಬಂದಂತೆ ಅನಿಸುತ್ತದೆಯೇ? ಸೆಕ್ಸ್ ಪ್ರೋಲ್ಯಾಕ್ಟಿನ್ ಎಂಬ ಹಾರ್ಮೋನ್ ಬಿಡುಗಡೆಯನ್ನು ಪ್ರಚೋದಿಸುತ್ತದೆ, ಇದು ವಿಶ್ರಾಂತಿ ಮತ್ತು ನಿದ್ರೆಯ ಭಾವನೆಗಳನ್ನು ಉತ್ತೇಜಿಸುತ್ತದೆ.

click me!

Recommended Stories