Bigg Boss ಸೂರಜ್​ ಸಿಂಗ್​- ರಾಶಿಕಾ ಕೊಟ್ಟರು ಗುಡ್​ನ್ಯೂಸ್​: ಚಿನ್ನ ಖರೀದಿಸ್ತಾ ಜೋಡಿ ಹೇಳಿದ್ದೇನು?

Published : Apr 17, 2026, 05:14 PM IST

ಬಿಗ್​ಬಾಸ್​ 12ರ ಕ್ಯೂಟ್​ ಜೋಡಿ ಎನಿಸಿಕೊಂಡಿದ್ದ ಸೂರಜ್​ ಸಿಂಗ್ ಮತ್ತು ರಾಶಿಕಾ ಶೆಟ್ಟಿ, ಅಕ್ಷಯ ತೃತೀಯದ ಹಿನ್ನೆಲೆಯಲ್ಲಿ ಚಿನ್ನದ ಮಳಿಗೆಯೊಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.  ತಮ್ಮಿಬ್ಬರ ನಡುವೆ ಇರುವುದು ಗೆಳೆತನ ಮಾತ್ರ ಎಂದು ಈ ಜೋಡಿ ಸ್ಪಷ್ಟಪಡಿಸಿದ್ದು, ಈ ಮಳಿಗೆಗೆ ಬಂದದ್ದೇಕೆ?

PREV
16
ಬಿಗ್​ಬಾಸ್​​ ಕ್ಯೂಟ್​ ಜೋಡಿ

ಬಿಗ್​ಬಾಸ್​ 12 (Bigg Boss 12)ರ ಕ್ಯೂಟ್​ ಜೋಡಿಗಳಲ್ಲಿ ಒಂದಾಗಿದ್ದು ಸೂರಜ್​ ಸಿಂಗ್ ಮತ್ತು ರಾಶಿಕಾ ಶೆಟ್ಟಿ ಜೋಡಿ. ರಾಶಿಕಾ ಶೆಟ್ಟಿ ಅವರು, ಮನೆಯಲ್ಲಿ ಹೆಚ್ಚು ಸದ್ದು ಮಾಡಿದ್ದೇ ಸೂರಜ್​ ಸಿಂಗ್​ ಅವರ ಜೊತೆಗಿನ ಆತ್ಮೀಯ ಒಡನಾಟದಿಂದ. ಸೂರಜ್​ ಅವರು ವೈಲ್ಡ್​ಕಾರ್ಡ್​ ಎಂಟ್ರಿ ಕೊಟ್ಟಾಗ ಈ ಮನೆಯ ಸುಂದರಿಗೆ ಗುಲಾಬಿ ಕೊಡಬೇಕು ಎಂದಾಗ ಅವರು ಅದನ್ನು ಕೊಟ್ಟಿದ್ದು ರಾಶಿಕಾ ಅವರಿಗೆ.

26
ಬಿಗ್​ಬಾಸ್​ನಲ್ಲಿ ಸ್ನೇಹ

ಅಲ್ಲಿಂದಲೇ ಅವರ ಸ್ನೇಹ ಶುರುವಾಗಿತ್ತು. ಒಂದು ಹಂತದಲ್ಲಿ ಬಿಗ್​ಬಾಸ್​ ವೀಕ್ಷಕರಿಗೆ ರಾಶಿಕಾ ಶೆಟ್ಟಿ ಅವರೇ ಸೂರಜ್​ ವಿಷಯದಲ್ಲಿ ಸ್ವಲ್ಪ ಹೆಚ್ಚಿನ ಒಲವು ತೋರುತ್ತಿದ್ದಾರೆ ಎಂದು ಎನ್ನಿಸಿದ್ದು ಉಂಟು. ಅವರ ಜೊತೆಯಲ್ಲಿಯೇ ಇರುವುದು, ಅವರ ಬಳಿ ಮಾತ್ರ ಮಾತನಾಡುವುದು... ಇಂಥ ಘಟನೆಗಳು ಹಲವಾರು ನಡೆದಿದ್ದವು. ಆ ಬಳಿಕ ಸೂರಜ್​ ಅವರು ಎಲಿಮಿನೇಟ್​ ಆಗಿ ಹೊರಕ್ಕೆ ಬಂದಾಗ, ರಾಶಿಕಾ ಶೆಟ್ಟಿ ಬಿಕ್ಕಿಬಿಕ್ಕಿ ಅತ್ತಿದ್ದರಿಂದಲೂ ಇವರಿಬ್ಬರ ನಡುವೆ ಸಮ್​ಥಿಂಗ್​ ಇದೆ ಎಂದೇ ಹೇಳಲಾಗುತ್ತಿತ್ತು. ಹೊರಗೆ ಬಂದ ಮೇಲೂ ಈ ಜೋಡಿಗೆ ಇದೇ ವಿಷಯವಾಗಿ ಪ್ರಶ್ನೆಗಳನ್ನು ಕೇಳಲಾಗಿತ್ತು.

36
ಚಿನ್ನದ ಮಳಿಗೆಯಲ್ಲಿ

ಇದೀಗ ಮತ್ತೆ ಈ ಜೋಡಿ ಸಕತ್​ ಸೌಂಡ್​ ಮಾಡಿದೆ. ಅದೇನೆಂದರೆ ಇನ್ನೇನು ಅಕ್ಷಯ ತೃತೀಯ ಹಬ್ಬ ಹತ್ತಿರವಿದೆ. ಇದರ ಬೆನ್ನಲ್ಲೇ ಈ ಜೋಡಿ ಚಿನ್ನದ ಖರೀದಿ ಮಾಡಿದೆ. ರಾಶಿಕಾ ಶೆಟ್ಟಿ ಸೂರಜ್​ ಸಿಂಗ್​ ಇಬ್ಬರೂ ಚಿನ್ನದ ಮಳಿಗೆಯೊಂದರಲ್ಲಿ ಕಾಣಿಸಿಕೊಂಡು ಚಿನ್ನಾಭರಣ ಪ್ರಿಯರಿಗೆ ಗುಡ್​ನ್ಯೂಸ್​ ಕೊಟ್ಟಿದ್ದಾರೆ.

46
ಏನಿದು ಗುಡ್​ನ್ಯೂಸ್​?

ಅಷ್ಟಕ್ಕೂ ಏನಿದು ಗುಡ್​ನ್ಯೂಸ್​ ಅಂತ ಕೇಳ್ತೀರಾ. ಅಂಥದ್ದೇನೂ ಇಲ್ಲ. ಚಿನ್ನದ ಮಳಿಗೆಯೊಂದರ ಪ್ರಚಾರಕ್ಕಾಗಿ ಇದಾಗಲೇ ಹಲವಾರು ಸೆಲೆಬ್ರಿಟಿಗಳು ಬಂದಿದ್ದು, ಅದೇ ರೀತಿ ಸೂರಜ್​ ಮತ್ತು ರಾಶಿಕಾ ಶೆಟ್ಟಿಯನ್ನು ಪ್ರೊಮೋಷನ್​ಗಾಗಿ ಕರೆಸಲಾಗಿದೆ. ಸೆಲೆಬ್ರಿಟಿಗಳು ಚಿನ್ನ ಖರೀದಿ ಮಾಡಿದಂತೆ ತೋರಿಸಿದರೆ, ಜನರು ಆಕರ್ಷಿತರಾಗಿ ಖರೀದಿ ಮಾಡುತ್ತಾರೆ ಎನ್ನುವ ಕಾರಣಕ್ಕೆ ಹೀಗೆ ಚಿನ್ನ ಖರೀದಿ ಮಾಡಿದಂತೆ ತೋರಿಸಲಾಗುತ್ತದೆ ಅಷ್ಟೇ. ಹಿಂದೆ ಬಿಗ್​ಬಾಸ್​​ ವಿನ್ನರ್​ ಗಿಲ್ಲಿನಟನಿಗೆ ಕೆಜಿಗಟ್ಟಲೆ ಚಿನ್ನ ಹಾಕಿದಾಗ, ಅದನ್ನು ಅವರು ವಾಪಸ್​ ಮಾಡಿರಲಿಲ್ಲವೆ, ಇದೂ ಕೂಡ ಹಾಗೆನೇ.

56
ಜೋಡಿ ಸ್ಪಷ್ಟನೆ

ಇದಾಗಲೇ ಈ ಜೋಡಿ, ತಮ್ಮಿಬ್ಬರ ನಡುವೆ ಅಂಥದ್ದೇನೂ ಇಲ್ಲ, ಒಳ್ಳೆಯ ಗೆಳೆತನ ಅಷ್ಟೇ ಎಂದಿದೆ. ಸೂರಜ್​ ಅವರು ಎಷ್ಟು ಕಷ್ಟಪಟ್ಟು ಮೇಲಕ್ಕೆ ಬಂದಿದ್ದಾರೆ ಎನ್ನುವುದು ನನಗೆ ಗೊತ್ತಿದೆ. ಅದಕ್ಕಾಗಿಯೇ ಅವರ ಮೇಲೆ ಸ್ನೇಹ ಇರೋದು ನಿಜ. ಅವರ ಪವಿತ್ರ ಬಂಧನ ಸಿನಿಮಾ ಪ್ರಮೋಷನ್​ಗೂ ನಾನು ನನ್ನೆಲ್ಲಾ ಕಮಿಟ್​ಮೆಂಟ್​ ಬಿಟ್ಟು ಹೋಗಿದ್ದು ಕೂಡ ಇದೇ ಕಾರಣಕ್ಕೆ ಎಂದಿದ್ದರು ರಾಶಿಕಾ (Bigg Boss Rashika Shetty)

66
ರಾಶಿಕಾ ಹೇಳಿದ್ದೇನು?

ಬಿಗ್​ಬಾಸ್​ ಮನೆಯಲ್ಲಿ ನನ್ನ ಪವಿತ್ರ ಬಂಧನ ಯಾರ ಜೊತೆ ಎಂದು ಹೇಳುವುದಾದರೆ, ಅದು ಸೂರಜ್​ ಜೊತೆಗೆನೇ. ಅವರು ಬಿಗ್​ಬಾಸ್​ ಮನೆಗೆ ಬಂದಿರಲಿಲ್ಲವೆಂದರೆ, ನನಗೆ ಯಾರ ಜೊತೆನೂ ಫ್ರೆಂಡ್​ಷಿಪ್​ ಆಗ್ತಾ ಇರಲಿಲ್ಲ. ಯಾರ ಜೊತೆನೂ ಕಂಫರ್ಟ್​ ಎನ್ನಿಸುತ್ತಾ ಇರಲಿಲ್ಲ ಎಂದಿದ್ದರು. ಸೂರಜ್​ ಕೂಡ ತಾವಿಬ್ಬರೂ ಒಳ್ಳೆಯ ಫ್ರೆಂಡ್ಸ್​ ಅಷ್ಟೇ ಎಂದಿದ್ದಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories